Neha Hiremath Murder Case: ನೇಹಾ ಹಿರೇಮಠ ಕೊಲೆ ಪ್ರಕರಣ; ಎಫ್‌ಐಆರ್‌ನಲ್ಲಿ ಮಹತ್ವದ ಮಾಹಿತಿ ಬಹಿರಂಗ

Neha Hiremath Murder Case: ನನ್ನ ಮಗಳ ಹತ್ಯೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ನೇಹಾ ತಂದೆ ನಿರಂಜನ್‌ ಅವರು ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಿ ರಿಪೋರ್ಟ್‌ ಹಾಕಲು ಸರಕಾರ ಕುತಂತ್ರ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Snakes: ಹಾವುಗಳು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತವೆ? : ಎಲ್ಲಿ ಮಲಗುತ್ತವೆ ಗೊತ್ತಾ? : ಇಲ್ಲಿದೆ ವಿಶಿಷ್ಟ ಮಾಹಿತಿ

ಸಿಎಂ, ಗೃಹಸಚಿವರು, ನನ್ನ ಮಗಳು ಲವ್‌ ಮಾಡುತ್ತಿದ್ದಳು ಎಂದು ಹೇಳಿದ್ದಾರೆ. ಇವರ ಹೇಳಿಕೆಯಿಂದ ನನ್ನ ಮನೆತನಕ್ಕೆ ಕಳಂಕ ಬಂದಿದೆ. ಈ ರಾಜಕೀಯ ನಿಲ್ಲದಿದ್ದರೆ ಸುಮ್ನಿರಲ್ಲ ಎಂದು ನಿರಂಜನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Astro Tips: ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು, ಅತ್ತೆ ಸೊಸೆಯ ಜಗಳ ಮಾಯವಾಗುತ್ತೆ!

ಈ ಎಲ್ಲಾ ಘಟನೆಗಳ ನಡುವೆ ನೇಹಾ ಕೊಲೆ ಪ್ರಕರಣ ಕಾಂಗ್ರೆಸ್‌ಗೆ ತಡೆಯಾಗುತ್ತಾ ಎನ್ನುವ ಮಾತೊಂದು ಕೇಳಿ ಬರುತ್ತಿದೆ. ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ಲೀಡರ್ಸ್‌ ಇದೊಂದು ಲವ್‌ ಜಿಹಾದ್‌ ಎಂದು ಆರೋಪ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಲಿಂಗಾಯತ ಮತ ದೂರವಾಗುವ ಭಯ ಎದುರಾಗಿದೆ ಎನ್ನಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ಮದುವೆ ಮಾಡಿಕೊಡಿ ಎಂದು ನೇಹಾಳ ಪೋಷಕರಿಗೆ ಪೀಡಿಸುತ್ತಿದ್ದ ಎಂದು ದಾಖಲಾಗಿದೆ. ನೇಹಾಳನ್ನು ಪ್ರೀತಿ ಮಾಡುತ್ತಿದ್ದು, ಮದುವೆ ಮಾಡಿ ಕೊಡಿ ಎಂದು ಬೆನ್ನು ಬಿದ್ದಿದ್ದ. ನಾಲ್ಕೈದು ತಿಂಗಳಿನಿಂದ ಮದುವೆಗೆ ಬೆನ್ನು ಬಿದ್ದಿದ್ದ. ಆದರೆ ನೇಹಾ ಪೋಷಕರು, ನನ್ನ ಮಗಳು ನಿನ್ನನ್ನು ಇಷ್ಟಪಟ್ಟಿಲ್ಲ. ಹೆಚ್ಚಿನ ವ್ಯಾಸಂಗ ಮಾಡುವುದಿದೆ ಎಂದು ಫಯಾಜ್‌ ಕುಟುಂಬಕ್ಕೆ ಹೇಳಿದ್ದರು. ಈ ಕುರಿತು ಫಯಾಜ್‌ ತಂದೆ-ತಾಯಿ ದೂರವಾಣಿ ಕರೆ ಮಾಡಿ ನೇಹಾ ಪೋಷಕರು ಹೇಳಿರುವುದಾಗಿ ವರದಿಯಾಗಿದೆ.

ಆದರೂ ಫಯಾಜ್‌ ನೇಹಾಗೆ ಬೆದರಿಕೆ ಹಾಕಿದ್ದು, ನನ್ನನ್ನು ಮದುವೆಯಾಗದಿದ್ದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಹೇಳಿದ್ದಾನಂತೆ. ಇದನ್ನು ನೇಹಾ ಪೋಷಕರ ಗಮನಕ್ಕೆ ತಂದಿದ್ದಾಳೆ. ಈ ಕುರಿತು ಎಫ್‌ಐಆರ್‌ನಲ್ಲಿ ನೇಹಾ ತಾಯಿ ಗೀತಾ ಅವರು ಉಲ್ಲೇಖಿಸಿರುವ ಕುರಿತು ಮಾಧ್ಯಮವೊಂದು ಪ್ರಕಟ ಮಾಡಿದೆ.

Leave A Reply

Your email address will not be published.