Shilpa Shetty: ಶಿಲ್ಪಾ ಶೆಟ್ಟಿಗೆ ಇಡಿ ಶಾಕ್‌; 98 ಕೋಟಿ ರೂಪಾಯಿ ಆಸ್ತಿ ಸೀಜ್‌

Shilpa Shetty: ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿಗೆ ಇಡಿ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿಲ್ಪಾ ಹಾಗೂ ಪತಿ ರಾಜ್‌ ಕುಂದ್ರಾಗೆ ಸೇರಿದ ಸುಮಾರು 98 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಜುಹುದಲ್ಲಿ ಇರುವ ಫ್ಲ್ಯಾಟ್‌, ಪುಣೆಯಲ್ಲಿರುವ ಬಂಗಲೆ, ರಾಜ್‌ಕುಂದ್ರಾ ಹೆಸರಿನಲ್ಲಿರುವ ಶೇರುಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: Delhi: ಬಿಕನಿ ತೊಟ್ಟು ಬಸ್ಸಿನಲ್ಲಿ ಪುರುಷರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವತಿ – ವಿಡಿಯೋ ವೈರಲ್

ಏನಿದು ವಿಷಯ?

2017 ರಲ್ಲಿ 6600 ಕೋಟಿ ರುಪಾಯಿಯನ್ನು ರಾಜ್‌ಕುಂದ್ರ ಹಾಗೂ ಇತರರು ಬಿಟ್‌ಕಾಯಿನ್‌ ಮೂಲಕ ಸಂಪಾದನೆ ಮಾಡಿದ್ದರು. ಜೊತೆಗೆ ತಿಂಗಳಿಗೆ ಶೇ.10ಪಾವತಿ ಮಾಡುವುದಾಗಿ ಆಮಿಷ ನೀಡಿದ್ದರು. ಇದು ಬಿಟ್‌ಕಾಯಿನ್‌ ಹಗರಣ ಎಂದು ಆರೋಪ ಮಾಡಲಾಗಿದೆ. ಬಿಟ್‌ಕಾಯಿನ್‌ ಪ್ರಕರಣದಿಂದ ರಾಜ್‌ಕುಂದ್ರಾ ಪ್ರಸ್ತುತ 150 ಕೋಟಿ ಲಾಭ ಗಳಿಸುತ್ತಿದ್ದಾರೆ ಎಂದು ಇಡಿ ಹೇಳಿದೆ.

ಇದನ್ನೂ ಓದಿ: Voting Ink: ಮತದಾನದಂದು ಹಾಕಿದ ನೀಲಿ ಶಾಯಿ ಎಷ್ಟು ದಿನ ಆದ್ರೂ ಬೆರಳಿನಿಂದ ಹೋಗುವುದೇ ಇಲ್ಲ ಯಾಕೆ?

ಈ ಹಗರಣದಲ್ಲಿ ಶಿಲ್ಪಾ ಶೆಟ್ಟಿ, ರಾಜ್‌ಕುಂದ್ರಾ ಹೆಸರಿತ್ತು. ಇದು ಸಾವಿರಾರು ಕೋಟಿ ಹಗರಣದ ಆರೋಪವಾಗಿದೆ. ಹೀಗಾಗಿ ಇಬ್ಬರಿಗೂ ಇಡಿ 2018 ರಲ್ಲಿ ಸಮನ್ಸ್‌ ನೀಡಿತ್ತು. ಇವರನ್ನು ಪ್ರಶ್ನೆ ಕೂಡಾ ಮಾಡಲಾಗಿತ್ತು. ಆ ಸಮಯದಲ್ಲಿ ಅಮಿತ್‌ ಭಾರಧ್ವಾಜ್‌ ಪ್ರಮುಖ ಆರೋಪಿನ್ನು ಬಂಧನ ಮಾಡಲಾಗಿತ್ತು.

gatbitcoin.com ಎಂಬ ವೆಬ್‌ಸೈಟ್‌ ಮೂಲಕ ಕೋಟ್ಯಾಂತರ ಹಣ ವಂಚಿಸಲಾಗಿದೆ. ಈ ಪ್ರಕರಣದಲ್ಲಿ ಕುಂದ್ರಾ ಅಪರಾಧಿಯೇ ಅಥವಾ ಹೂಡಿಕೆದಾರನೇ ಎಂದು ಇನ್ನೂ ತಿಳಿದು ಬಂದಿಲ್ಲ.

Leave A Reply

Your email address will not be published.