Kerala: ಕಣಗಿಲೆ ಹೂವು ದೇಗುಲಗಳಲ್ಲಿ ಬಳಕೆಗೆ ನೀಷೇಧ; ಕಾರಣ ಇಲ್ಲಿದೆ

Share the Article

Kerala: ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧೀನದಲ್ಲಿ ಇರುವ ದೇಗುಲಗಳು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದೆಂದು ಆದೇಶ ಮಾಡಲಾಗಿದೆ.

ಇದನ್ನೂ ಓದಿ: South Actress: ಖ್ಯಾತ ನಟಿ ಪಕ್ಕದ ಮನೆಯ ಯುವಕನ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ಗೊತ್ತಾ? ಇದೊಂದು ವಿಚಿತ್ರ ಲವ್ ಸ್ಟೋರಿ!

ಕೆಲವೊಂದು ನಂಜಿನ ಅಂಶಗಳು ಕಣಗಿಲೆ (ಗಣಗಲೆ, ಕರವೀರ) ಹೂವಿನಲ್ಲಿ ಕಂಡು ಬಂದ ಕಾರಣ ಈ ನಿರ್ಧಾರ ಮಾಡಲಾಗಿದೆ.

ಅಲಪ್ಪುಳ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡಿದ ಕಣಗಿಲೆ ಹೂವನ್ನು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆಯೊಂದು ನಡೆದಿತ್ತು. ಈ ರೀತಿಯ ಘಟನೆ ಪಟ್ಟಣಂತಿಟ್ಟದಲ್ಲೂ ನಡೆದಿದೆ. ಹಾಗಾಗಿ ಕಣಗಿಲೆ ಹೂವನ್ನು ದೇಗುಲದಲ್ಲಿ ಬಳಸಬಾರದೆಂದು ಟಿಡಿಬಿ ಅಧ್ಯಕ್ಷ ಹೇಳಿದ್ದಾರೆ.

ಇದನ್ನೂ ಓದಿ: Pejavara Shri: ಅಯೋಧ್ಯೆಲ್ಲಿ ರಾಮ ಮಂದಿರ ಕಟ್ಟಿದ್ದು ಮೋದಿ ನೇತೃತ್ವದ ಕೇಂದ್ರ ಸರ್ಕಾರವಲ್ಲ – ಪೇಜಾವರ ಶ್ರೀ ಸ್ಟೇಟ್ಮೆಂಟ್ !!

ಈ ಹೂವಿನ ಬದಲಾಗಿ ಗುಲಾಬಿ, ತುಳಸಿ, ತೇಚಿ, ದಾಸವಾಳ, ಮಲ್ಲಿಗೆ ಹೂಗಳನ್ನು ಬಳಸಲು ಸೂಚಿಸಲಾಗಿದೆ.

ಕಣಗಿಲೆ ಹೂವಿನಲ್ಲಿ ಕಂಡು ಬಂದಿರುವ ವಿಷತ್ವದ ಕುರಿತು ಅಧ್ಯಯನ ಮಾಡಿರುವ ವೈದ್ಯರು, ಇದು ಆಲ್ಕಲಾಯ್ಡ್‌ ಕಾರ್ಡಿಯಾಕ್‌ ಗ್ಲೈಕೋಸೈಡ್‌ಗಳ ವರ್ಗದಲ್ಲಿ ಬರುತ್ತದೆ ಎಂದು ಹೇಳಿರುವ ಕುರಿತು ವರದಿಯಾಗಿದೆ. ನೆರಿಯಮ್‌ ಒಲಿಯಾಂಡರ್‌ನಲ್ಲಿರುವ ಈ ಆಲ್ಕಲಾಯ್ಡ್‌ಗಳು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಕಾಂಡದೊಳಗೆ ಲ್ಯಾಟೆಕ್ಸ್‌ನಲ್ಲಿ ಆಲ್ಕಲಾಯ್ಡ್‌ಗಳು ಹೆಚ್ಚಾಗಿದೆ. ಹೊಸ ತಳಿಯ ಕಣಗಿಲೆ ಗಿಡದಲ್ಲಿ ಈ ವಿಷಾಂಶ ಹೆಚ್ಚಿರುವ ಕುರಿತು ಸಂಶಯ ವ್ಯಕ್ತವಾಗಿದೆ. ಆದರೂ ಇದು ವೈಜ್ಞಾನಿಕವಾಗಿ ಇನ್ನೂ ದೃಢೀಕರಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Leave A Reply

Your email address will not be published.