Neha Hiremath: ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ- ಜಿ ಪರಮೇಶ್ವರ್ ‌

Neha Hiremath: ಗುರುವಾರ ಹುಬ್ಬಳ್ಳಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಕುರಿತು ಗೃಹಸಚಿವ ಜಿ ಪರಮೇಶ್ವರ್‌ ಅವರು ಹೇಳಿಕೆಯೊಂದನ್ನು ನೀಡಿದ್ದರು. ವೈಯಕ್ತಿಕ ಕಾರಣಗಳಿಗೆ ಆಗಿರುವ ಹತ್ಯೆ ಎಂದು ಹೇಳಿದ್ದು, ಇದರಿಂದ ಯುವತಿಯ ತಂದೆ-ತಾಯಿ ಮತ್ತು ಹುಬ್ಬಳ್ಳಿ ಮಹಿಳೆಯರ ತೀವ್ರ ಆಕ್ರೋಷಕ್ಕೆ ಒಳಗಾಗಿದ್ದ ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Health Care: ಕುಡಿಯುವುದನ್ನು 1 ತಿಂಗಳು ಬಿಟ್ಟು ನೋಡಿ, ಏನೆಲ್ಲಾ ನಿಮ್ಮ ದೇಹದಲ್ಲಿ ಮ್ಯಾಜಿಕ್ ಆಗುತ್ತೆ ಅಂತ!

ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ನನ್ನ ಮಾತುಗಳಿಂದ ನೇಹಾ ತಂದೆ ತಾಯಿಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hubballi: ನೇಹಾ ಮತ್ತು ಫಯಾಜ್‌ ನಡುವಿನ ಸಲುಗೆಯ ಫೊಟೋ ವೈರಲ್‌

ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸದಸ್ಯರು ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕಿದ್ದರ ಕುರಿತು, ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಾನಾಗಲೀ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು. ನಾವು ಹಗುರವಾದ ಹೇಳಿಕೆ ನೀಡುವುದಿಲ್ಲ. ನನಗಿದ್ದ ಮಾಹಿತಿಯನ್ನು ಆಧರಿಸಿ ನಿನ್ನೆ ಹೇಳಿಕೆ ನೀಡಿದ್ದೆ. ತನಿಖೆ ನಡೆಯುತ್ತಿದ್ದು, ಅದು ಮುಗಿದ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದರು.

Leave A Reply

Your email address will not be published.