Maidan Film: ಮೈದಾನ್ ಹಿಂದಿ ಚಲನಚಿತ್ರ ಪ್ರದರ್ಶನ ಪ್ರಕರಣ; ಹೈಕೋರ್ಟ್ ನೀಡಿತು ಹಸಿರು ನಿಶಾನೆ
Maidan Film: ಅಲ್ಲದೆ, ಒಟಿಟಿ ಸೇರಿದಂತೆ ಯಾವುದೇ ವಿಧಾನದಲ್ಲಿ ಯಾವುದೇ ಭಾಷೆಯಲ್ಲೂ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಮೈಸೂರು ಸಿವಿಲ್ ಕೋರ್ಟ್ ನೀಡಿದ್ದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಮುಂಬಯಿನ ದೈವೀವ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಬೋನಿ ಕಪೂರ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯಪೀಠ, ಈ ಮಧ್ಯಂತರ ಆದೇಶ ಮಾಡಿದೆ.
ಇದನ್ನೂ ಓದಿ: Temple Facts: ದೇವಸ್ಥಾನದಲ್ಲಿ ಗಂಟೆಯನ್ನು ಬಾರಿಸೋದು ಯಾಕೆ? ಇಲ್ಲಿದೆ ನಿಮಗಾಗಿ ಮಾಹಿತಿ
ಹೈಕೋರ್ಟ್‌ಗೆ ಗುರುವಾರ ರಜೆ ಇದ್ದರೂ ತುರ್ತು ವಿಚಾರವೆಂದು ಮಂಡನೆ ಮಾಡಿ ‘ವಿಚಾರಣೆ ನಡೆಸುವಂತೆ ಅರ್ಜಿದಾರರು ಕೋರಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ಮಧ್ಯಂತರ ಆದೇಶ ನೀಡಿದೆ. ಮೈಸೂರಿನ ಬರಹಗಾರ ಸಿ.ಆರ್. ಅನಿಲ್ ಕುಮಾರ್ ಕಾಪಿ ರೈಟ್ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದರು.
ಅರ್ಜಿ ಪರಿಶೀಲಿಸಿದ ಮೈಸೂರಿನ ಸಿಟಿ ಸಿವಿಲ್ ನ್ಯಾಯಾಲಯ, ಏ.8ರಂದು ಮೈದಾನ ಹಿಂದಿ ಚಲನಚಿತ್ರ ಪ್ರದರ್ಶನಕ್ಕೆ ತಡೆ ನೀಡಿತ್ತು. ಆ ಕಡೆ ತೆರವು ಕೋರಿ ಅರ್ಜಿದಾರರು, “ಏ.10ರಂದು ಚಲನಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಪ್ರದರ್ಶನವಾಗುತ್ತಿದೆ. ಕೋರ್ಟ್ ಆದೇಶದಿಂದ ನಿರ್ಮಾಪಕರಿಗೆ ಕೋಟ್ಯಂತರ ರೂ. ನಷ್ಟವಾಗಲಿದೆ. ಸಿನಿಮಾ ಐತಿಹಾಸಿಕ ಘಟನೆಗೆ ಸಂಬಂಧಿಸಿದ್ದು, 2017ರಲ್ಲಿಯೇ ಅದರ ಶೂಟಿಂಗ್ ಆರಂಭವಾಗಿತ್ತು. ಕೋವಿಡ್ ಕಾರಣಕ್ಕೆ ಚಿತ್ರ ನಿರ್ಮಾಣ ವಿಳಂಬವಾಗಿತ್ತು’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.