Madikeri: ಅತ್ತೆಯನ್ನು ಕೊಂದ ಸೊಸೆ; ಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆ, 15 ದಿನ ನಂತರ ಬಯಲಾಯ್ತು ಕೊಲೆಯ ಭೀಕರ ರಹಸ್ಯ

Share the Article

Madikeri: ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಐಮಂಡ ಪೂವಮ್ಮ (73) ಎಂಬುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರ ಸೊಸೆ ಬಿಂದು (23) ಎಂಬುವವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಶಿಕ್ಷಕ ವೃತ್ತಿ ಮಾಡುತ್ತಿರುವ ಪ್ರಸನ್ನ ಅವರ ಪತ್ನಿಯೇ ಬಿಂದು. ಇವರು ಎ.15 ರಂದು ಮೌಲ್ಯಮಾಪನ ಕರ್ತವ್ಯಕ್ಕೆಂದು ಮಡಿಕೇರಿಗೆ ಹೋಗಿದ್ದರು. ಅವರು ಹೊರಟ ನಂತರ ಬಿಂದು ಅವರು ಉಪಾಹಾರ ರೆಡಿ ಮಾಡಲು ಕರೆದಿದ್ದು, ಇದಕ್ಕೆ ಅತ್ತೆ ನಿರಾಕರಿಸಿದ್ದಾರೆ. ಈ ವಿಷಯಕ್ಕೆ ಅತ್ತೆ, ಸೊಸೆ ಮಧ್ಯೆ ಜಗಳ ನಡೆದಿತ್ತು.

ಇದನ್ನೂ ಓದಿ: ಹಲ್ಲಿಗಳು ದೇಹದ ಈ ಭಾಗಕ್ಕೆ ಬಿದ್ದರೆ ಅದೃಷ್ಟವಂತೆ; ಬೇಗ ಶ್ರೀಮಂತರಾಗ್ತಾರಂತೆ!

ಕೋಪಗೊಂಡ ಆರೋಪಿಯು ಮೊಬೈಲ್‌ನಿಂದ ಪೂವಮ್ಮ ಅವರ ತಲೆಯ ಹಿಂಭಾಗಕ್ಕೆ ಹೊಡೆದು, ಹಿಂತಿರುಗಿ ನೋಡದೇ ಕೋಣೆಯಿಂದ ಹೊರಗೆ ಬಂದಿದ್ದರು. ಇತ್ತ ಐಮಂಡ ಪೂವಯ್ಯ ಅವರ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಕುಸಿದು ಬಿದ್ದು ಅತ್ತೆ ಮೃತ ಹೊಂದಿದ್ದಾರೆ ಎಂದು ಬಿಂಬಿಸಿ ಅಂತ್ಯಕ್ರಿಯೆ ಮಾಡಿದ್ದರು. ಇತ್ತ ಪತಿಗೆ ಪತ್ನಿಯ ವರ್ತನೆಯಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬಂದಿದೆ. ಅನಂತರ ಪತಿ ಪ್ರಸನ್ನ ಅವರು ಎ.28 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸಿ ಆರೋಪಿ ಬಿಂದುವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಬಿಂದು ಅವರು ಬಿ.ಕಾಂ ಪದವೀಧರೆಯಾಗಿದ್ದು, ಇವರಿಗೆ ಒಂದೂವರೆ ವರ್ಷದ ಮಗು ಇದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉದ್ಯೋಗವನ್ನು ಹುಡುಕಿ ಹುಡುಕಿ ಸಾಕಾಗಿದ್ಯ?ಹಾಗಾದ್ರೆ ನಿಮಾಗಿ ಇಲ್ಲಿದೆ ಸುವರ್ಣಾವಕಾಶ!

Leave A Reply