Home News Lok Sabha Eelction 2024: ಕೊಪ್ಪಳ ಹಾಗೂ ರಾಯಚೂರಿನಲ್ಲಿ ಮತದಾನ ಮಾಡದೇ ದೂರ ಉಳಿದ ಮಂದಿ

Lok Sabha Eelction 2024: ಕೊಪ್ಪಳ ಹಾಗೂ ರಾಯಚೂರಿನಲ್ಲಿ ಮತದಾನ ಮಾಡದೇ ದೂರ ಉಳಿದ ಮಂದಿ

Lok Sabha Eelction 2024

Hindu neighbor gifts plot of land

Hindu neighbour gifts land to Muslim journalist

Lok Sabha Eelction 2024: ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಕೆಲ ಗ್ರಾಮದಲ್ಲಿ ಮತದಾರರು ಮತದಾನ ಮಾಡದೇ ದೂರ ಉಳಿದಿರುವ ಘಟನೆ ನಡೆದಿದೆ.

ಇದನ್ನೂ ಓದಿ:  Kedarnath Temple: ಕೇದರನಾಥ್ ಯಾತ್ರಿಕರಿಗೆ ಶುಭ ಸುದ್ದಿ : ಕೇದಾರನಾಥ ಧಾಮ್  ಮೇ 10ರಿಂದ ಭಕ್ತರ ದರ್ಶನಕ್ಕೆ ಮುಕ್ತ

ಕೆಲವು ದಿನಗಳ ಹಿಂದೆ ಗರ್ಭಿಣಿ ಮಹಿಳೆ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದ್ದ ಘಟನೆಯೊಂದು ನಡೆದಿತ್ತು. ಈ ಘಟನೆಯಿಂದ ಡಾ.ಕಾವೇರಿ ಶ್ಯಾವಿ ಅವರನ್ನು ವರ್ಗಾವಣೆ ಅಥವಾ ಅಮಾನತು ಮಾಡಲು ಒತ್ತಾಯಿಸಿ ಮತದಾನ ಪ್ರಕ್ರಿಯೆಯಿಂದ ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ ಜನರು ದೂರ ಉಳಿದಿದ್ದಾರೆ.

ಇದನ್ನೂ ಓದಿ: 5 Day Work Week: ಇನ್ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಕೇವಲ 5 ದಿನ ಕೆಲಸ!

18ನೇ ವಾರ್ಡ್‌ ವ್ಯಾಪ್ತಿ ಮತಗಟ್ಟೆ ಸಂಖ್ಯೆ 142 ರಲ್ಲಿ ಮತದಾನ ನಡೆದಿಲ್ಲ. ಒಟ್ಟು 862 ಮತದಾರರು ಇದ್ದು, ವೈದ್ಯರ ಅಮಾನತು ಮಾಡಿದರೆ ಅಮಾನತು ಮತದಾನ ಮಾಡುತ್ತೇವೆ ಇಲ್ಲವಾದರೆ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ ಇಲ್ಲಿನ ಜನ.

ಘಟನಾ ಸ್ಥಳಕ್ಕೆ ತಹಶೀಲ್ದಾರ ಸೇರಿ ಹಲವು ಅಧಿಕಾರಿಗಳು ಬಂದಿದ್ದು, ಜನರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ರಾಯಚೂರಿನ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮದ ಮತಗಟ್ಟೆ ಸಂಖ್ಯೆ 254, 255 ರಲ್ಲಿ ಮತದಾನ ಸ್ಥಗಿತಗೊಂಡಿದೆ.