Rahul Gandhi: ಕಾಂಗ್ರೆಸ್’ಗೆ ರಾಹುಲ್ ಗಾಂಧಿ ರಾಜೀನಾಮೆ? ವೈರಲ್ ವಿಡಿಯೋ ಅಸಲತ್ತೇನು ?

Rahul Gandhi: ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಕುರೆತು ಒಂದು ವಿಡಿಯೋ ವೈರಲಾಗುತ್ತಿದ್ದು, ರಾಹುಲ್ ಗಾಂಧಿಯವರು(Rahul Gandhi) ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಆದರೆ ಈಗ ಈ ವೈರಲ್ ವಿಡಿಯೋದ ನಿಜ ಬಣ್ಣ ಬಯಲಾಗಿದೆ.

ಇದನ್ನು ಓದಿ: Mangaluru: ಪ್ರಧಾನಿ ಮೋದಿ ರೋಡ್ ಶೋ ವೇಳೆ ಮಂಗಳೂರಲ್ಲಿ ಅಗ್ನಿ ಅವಘಡ !!

https://x.com/the_hindu/status/1775476479163265290?t=SbhTEA8nbIuHBv1p2iYUtg&s=08

ವೈರಲ್ ಆದ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ತಾವು ಕಾಂಗ್ರೆಸ್(Congress) ಪಕ್ಷಕ್ಕೆ ರಾಜೀನಾಮೆ ನೀಡ್ತಿರೋದಾಗಿ ಹೇಳುತ್ತಾರೆ. ಇದನ್ನು ಕಂಡು ಎಲ್ಲರಿಗೂ ಒಮ್ಮೆ ಅಚ್ಚರಿ ಆಗಿತ್ತು. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷಕ್ಕೆ ರಾಜೀನಾಮೆ ಕೊಡಲು ಸಾಧ್ಯವೇ?! ಎಂದು ಈ ವಿಡಿಯೋ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಆದರೀಗ ಈ ವಿಡಿಯೋದ ಅಸಲಿಯತ್ತೇ ಬೇರೆ ಇದೆ ಎಂದು ತಿಳಿದುಬಂದಿದೆ.

https://x.com/MithilaWaala/status/1778708651022426378?t=sd0AS8q0FKvGaURUkE9eZg&s=08

ಹೌದು, 2024ರ ಲೋಕಸಭಾ ಚುನಾವಣೆಗೆ(Parliament Election) ಕೇರಳದ ವಯನಾಡು(Vayanadu Lokasabha) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ(Rahul Gandhi) ಅವರು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಅವರು ಆಡಿದ ಮಾತುಗಳನ್ನ ಕೃತಕ ಬುದ್ದಿಮತ್ತೆ ತಂತ್ರಜ್ಞಾನ(AI) ಬಳಸಿ ತಿರುಚಿ, ಕಿಡಿಗೇಡಿಗಳು ಪೋಸ್ಟ್ ಮಾಡಿದ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಅದರಲ್ಲಿ ರಾಹುಲ್ ಗಾಂಧಿ ಅವರು ತಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡ್ತಿರೋದಾಗಿ ಹೇಳುವಂತೆ ಮಾಡಲಾಗಿತ್ತು. ಇದರಿಂದ ರಾಹುಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಬಿಂಬಿಸಲಾಗಿತ್ತು.

ಇದನ್ನೂ ಓದಿ: Actress Ruhani Sharma: ಲಂಗಾ ದಾವಣಿ ತೊಟ್ಟು ಮಿಂಚಿದ ಟಾಲಿವುಡ್ ನಟಿ ರುಹಾನಿ ಶರ್ಮ

ಅಲ್ಲದೆ ವೈರಲ್ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ದಾಖಲೆಗಳಿಗೆ ಸಹಿ ಹಾಕುವ ಸನ್ನಿವೇಶ ಚಿತ್ರೀಕರಣ ಆಗಿದೆ. ಹಿಂದಿ ಭಾಷೆಯಲ್ಲಿ ರಾಹುಲ್ ಅವರು ಹಿಂದಿಯಲ್ಲಿ ‘ನಾನು ರಾಹುಲ್ ಗಾಂಧಿ.. ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಚುನಾವಣೆಗೋಸ್ಕರ ಹಿಂದೂ ಆಗಿ ಬೇಸತ್ತಿದ್ದೇನೆ. ನಾನು ಅನ್ಯಾಯ ಯಾತ್ರೆ ಮಾಡಿದೆ. ಪಕ್ಷದ ಪ್ರಣಾಳಿಕೆ ಕೂಡಾ ಬಿಡುಗಡೆ ಮಾಡಿದೆ. ಆದರೆ, ಮೋದಿ ಅವರು ಭ್ರಷ್ಟರನ್ನು ಜೈಲಿಗೆ ಕಳಿಸೋದ್ರಲ್ಲಿ ನಿರತರಾಗಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ಭ್ರಷ್ಟರನ್ನು ನಿರಂತರವಾಗಿ ಜೈಲಿಗೆ ಕಳಿಸುತ್ತಿದ್ದಾರೆ. ಹೀಗಾಗಿ, ನಾನು ಇಟಲಿಯಲ್ಲಿ ಇರುವ ನಮ್ಮ ಅಜ್ಜಿಯ ಮನೆಗೆ ಹೋಗುತ್ತಿದ್ದೇನೆ’ ಎಂದು ಹೇಳುವಂತೆ ತಿರುಚಲಾಗಿತ್ತು. ಇದನ್ನು ನೋಡಿದ ಎಂತವರಿಗೂ ಒಮ್ಮೆ ಗೊಂದಲ ಉಂಟಾಗುತ್ತಿತ್ತು.

ಆದರೀಗ ಬೂಮ್ ಸಂಸ್ಥೆ ಈ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಿದ ವೇಳೆ ಇದೊಂದು ತಿರುಚಿದ ವಿಡಿಯೋ ಅನ್ನೋದು ಸಾಬೀತಾಗಿದೆ. ರಾಹುಲ್ ಗಾಂಧಿ ಅವರ ಧ್ವನಿಯನ್ನು ಕೃತಕ ಬುದ್ದಿಮತ್ತೆ ದನಿ ಬಳಸಿ ತಿರುಚಲಾಗಿದೆ. ಈ ಸನ್ನಿವೇಶದ ಅಸಲಿ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ಈ ವಿಡಿಯೋದ ತುಣುಕನ್ನು ಗೂಗಲ್ ರಿವರ್ಸ್‌ ಇಮೇಜ್ ಸರ್ಚ್ ಬಳಸಿ ಹುಡುಕಾಟ ನಡೆಸಿದಾಗ ಈ ಸನ್ನಿವೇಶದ ಅಸಲಿ ವಿಡಿಯೋ ಪತ್ತೆಯಾಯ್ತು. ಈ ಪೋಸ್ಟ್‌ನ ಸುಳಿವನ್ನು ಆಧರಿಸಿ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದಾಗ ಕಾಂಗ್ರೆಸ್ ಪಕ್ಷದ ಅಧಿಕೃತ ಚಾನಲ್‌ನಲ್ಲಿ ಏಪ್ರಿಲ್ 3 ರಂದು ಪ್ರಕಟಿಸಿದ್ದ ವಿಡಿಯೋ ಸಿಕ್ತು ಎಂದು ಸಂಸ್ಥೆಯು ತಿಳಿಸಿದೆ.

Leave A Reply

Your email address will not be published.