Putturu: ಪುತ್ತೂರಿನ ವಿವಾಹಿತ ಮಹಿಳೆ ಅನ್ಯಧರ್ಮದ ಯುವಕನ ಜೊತೆ ಪರಾರಿ; ಲವ್‌ಜಿಹಾದ್‌ ಪ್ರಕರಣ ಎಂದು ಪತಿ ಆರೋಪ

Share the Article

Putturu: ಪುತ್ತೂರಿನ ವಿವಾಹಿತ ಮಹಿಳೆಯೊಬ್ಬರು ಅನ್ಯಧರ್ಮದ ಯುವಕನೋರ್ವನೊಂದಿಗೆ ಪರಾರಿಯಾದ ಘಟನೆಯೊಂದು ನಡೆದಿರುವ ಕುರಿತು ವರದಿಯಾಗಿದೆ. ಮಹಿಳೆಯ ಪತಿ ಈ ಕುರಿತು ಪ್ರಶ್ನೆ ಮಾಡಲು ತೆರಳಿದಾಗ ಪತಿಗೆ ಹಲ್ಲೆ ನಡೆದಿದೆ. ಈ ಕುರಿತು ಇದೀಗ ಪ್ರಕರಣ ದಾಖಲಾಗಿದೆ. ಇದೊಂದು ಲವ್‌ಜಿಹಾದ್‌ ಪ್ರಕರಣವೆಂದು ಮಹಿಳೆಯ ಪತಿ ಆರೋಪಿಸಿದ್ದಾರೆ.

ಇದನ್ನೂ ಓದಿ: Neha Murder Case: ಮೊದಲು ನೇಹಾಳೇ ಬಂದು ಮಗನ ಫೋನ್ ನಂಬರ್ ತಗೊಂಡ್ಲು, ಫಸ್ಟ್ ಲವ್ ಮಾಡಿದ್ದು ಅವಳೇ – ಹಂತಕ ಫಯಾಜ್ ತಾಯಿ ಕಣ್ಣೀರು

ಪುತ್ತೂರಿನ ಕೆಮ್ಮಾಯಿ ನಿವಾಸಿ ಸುರೇಶ್‌ ಭಟ್‌ ಎಂಬವವರ ಪತ್ನಿ ಪ್ರತಿಮಾ ಭಟ್‌ ಅವರು ಪುತ್ತೂರಿನ ಕುರಿಯ ಬಳ್ಳಮಜಲು ನಿವಾಸಿ, ಆಂಬುಲೆನ್ಸ್‌ ಚಾಲಕ ಸಿರಾಜುದ್ದೀನ್‌ ಜೊತೆ ಪರಾರಿಯಾಗಿರುವ ಕುರಿತು ವರದಿಯಾಗಿದೆ. ಈ ಘಟನೆ ಕೆಲವು ದಿನದ ಹಿಂದೆ ನಡೆದಿದೆ. ಪುತ್ತೂರಿನ ಸಿಜು ಆಲಿಯಾಸ್‌ ಸಿರಾಜುದ್ದೀನ್‌ ಯಾನೆ ಬೈಂದೂರಿನ ಸೂರಜ್‌ ಪ್ರಕರಣದ ಪ್ರಮುಖ ಅರೋಪಿ ಎಂದು ಹೇಳಲಾಗಿದೆ.

ಇದನ್ನೂ ಓದಿ: Mangaluru: ಸಿಇಟಿ ಪರೀಕ್ಷೆ ಬರೆದ ಕಡಬದಲ್ಲಿ ಆಸಿಡ್‌ ದಾಳಿಗೊಳಗಾದ ವಿದ್ಯಾರ್ಥಿನಿ

ಪ್ರತಿಮಾ ಭಟ್‌ ಅವರ ಪತಿ ಸುರೇಶ್‌ ಭಟ್‌ ಅವರು ಪತ್ನಿಯನ್ನು ಪ್ರಶ್ನಿಸಲು ತೆರಳಿದ್ದ ಸಂದರ್ಭದಲ್ಲಿ ಅನ್ಯಕೋಮಿನ ಯುವಕ ನಿಂದಿಸಿದ್ದು, ಬೈದು, ಹಲ್ಲೆ ಮಾಡಿ, ಬೆದರಿಕೆಯೊಡ್ಡಿದ ಘಟನೆಯೊಂದು ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ದೂರು ದಾಖಲಾಗಿದೆ.

Leave A Reply