Ramanagara: ರಾಮನಗರ ಮೇಕೆದಾಟು ಬಳಿ ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿನಿಯರೂ ಸೇರಿ ಐವರು ನೀರುಪಾಲು

Ramanagara: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನದಿಯಲ್ಲಿ ಈಜಲು ಹೋಗಿದ್ದ ಐವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಬೆಂಗಳೂರು ಮೂಲದ ಮೂವರು ಯುವಕರು, ಇಬ್ಬರು ಯುವತಿಯರು ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಮೇಕೆದಾಟು ಬಳಿ (Drown in Mekedatu) ಈ ದುರ್ಘಟನೆ ಸಂಭವಿಸಿದೆ.

 

ಮೃತರೆಲ್ಲರೂ 19 ರಿಂದ 21 ವರ್ಷ ಪ್ರಾಯದ ಒಳಗಿನ ವಿದ್ಯಾರ್ಥಿಗಳು. ಮೃತರನ್ನು ಮಂಡ್ಯ ಮೂಲದ ಚಿಕ್ಕಬಾಣಾವರ ಆರ್.ಆರ್ ಕಾಲೇಜಿನ 2ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಅರ್ಪಿತಾ ಎನ್.ಎಲ್, ಚಿತ್ರದುರ್ಗ ಮೂಲದ ವಿಜಯನಗರ ಸರ್ಕಾರಿ ಪದವಿ ಕಾಲೇಜಿನ ಬಿಸಿಎ 2ನೇ ವರ್ಷದ ವಿದ್ಯಾರ್ಥಿ ತೇಜಸ್ (21), ರಾಜಾಜಿನಗರ 2ನೇ ಹಂತದ ಕೆಎಲ್ಇ ಕಾಲೇಜಿನ ವರ್ಷ (20), ಬಿಹಾರ ಮೂಲದ ಮಲ್ಲೇಶ್ವರ ಸರ್ಕಾರಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಅಭಿಷೇಕ್ (20), ಆರ್.ಆರ್ ನಗರದ ಕೆಎಲ್ಇ ಕಾಲೇಜಿನ ನೇಹಾ (19) ಎಂದು ಗುರುತಿಸಲಾಗಿದೆ.

ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಲ್ಲಾ 5 ಜನರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರಕ್ಕೆ ತೆಗೆದಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹಗಳನ್ನು ದಯಾನಂದ ವಿದ್ಯಾಸಾಗರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೇಕೆದಾಟು ಬಳಿ ಕಾವೇರಿ ನದಿ ದಾಟುವಾಗ ಕಾಲುಜಾರಿ ನೀರಿಗೆ ಬಿದ್ದು ಐವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಒಟ್ಟು 12 ಕಾಲೇಜು ವಿದ್ಯಾರ್ಥಿಗಳು ಟಿಟಿ ವಾಹನದಲ್ಲಿ ಮೇಕೆದಾಟು ನೋಡಲು ಹೋಗಿದ್ದರು. ಸಂಗಮದಲ್ಲಿ ಕೈ ಹಿಡಿದು ಮತ್ತೊಂದು ದಡಕ್ಕೆ ಹೋಗುವಾಗ ದುರ್ಘಟನೆ ನಡೆದಿದೆ. ಒಬ್ಬರ ನಂತರ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದು ಈಜಲು ಬಾರದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿಗಳಿಂದ ದಾರಿ ತಪ್ಪಿದ್ದು ಹೆಣ್ಣುಮಕ್ಕಳಲ್ಲ, ದಾರಿ ಬಿಟ್ಟದ್ದು ನಿಮ್ಮದೇ ಕುಟುಂಬದ ಕುಡಿ- ಕುಮಾರಸ್ವಾಮಿಯನ್ನು ಲೇವಡಿ ಮಾಡಿದ ರಕ್ಷಿತ್ ಶಿವರಾo !

Leave A Reply

Your email address will not be published.