Maruti Suzuki Cars: ವೈದ್ಯ, ಎಂಜಿನಿಯರ್‌, ಬ್ಯಾಂಕ್ ಮ್ಯಾನೇಜರ್ – ಯಾರನ್ನೇ ಕೇಳಿ, ಈ ಅಗ್ಗದ ಕಾರು ಇಷ್ಟವಾಗದ ಜನರೇ ಇಲ್ಲ: 25 ವರ್ಷಗಳಿಂದ ನಂ.1 ಕಾರು !

Maruti Suzuki Cars: ಬಜೆಟ್ ಕಾರುಗಳಿಗೆ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಯಾವಾಗಲೂ ಹೆಚ್ಚಿನ ಬೇಡಿಕೆ. ಇದರಲ್ಲಿ, ಕಾರ್ ಬ್ರಾಂಡಿನಲ್ಲಿ ಭಾರತೀಯರ ಕಣ್ಣಿಗೆ ಬೀಳುವ ಮೊದಲ ಬ್ರ್ಯಾಂಡ್ ಅದುವೇ ಭಾರತೀಯರ ಪ್ರೀತಿಯ ಹನುಮಾನ್ ಬ್ರಾಂಡಿನ ಮಾರುತಿ (Maruti Suzuki Cars)! ಅದರಲ್ಲೂ ಅದೆರಡು ಬ್ರ್ಯಾಂಡ್ ಅಂದ್ರೆ ಭಾರತೀಯರಿಗೆ ಅಚ್ಚು ಮೆಚ್ಚು. ಮೊದಲು ಮಾರುತಿ 800, ನಂತರ ವ್ಯಾಗನ್-ಆರ್ (Maruti Wagon-R) ಭಾರತೀಯರ ಪ್ರೀತಿಯ ಕಾರುಗಳು. ಯಾಕೆಂದರೆ ಸಣ್ಣ ಬಜೆಟ್ಟಿನ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು.

 

ಭಾರತೀಯ ವಾಹನ ಮಾಲೀಕರು ಬಜೆಟ್ ಮತ್ತು ಮೈಲೇಜ್ ಅನ್ನು ಮಾತ್ರ ನೋಡುತ್ತಿದ್ದರು ಇತ್ತೀಚಿಗೆ ಸಾಕಷ್ಟು ಬದಲಾವಣೆಯಾಗಿದ್ದರೂ ಸುರಕ್ಷತೆಯಂತಹ ವಿಷಯಗಳಲ್ಲಿ ಭಾರತೀಯರು ಯಾವತ್ತೂ ತಲೆಕೆಡಿಸಿಕೊಂಡವರಲ್ಲ. ಸುರಕ್ಷತೆಯಲ್ಲಿ ಹಿಂದೆ ಬಿದ್ದಿದ್ದರೂ ಭಾರತದ ಕಾರು ಮಾರುಕಟ್ಟೆಯಲ್ಲಿ ಈ ಎರಡು ಕಾರುಗಳು ಜನಪ್ರಿಯತೆ ಪಡೆದಿವೆ. ಅದರಲ್ಲೂ ಮಾರುತಿ ವ್ಯಾಗನ್-ಆರ್ ಇನ್ನೊಂದು ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ.

ಅಫೀಷಿಯಲ್ ಗಳ ಕಾರು
ಮಾರುತಿ ವ್ಯಾಗನ್ ಆರ್ ಅನ್ನು ಅಫೀಷಿಯಲ್ ಗಾಡಿ ಎಂದೇ ಕರೆಯಲಾಗುತ್ತದೆ. ಡಾಕ್ಟರ್ ಗಳು ಇಂಜಿನಿಯರ್ಗಳು ಲಾಯರುಗಳು, ಬ್ಯಾಂಕು ಕ್ಲರ್ಕ್ ಗಳು, ಮ್ಯಾನೇಜರ್ಗಳು ಹೀಗೆ ಹಲವು ತರದ ಆಫೀಸರುಗಳ ಪ್ರೀತಿಯ ಕಾರಿದು. 1999 ರಲ್ಲಿ ಬಿಡುಗಡೆಯಾಗಿ, ಸರಿ ಸುಮಾರು 25 ವರ್ಷಗಳ ನಂತರವೂ ತನ್ನ ಛಾಪನ್ನು ಉಳಿಸಿಕೊಂಡಿದೆ ಮಾರುತಿ ವ್ಯಾಗನ್ ಆರ್.

ಮಾರುತಿ ವ್ಯಾಗನ್-ಆರ್ (Maruti Wagon-R) ಬಿಡುಗಡೆಯಾಗಿ 25 ವರ್ಷಗಳಾದರೂ ಇಂದಿಗೂ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಮಾರುತಿ ಕಂಪನಿ ಪ್ರತಿ ತಿಂಗಳು ಅಂದಾಜು 15,000 ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ಈ ಮೊದಲೇ ಹೇಳಿದಂತೆ ಕಡಿಮೆ ಬಜೆಟ್‌, ಉತ್ತಮ ಮೈಲೇಜ್ ಮತ್ತು ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ. ಬಹುಶಹ ಇದೇ ಕಾರಣಕ್ಕೆ ಇರಬೇಕು ವೈದ್ಯರು ವಕೀಲರುಗಳು ಮತ್ತು ಆಫೀಸರ್ಗಳ ಅಚ್ಚುಮೆಚ್ಚಿನ ಬ್ರಾಂಡ್ ಇದು.

ಮಾರುತಿ ವ್ಯಾಗನ್ R ವಿಶೇಷತೆ
5 ಜನ ಕುಳಿತುಕೊಳ್ಳಬಹುದಾದ ಈ ಕಾರು ಮಾರುತಿ ವ್ಯಾಗನ್-ಆರ್ 6 ರಿಂದ 8 ಲಕ್ಷ ರುಪಾಯಿ ಬಜೆಟ್‌ನಲ್ಲಿ ಸಿಗುತ್ತದೆ. ಸಾಕಷ್ಟು ಸ್ಥಳಾವಕಾಶವನ್ನು ನೀಡುವುದರ ಜೊತೆಗೆ ಈ ಕಾರಿನಲ್ಲಿ ಲೆಗ್ ರೂಮ್ ಮತ್ತು ಹೆಡ್ ರೂಮ್ ಉತ್ತಮವಾಗಿರುತ್ತದೆ. ಜೊತೆಗೆ ಬೂಟ್ ಸ್ಪೇಸ್ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಸಹ ಸಾಕಷ್ಟು ಉತ್ತಮವಾಗಿದೆ. ಡ್ರೈವರ್ ಸೀಟ್ ಕೂಡ ಸರಿ ಹೊಂದಿಸಿಕೊಳ್ಳಬಹುದು, ಆದುದರಿಂದ ಕಂಫಾರ್ಟ್ ದೀರ್ಘ ಪ್ರಯಾಣ ಮಾಡಬಹುದು. ಮಾರುತಿ ವ್ಯಾಗನ್ ಕಾರು ಜನ ಓಡಾಡದ ಜೊತೆಗೆ ಸಣ್ಣ ಮಟ್ಟಿಗಿನ ಸರಕು ಸಾಗಾಣಿಕೆಗೂ ಸೈ ಅನ್ನುವ ಕಾರು. ಹಾಗಾಗಿ ಅದರ ಜನಪ್ರಿಯತೆ ಮುಗಿಲಿನಲ್ಲಿದೆ. ಈ ಕಾರಿನಲ್ಲಿ ಹಲವು ವೈಶಿಷ್ಟ್ಯಗಳಿವೆ. 7 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ ಇದೆ. ಜತೆಗೆ 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಸ್ಮಾರ್ಟ್ ಫೋನ್ ನ್ಯಾವಿಗೇಷನ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈಗ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್-ಹೋಲ್ಡ್ ಅಸಿಸ್ಟ್ (ಎಎಂಟಿ ರೂಪಾಂತರ ಮಾತ್ರ) ಜತೆಗೆ ಹಲವು ಸೇಫ್ಟಿ ಪಿಚರಗಳನ್ನು ಈ ಕಾರು ಒಳಗೊಂಡಿದೆ.

ಇಂಜಿನ್ ಸಾಮರ್ಥ್ಯ ಮತ್ತು ಬೆಲೆ
1.0 – ಲೀಟರ್ ಕೆ-ಸೀರಿಸ್ ಎಂಜಿನ್ ಅನ್ನು ನೀಡುತ್ತದೆ. ಉನ್ನತ ಮಾದರಿ 1.2 – ಲೀಟರ್ ಎಂಜಿನ್ ನೊಂದಿಗೆ ನೀಡಲಾಗುತ್ತದೆ. 1.0 – ಲೀಟರ್ ಎಂಜಿನ್‌ನಲ್ಲಿ ಸಿಎನ್‌ಜಿ ಆಯ್ಕೆ ಮಾಡಲು ಕೂಡಾ ಅವಕಾಶವಿದೆ. 1.2 ಲೀಟರಿನ ಪೆಟ್ರೋಲ್ ಎಂಜಿನ್ 88.5 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ಕೂಡ ಉತ್ತಮವಾಗಿದ್ದು, ಪೆಟ್ರೋಲ್‌ನಲ್ಲಿ 25 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ 35 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಮಾರುತಿ ವ್ಯಾಗನ್ ಆರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 5.54 ಲಕ್ಷದಿಂದ ರೂ.7.42 ಲಕ್ಷಗಳಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವೈರಲ್ ವಿಡಿಯೋದಲ್ಲಿ ಈ 3 ಮಹಿಳಾ ಸರ್ಕಾರಿ ನೌಕರರು !!

Leave A Reply

Your email address will not be published.