Mangaluru: ಸಿಇಟಿ ಪರೀಕ್ಷೆ ಬರೆದ ಕಡಬದಲ್ಲಿ ಆಸಿಡ್‌ ದಾಳಿಗೊಳಗಾದ ವಿದ್ಯಾರ್ಥಿನಿ

Mangaluru: ಕಡಬದಲ್ಲಿ ಇತ್ತೀಚೆಗೆ ಕಾಲೇಜಿನಲ್ಲಿ ಪರೀಕ್ಷೆ ತಯಾರಿ ಮಾಡಲೆಂದು ಕುಳಿತಿದ್ದ ವಿದ್ಯಾರ್ಥಿನಿಯ ಮೇಲೆ ಆಸಿಡ್‌ ದಾಳಿ ನಡೆದಿತ್ತು. ಇದೀಗ ವಿದ್ಯಾರ್ಥಿನಿ ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್‌ ಮೂಲಕ ತೆರಳಿ ಸಿಇಟಿ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ.

ಇದನ್ನೂ ಓದಿ: Milk: ನೀವು ಪ್ರತಿದಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದ? : ವೈದ್ಯರು ಏನು ಹೇಳುತ್ತಾರೆ? : ಇಲ್ಲಿ ತಿಳಿಯಿರಿ

ಮಾ.4 ರಂದು ಆರೋಪಿ ಅಬಿನ್‌ ಎಂಬಾತ ವಿದ್ಯಾರ್ಥಿನಿ ಮೇಲೆ ಕಾಲೇಜು ಆವರಣದಲ್ಲೇ ಪರೀಕ್ಷೆ ತಯಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಆಸಿಡ್‌ ಎರಚಿದ್ದ. ಇದರಿಂದ ಇಬ್ಬರು ಸಹಪಾಠಿ ಜೊತೆಗೆ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಸಂತ್ರಸ್ತ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಕೆ ಇನ್ನೂ ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇದನ್ನೂ ಓದಿ: Neha Murder Case: ಮೊದಲು ನೇಹಾಳೇ ಬಂದು ಮಗನ ಫೋನ್ ನಂಬರ್ ತಗೊಂಡ್ಲು, ಫಸ್ಟ್ ಲವ್ ಮಾಡಿದ್ದು ಅವಳೇ – ಹಂತಕ ಫಯಾಜ್ ತಾಯಿ ಕಣ್ಣೀರು

ಈಕೆ ಆಸ್ಪತ್ರೆಯಲ್ಲೇ ಸಿಇಟಿ ಪರೀಕ್ಷೆಯ ತಯಾರಿಯನ್ನು ಐಸೋಲೇಶನ್‌ ವಾರ್ಡ್‌ನಲ್ಲಿ ಇದ್ದೇ ಮಾಡಿದ್ದಳು. ಈಕೆ ಹಾಗೂ ಇಬ್ಬರು ಸಹಪಾಠಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ನಿಗದಿ ಮಾಡಲಾಗಿತ್ತು. ಆದರೆ ವೈದ್ಯರು ಬಾಲಕಿಗೆ ದೂರ ಪ್ರಯಾಣ ಮಾಡದಂತೆ ಸಲಹೆ ನೀಡಿದ್ದರ ಕಾರಣ ದ.ಕ. ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.‌ ರಮ್ಯಾ ಅವರ ಬಳಿ ಈ ವಿಷಯವನ್ನು ಗಮನಕ್ಕೆ ತಂದಿದ್ದರು.

ಅನಂತರ ಈಕೆಗೆ ಮಂಗಳೂರಿನ ಆಸ್ಪತ್ರೆಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಇರುವ ನಂತೂರು ಪದವು ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು.

ಬಾಲಕಿ ತನ್ನ ತಾಯಿ ಜೊತೆ ಆಂಬ್ಯುಲೆನ್ಸ್‌ನಲ್ಲಿ ಕಾಲೇಜಿಗೆ ಬಂದು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದು. ನಂತರ ಮಧ್ಯಾಹ್ನ 12.15 ಕ್ಕೆ ಆಸ್ಪತ್ರೆಗೆ ಹೋಗಿ 2.30 ಕ್ಕೆ ಮತ್ತೆ ಬಂದು ಪರೀಕ್ಷೆ ಬರೆದಿದ್ದು, ನಂತರ ಶುಕ್ರವಾರ ಕೂಡಾ ಪರೀಕ್ಷೆ ಬರೆದಿದ್ದಾಳೆ.

ಎಪ್ರಿಲ್‌ 29 ರಂದು ಪ್ರಾರಂಭವಾಗುವ ಪಿಯುಸಿ ಮರು ಪರೀಕ್ಷೆಗೂ ಸಂತ್ರಸ್ತೆ ಜೊತೆ ಇಬ್ಬರು ಸಹಪಾಠಿಗಳು ಅರ್ಜಿ ಸಲ್ಲಿಸಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ಮರು ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ.

Leave A Reply

Your email address will not be published.