Abhradeep Saha Death: ಖ್ಯಾತ ಯೂಟ್ಯೂಬರ್‌ 27 ವರ್ಷದ ಆಂಗ್ರಿ ರ್ಯಾಂಟ್‌ಮ್ಯಾನ್‌ ಸಾವು

Abhradeep Saha Death: ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಮಾತಿನ ಧಾಟಿಯಿಂದ ಜನಪ್ರಿಯ ಸಿನಿಮಾಗಳ ರಿವ್ಯೂ ನೀಡುತ್ತಿದ್ದ ಯೂಟ್ಯೂಬರ್‌ ಆಂಗ್ರಿ ರ್ಯಾಂಟ್‌ಮ್ಯಾನ್‌ ಎಂದೇ ಫೇಮಸ್‌ ಆಗಿದ್ದ ಇವರು ತಮ್ಮ 27 ನೇ ವಯಸ್ಸಿನಲ್ಲಿಯೇ ಸಾವಿಗೀಡಾಗಿದ್ದಾರೆ. ನೆಟ್ಟಿಗರು ಇದೀಗ ಅಚ್ಚರಿಯಲ್ಲಿಯೇ ಸಂತಾಪ ಸೂಚನೆ ನೀಡುತ್ತಿದ್ದಾರೆ.

ಯೂಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್‌ ಮತ್ತು ಸಬ್‌ಸ್ಕೈಬರ್ಸ್‌ ಹೊಂದಿರುವ ಅಬ್ರದೀಪ್‌ ಸಹಾ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಕೂಡಾ ಒಳಗಾಗಿದ್ದರು. ಆದರೆ ಎ.16 ರಂದು ರಾತ್ರಿ ಅವರು ಸಾವಿಗೀಡಾಗಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಯುವ ನೇತಾರ’ ರಾಹುಲ್ ಗಾಂಧಿಗೆ 10 ಪ್ರಶ್ನೆ ಕೇಳಿದ ಬಿಜೆಪಿ !! ಒಂದೊಂದು ಪ್ರಶ್ನೆಯೂ ಬೆಂಕಿ ಮಾತ್ರ

ಅಬ್ರದೀಪ್‌ ಯಶ್‌ ನಟನೆಯ ಕೆಜಿಎಫ್‌ ಸಿನಿಮಾವನ್ನು ಕೂಡಾ ವಿಮರ್ಶೆ ಮಾಡಿದ್ದು, ಇವರ ವಿಮರ್ಶೆಗೆ ಹೊಂಬಾಳೆ ಫಿಲಂಸ್‌ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಬ್ರದೀಪ್‌ ಬಹು ಅಂಗಾಂಗಳ ಸಮಸ್ಯೆಯನ್ನು ಎದುರಿಸುತ್ತಿದ್ದರು. ಹಾಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಕಾರ್ಡಿಯಿಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಸರ್ಜರಿ ಮಾಡಲಾಗಿದ್ದು, ನಂತರ ಅವರನ್ನು ಐಸಿಯು ವೆಂಟಿಲೇಟರ್‌ ಸಹಾಯದಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಎ.16 ರಂದು ನಿಧನ ಹೊಂದಿದರು.

https://twitter.com/ElMarwadi/status/1780510693256745430

 

Leave A Reply

Your email address will not be published.