H D Revanna: ಸಾಕ್ಷಿ ಇಲ್ಲದೆ ಬಂಧನ, ಇದು ರಾಜಕೀಯ ಷಡ್ಯಂತ್ರ – ಅರೆಸ್ಟ್ ಬೆನ್ನಲ್ಲೇ ರೇವಣ್ಣ ಆಕ್ರೋಶ !!

 

 

H D Revanna: ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್ ಕೇಸ್ ವಿಚಾರವಾಗಿ ನಿನ್ನೆ ಎಚ್ ಡಿ ರೇವಣ್ಣ(H D Revanna) ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಆದರೀಗ ಇದೆಲ್ಲದರ ನಡುವೆ ರೇವಣ್ಣ ಅರೆಸ್ಟ್ ಆದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರಹಾಕಿದ್ದಾರೆ.

ಹೌದು, ಮಹಿಳೆ ಕಿಡ್ನಾಪ್‌ ಹಾಗೂ ಲೈಗಿಂಗ ದೌರ್ಜನ್ಯ ಪ್ರಕರಣದಲ್ಲಿ ಶನಿವಾರ ಸಂಜೆ ಎಸ್‌ಐಟಿ(SIT)ಯಿಂದ ಬಂಧನಕ್ಕೀಡಾಗಿರುವ ಶಾಸಕ ಎಚ್‌ಡಿ ರೇವಣ್ಣ ಅವರು ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪುರಾವೆ ಇಲ್ಲದೆ ನನ್ನ ಬಂಧನವಾಗಿದೆ, ಇದೊಂದು ರಾಜಕೀಯ ಷಡ್ಯಂತ್ರ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಂದಹಾಗೆ ಶಾಸಕ ಎಚ್‌ಡಿ ರೇವಣ್ಣ ಅವರನ್ನು ವೈದ್ಯಕೀಯ ತಪಾಸಣೆಗೆಂದು ಭಾನುವಾರ ಸಂಜೆ ಬೌರಿಂಗ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ರೇವಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದೊಂದು ರಾಜಕೀಯ ಪಿತೂರಿ. ಇಷ್ಟರಲ್ಲೇ ಎಲ್ಲವನ್ನೂ ಹೇಳ್ತೀನಿ. ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.