Jai Sri Ram Slogan: ಜೈ ಶ್ರೀರಾಮ್‌ ಘೋಷಣೆ ಕೂಗಿದ ಯುವಕರಿಗೆ ಮುಸ್ಲಿಂ ಯುವಕರಿಂದ ನಿಂದನೆ, ಹಲ್ಲೆ

Jai Sri Ram Slogan: ಬುಧವಾರ (ಇಂದು) ಶ್ರೀ ರಾಮ ನವಮಿಯ ದಿನದಂದು ಜೈ ಶ್ರೀರಾಮ ಎಂದು ಮೂವರು ಹಿಂದೂ ಯುವಕರು ಕಾರಿನಲ್ಲಿ ಘೋಷಣೆ ಕೂಗಿದ್ದು, ಆ ಸಂದರ್ಭದಲ್ಲಿ ಕಾರನ್ನು ಅಡ್ಡಗಟ್ಟಿದ ಮುಸ್ಲಿಂ ಯುವಕರ ಗುಂಪು ಇಲ್ಲಿ ಶ್ರೀರಾಮ್‌ ಎನ್ನಂಗಿಲ್ಲ, ಓನ್ಲಿ ಅಲ್ಲಾ…ಅಲ್ಲಾ ಹು ಅಕ್ಬರ್‌ ಎನ್ನಬೇಕು ಎಂದು ಹೇಳಿ ಹಲ್ಲೆ ಮಾಡಿದ ಘಟನೆಯೊಂದು ನಡೆದಿದೆ.

ಈ ಘಟನೆ ನಡೆದಿರುವುದು ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿಯಲ್ಲಿ. ಬುಧವಾರ ಮಧ್ಯಾಹ್ನ ಮೂವರು ಬಾಲಕರು ಕಾರಿನಲ್ಲಿ ಹೋಗುತ್ತಿರುವಾಗ ಜೈ ಶ್ರೀರಾಮ್‌ ಎಂದು ಕೂಗಿದ್ದಾರೆ. ಆವಾಗ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರು ಕಾರನ್ನು ಅಡ್ಡಗಟ್ಟಿ, ಗಲಾಟೆ ಪ್ರಾರಂಭ ಮಾಡಿದ್ದಾರೆ. ಕಾರಿನ ಬಳಿಗೆ ಬಂದ ಯುವಕರು ಏನು ನೀವು ಜೈ ಶ್ರೀರಾಮ್‌ ಎಂದು ಹೇಳಬೇಕಾ? ಇಲ್ಲಿ ಜೈ ಶ್ರೀರಾಮ್‌ ಇಲ್ಲ..ಓನ್ಲೀ ಅಲ್ಲಾ..ಅಲ್ಲಾಹು ಅಕ್ಕಬರ್‌ ಎಂದು ಹೇಳಬೇಕು ಎಂದು ಹೇಳುತ್ತಾ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Bengaluru: ಮಗವನ್ನು ಸ್ಕೂಟರಿನ ಸೈಡ್‌ ಸ್ಟ್ಯಾಂಡ್‌ ಹತ್ತಿರದ ಫೂಟ್‌ ರೆಸ್ಟಲ್ಲಿ ನಿಲ್ಲಿಸಿ ಸವಾರಿ; ವೀಡಿಯೋ ವೈರಲ್‌

ನಮ್ಮ ಹಬ್ಬ ನಾವು ಏನಾದ್ರೂ ಮಾಡ್ತೀವಿ. ನಿಮ್ಮ ಹಬ್ಬದಲ್ಲಿ ಹೀಗೆ ಬಂದು ನಾವೇನಾದರೂ ಮಾಡ್ತೀವಾ? ಎಂದು ಪ್ರಶ್ನೆ ಮಾಡಿದ್ದಾರೆ ಕಾರಿನಲ್ಲಿದ್ದ ಹಿಂದೂ ಯುವಕರು. ನಂತರ ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದು, ಮುಸ್ಲಿಂ ಯುವಕರು ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಮುಂದಾದಾಗ, ಇವರೂ ಕೂಡಾ ಕಾರಿನಿಂದ ಇಳಿದು ಹೊರಗೆ ಬಂದು ಹೊಡೆದಾಡಿಕೊಂಡಿದ್ದಾರೆ.

ಇದೀಗ ಕಾರಿನಲ್ಲಿದ್ದ ಯುವಕರು ವಿದ್ಯಾರಣ್ಯಪುರ ಪೊಲೀಸ್‌ ಠಾಣೆಗೆ ಬಂದು ದೂರು ದಾಖಲು ಮಾಡಿದ್ದು, ಪೊಲೀಸರು ಪುಂಡಾಟ ಮಾಡಿದವರ ಹುಡುಕಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬೇಯಿಸಿ ತಿನ್ನುವ ಹಾಗಿಲ್ಲ!ಹುಷಾರ್

Leave A Reply

Your email address will not be published.