Parliment Election : ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇರುವ ಸವಾಲುಗಳಿವು !!

 

Parliment Election : ದೇಶದಲ್ಲಿ ಲೋಕಸಭಾ ಚುನಾವಣೆ(Parliment Election ) ಕಾವು ರಂಗೇರಿದಿ. ಪಕ್ಷಗಳ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಒಂದೆಡೆ ಮೋದಿ ಅಲೆಯ ಮೂಲಕ ಬಿಜೆಪಿ(BJP) ಚುನಾವಣೆಯಲ್ಲಿ ಸೆಣೆಸಲು ಅಣಿಯಾಗಿದ್ದರೆ, ತನ್ನದೇ ಗ್ಯಾರಂಟಿ, ಜೋಡೋ ಯಾತ್ರೆಗಳ ಮೂಲಕ ಕಾಂಗ್ರೆಸ್(Congress) ಹೋರಾಡಲು ತಯಾರಾಗಿದೆ. ಇದೆಲ್ಲದರ ನಡುವೆ ದಕ್ಷಿಣ ಭಾರತದತ್ತ ತನ್ನ ಚಿತ್ತ ನೆಟ್ಟಿರುವ ಬಿಜೆಪಿ ಕರ್ನಾಟಕ(Karnataka) ಹೊರತಾಗಿ ಇತರ ದಕ್ಷಿಣ ರಾಜ್ಯಗಳಲ್ಲಿ ತನ್ನ ಖಾತೆ ತೆರೆಯಲು ಶತಾಯ-ಗತಾಯ ಪ್ರಯತ್ನ ನಡೆಸಿದೆ. ಏನೇನು ತಯಾರಿ ಬೇಕು ಎಲ್ಲಾ ಮಾಡಿಕೊಂಡಿದೆ. ಹೀಗಾಗಿ ಕೆಲವು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿದೆ. ಆದರೂ ಕೂಡ ದಕ್ಷಿಣ ಭಾರತದಲ್ಲಿ(South India) ಬಿಜೆಪಿಗೆ ಕೆಲವು ಸವಾಲುಗಳು ಕಂಡಿತಾ ಇದೆ.

ಹೌದು, 2024ರ ಲೋಕಸಭಾ ಚುನಾವಣೆ ಕುರಿತು ಈಗಾಗಲೇ ಸಾಕಷ್ಟು ಮಾಧ್ಯಮಗಳು, ಪತ್ರಿಕೆಗಳು ದೇಶಾದ್ಯಂತ ಸಾಕಷ್ಟು ಸಮೀಕ್ಷೆ ನಡೆಸಿ 3ನೇ ಬಾರಿಗೆ ಮೋದಿ ಸರ್ಕಾರಕ್ಕೆ ಜೈ ಅಂದಿವೆ. ಆದರೆ ಅವುಗಳ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿರುವುದು ಉತ್ತರ ಭಾರತದಲ್ಲಿ ಮಾತ್ರ. ಜೊತೆಗೆ ಈಶಾನ್ಯ ರಾಜ್ಯಗಳಲ್ಲಿ. ಜೊತೆಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಇನ್ನಾವುದೇ ರಾಜ್ಯಗಳಲ್ಲೂ ‘ಕಮಲ’ ಅರಳುವ ಸುಳಿವು ಸಿಕ್ಕಿಲ್ಲ. ಅಂದರೆ ಕಳೆದ 10 ವರ್ಷಗಳಿಂದ ಉತ್ತರದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ದಕ್ಷಿಣ ಭಾಗ ಕಬ್ಬಿಣದ ಕಡಲೆಯಂತಾಗಿಯೇ ಉಳಿದಿದೆ. ಯಾಕೆಂದರೆ ಇಲ್ಲಿ ಅದರದ್ದೇ ಆದ ಸವಾಲುಗಳಿವೆ. ಹಾಗಿದ್ರೆ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗಿರುವ ಸವಾಲುಗಳೇನು? ನೋಡೋಣ ಬನ್ನಿ.

ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗೆ ಇರುವ ಸ್ಥಾನಮಾನ ಏನು?
• 2014 ರ ಚುನಾವಣೆ: ಈ ಚುನಾವಣೆಯಲ್ಲಿ ದಕ್ಷಿಣದಲ್ಲಿ ಬಿಜೆಪಿ 21 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಆದರಲ್ಲೂ ಕರ್ನಾಟಕದ್ದೇ ಹೆಚ್ಚು. ಇನ್ನು 2009 ರಲ್ಲಿ 19 ಸ್ಥಾನ, 2004 ಮತ್ತು 1999 ರಲ್ಲಿ 18 ಸ್ಥಾನ, 1998 ರಲ್ಲಿ 20 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಈ ರಾಜ್ಯಗಳಲ್ಲಿ ಇದಕ್ಕೂ ಮೊದಲು ನಡೆದ ಚುನಾವಣೆಗಳಲ್ಲಿ ಬಿಜೆಪಿ ಸಂಖ್ಯೆಯು 7 ಕ್ಕಿಂತ ಕಡಿಮೆ ಇತ್ತು.
• 2019 ಲೋಕಸಭಾ ಚುನಾವಣೆ: ಈ ಚುನಾವಣೆಲ್ಲಿ ಬಿಜೆಪಿ ಕಂಡು ಕೇಳರಿಯದ ಐತಿಹಾಸಿಕ ವಿಜಯ ಗಳಿಸಿದರೊ ದಕ್ಷಿಣ ಭಾರತದಲ್ಲಿ ಠುಸ್ ಎಂದಿತ್ತು. ಅಂದರೃ ಐದು ರಾಜ್ಯಗಳಲ್ಲಿನ 129 ಸ್ಥಾನಗಳಲ್ಲಿ ಬಿಜೆಪಿ ಕೇವಲ 29 ಸ್ಥಾನಗಳನ್ನು ಗೆದ್ದು ಸಮಾಧಾನ ಪಟ್ಟಿತ್ತು. ಅದರಲ್ಲೂ ಈ 29 ರಲ್ಲಿ ಕರ್ನಾಟಕದ್ದೇ 25 ಸ್ಥಾನಗಳಿದ್ದವು. ಉಳಿದ ನಾಲ್ಕು ಸ್ಥಾನ ತೆಲಂಗಾಣ ರಾಜ್ಯದ್ದು. ಆಶ್ಚರ್ಯ ಅಂದ್ರೆ ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಕೂಡ ಗೆದ್ದಿಲ್ಲ.

ದಕ್ಷಿಣದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವೇನು?
• ದಕ್ಷಿಣದ ರಾಜಕೀಯವು ಇಡೀ ದೇಶದಲ್ಲೇ ವಿಭಿನ್ನವಾಗಿದೆ. ಕರ್ನಾಟಕ ಹೊರತಾಗಿ ಪ್ರತಿ ರಾಜ್ಯದಲ್ಲಿ ಒಂದು ಅಥವಾ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಹೊಂದಿದೆ. ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಐಎಸ್‌ಆರ್‌ಸಿಪಿ, ಬಿಆರ್‌ಎಸ್‌ನಂತಹ ಪಕ್ಷಗಳು ಪ್ರಾದೇಶಿಕವಾಗಿ(Local Partys) ಪ್ರಬಲವಾಗಿವೆ. ಇವು ಕಮಲ ಅರಳಲು ತಡೆಯೊಡ್ಡುತ್ತಿವೆ.
• ದಕ್ಷಿಣ ಭಾರತದಲ್ಲಿ ಜನರು ಬಿಜೆಪಿಯನ್ನು ಹಿಂದಿ, ಹಿಂದೂ ಮತ್ತು ಹಿಂದುತ್ವದ ಪಕ್ಷವೆಂದು ನೋಡುತ್ತಾರೆ. ಈ ಗ್ರಹಿಕೆಯು ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವಂತೆ ಮಾಡಿದೆ.
• ಪ್ರಾದೇಶಿಕ ಪಕ್ಷಗಳು ರಾಜ್ಯಗಳಿಗೆ ಸೀಮಿತವಾಗಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡುತ್ತವೆ. ಆದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇದು ಅಸಾಧ್ಯ.
• ಕೆಲವು ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಭಾರತದ ಕಡೆ ನೀಡುವಷ್ಟು ಗಮನವನ್ನು ದಕ್ಷಿಣ ಭಾರತದ ಕಡೆ ನೀಡುತ್ತಿಲ್ಲ. ಅನುದಾನ, ಹಂಚಿಕೆ, ಯೋಜನೆ ರೂಪು ರೇಷೆ ಯಾವುದೇ ವಿಚಾರದಲ್ಲೂ ಇದು ಎದ್ದು ಕಾಣುತ್ತಿದೆ. ವರ್ಷದಿಂದ ವರ್ಕ್ಕೆ ಇದನ್ನು ಪ್ರತಿಪಕ್ಷಗಳು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.
• ದಕ್ಷಿಣ ಭಾರತೀಯರು ತಮ್ಮ ಭಾಷೆ, ಸಂಸ್ಕೃತಿಯನ್ನು ಬಹುವಾಗಿ ಪ್ರೀತಿಸುವವರು. ಈ ನಡುವೆ ಹಿಂದಿ ಹೇರಿಕೆ ವಿಚಾರ ಕೂಡ ಭಾರೀ ಸದ್ದು ಮಾಡಿ ಕೆಲವು ವಿರೋಧಕ್ಕೆ ಕಾರಣವಾಯಿತು.

ಕಾಂಗ್ರೆಸ್ ಗ್ಯಾರಂಟಿ ಹಾಗೂ ಇಂಡಿಯಾ ಒಕ್ಕೂಟದ ಹೊಡೆತ:
• ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತವಿದೆ. ಐದು ಗ್ಯಾರಂಟಿಗಳ ಕಾರಣ ಜನರು ಕಾಂಗ್ರೆಸ್‌ಗೆ 135 ಸ್ಥಾನ ನೀಡಿದ್ದಾರೆ. ಇದೇ ಗ್ಯಾರಂಟಿಗಳನ್ನು(Congress Guarantees ) ಮುಂದಿಟ್ಟುಕೊಂಡು ಕಾಂಗ್ರೆಸ್‌ ಲೋಕಸಭಾ ಚುನಾವಣೆಗೂ ಪ್ರಚಾರ ನಡೆಸುತ್ತಿದೆ.
• ತೆಲಂಗಾಣ(Telangana) ದಲ್ಲೂ ಇರುವುದು ಕಾಂಗ್ರೆಸ್ ಸರ್ಕಾರವೇ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟದ ಮಾದರಿ ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆಗೆ ಇದೂ ಕೈ ಹಿಡಿಯಬಹುದು.
• ಮುಖ್ಯವಾಗಿ ಇಂಡಿಯಾ ಮೈತ್ರಿ ಕೂಟಕ್ಕೆ ದಕ್ಷಿಣ ರಾಜ್ಯಗಳಲ್ಲಿನ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಕೈ ಜೋಡಿಸಿವೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಿರುವ ಕಾರಣ ಇದು ಬಿಜೆಪಿ ಸ್ಥಾನ ಕಸಿಯುತ್ತೆ.

ಇದಿಷ್ಟು ಹೊರತಾಗಿಯೂ ಆಂಧ್ರದ ಮಾಜಿ ಸಿಎಂ, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಜ್ಯದಿಂದ ಬಿಜೆಪಿ 6 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇರಳದಲ್ಲಿ ಬಿಜೆಪಿ ಅಸ್ತಿತ್ವ ಇಲ್ಲ. ಈ ಬಾರಿ ರಾಜ್ಯದಲ್ಲಿ 16 ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ ಅದೃಷ ಒಲಿದು, ಕಮಲ ಅರಳುವುದೇ ಎಂದು ಕಾದು ನೋಡಬೇಕಿದೆ.

ದಕ್ಷಿಣದಲ್ಲಿ ಬಿಜೆಪಿಗೆ ಕರ್ನಾಟಕವೇ ಹೆಬ್ಬಾಗಿಲು:
ಕರ್ನಾಟಕದಲ್ಲಿ ‘ಲೋಕ’ ರಾಜಕೀಯ ಚಿತ್ರಣವೇ ಬೇರೆ ಇದೆ. ಈ ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳನ್ನು ಕ್ರೋಢೀಕರಿಸಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಜೊತೆಗೆ ಯಡಿಯೂರಪ್ಪನವರ ನಂತರದ ಕರ್ನಾಟಕದಲ್ಲಿ ಬಿಜೆಪಿ ಉಳಿವು ತುಂಬಾ ಕಷ್ಷವಿದೆ ಎನ್ನಲಾಗಿದೆ.

ಯಾವ ರಾಜ್ಯದಲ್ಲಿ ಬಿಜೆಪಿಯ ಎಷ್ಟು ಅಭ್ಯರ್ಥಿಗಳು ಕಣಕ್ಕೆ?
ಕರ್ನಾಟಕ – 25
ಕೇರಳ – 16
ತಮಿಳುನಾಡು – 23
ತೆಲಂಗಾಣ – 17
ಆಂಧ್ರ ಪ್ರದೇಶ – 6

ದಕ್ಷಿಣ ರಾಜ್ಯಗಳಲ್ಲಿ ಯಾವ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?
• 2019 ರ ಚುನಾವಣೆ- 29
• 2014 ರ ಚುನಾವಣೆ- 21
• 2009 ರ ಚುನಾವಣೆ- 19

 

Leave A Reply

Your email address will not be published.