Moodabidre: ಮೆದುಳು ಜ್ವರ ಉಲ್ಬಣಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವು

Moodabidre: ಮೆದುಳು ಜ್ವರ ಹೆಚ್ಚಾಗಿ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆಯೊಂದು ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ (15) ಮೃತಪಟ್ಟಾಕೆ. ಶಿರ್ತಾಡಿ ಮೌಂಟ್‌ ಕಾರ್ಮೆಲ್‌ ಹೈಸ್ಕೂಲ್‌ನ 10ನೇ ತರಗತಿಯಲ್ಲಿ ಈಕೆ ವಿದ್ಯಾಭ್ಯಾಸ ಮಾಡುತ್ತಿದ್ದು, ಜ್ವರ ಕಾಣಿಸಿಕೊಂಡ ನಂತರ ಅದು ಉಲ್ಭಣಿಸಿದ್ದು ತಲೆಗೇರಿದ ಕಾರಣ ಅಸ್ವಸ್ಥರಾಗಿದ್ದು, ನಂತರ ಆಕೆಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: Vitla: ಅರಣ್ಯ ಪ್ರದೇಶದಲ್ಲಿ ಭಾರೀ ಬೆಂಕಿ ಅವಘಡ; ಸುಟ್ಟು ಕರಕಲಾದ ಗಿಡ ಮರಗಳು

ಸ್ವಸ್ತಿ ಶೆಟ್ಟಿ ಉತ್ತಮ ತ್ರೋಬಾಲ್‌ ಆಟಗಾರ್ತಿಯಾಗಿದ್ದಿರುವುದರ ಜೊತೆಗೆ ಉತ್ತಮ ನೃತ್ಯಪಟುವೂ ಆಗಿದ್ದರು. ಇವರ ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಕೆಲಸದಲ್ಲಿದ್ದು, ತಾಯಿ ಸರಿತಾ ಶೆಟ್ಟಿ ಅವರು ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಉದ್ಯೋಗಿಯಾಗಿದ್ದಾರೆ.

ಇದನ್ನೂ ಓದಿ: Box Office Collection: ರಿಲೀಸ್ ಗೂ ಮುನ್ನವೆ 1000 ಕೋಟಿ ದಾಖಲೆ ಬರೆದ ಸಿನಿಮಾವಿದು! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

Leave A Reply

Your email address will not be published.