Shivayogi Shivayya Mutya: ರಾಜಕೀಯದಾಗ ಜೋಡೆತ್ತಿನ ನಾಕಾ ಸರ್ತಿಗಾಡಿ ಮುಂದ ಹೊಂಟಾವ : ಅಚ್ಚರಿಯ ಭವಿಷ್ಯ ನುಡಿದ ಶಿವಯೋಗಿ ಶಿವಯ್ಯ ಮುತ್ಯಾ

Shivayogi Shivayya Mutya: ಭಾರತದಲ್ಲಿ ಜ್ಯೋತಿಷ್ಯ ಶಾಸ್ತ್ರ, ಪಂಚಾಗ‌ದ ಮೂಲಕ ಭವಿಷ್ಯದ ಆಗು ಹೋಗುಗಳ ಕುರಿತು ತಿಳಿದುಕೊಳ್ಳುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಅದು ಯಾವುದೇ ಧರ್ಮವೇ ಆಗಿರಲಿ ಭವಿಷ್ಯದ ಬಗ್ಗೆ ಅಷ್ಟರ ಮಟ್ಟಿಗೆ ನಮ್ಮ ಜನರಲ್ಲಿ ಭಯ ಹಾಗೂ ಕುತೂಹಲವಿದೆ.

ಇದೀಗ ವಿಜಯಪುರ ತಾಲೂಕಿನ ಕತಕನಹಳ್ಳಿಯ ಚಕ್ರವರ್ತಿ ಬಬಲಾದಿ ಸದಾಶಿವ ಶಿವಯೋಗಿ ಪೀಠಾಧಿಪತಿ ಶಿವಯ್ಯ ಮುತ್ಯಾ ರಾಜಕೀಯ ಭವಿಷ್ಯ ನುಡಿದಿದ್ದಾರೆ. “ಇದೀಗ ರಾಜಕೀಯದಾಗ ಜೋಡೆತ್ತಿನ ನಾಕ ಸರ್ತಿಗಾಡಿ ಮುಂದ ಹೊಂಟಾವ. ತ್ಯಾಗಿ, ಯೋಗಿ, ಭೋಗಿ, ಡೋಂಗಿ ಸರ್ತಿ ಗಾಡ್ಯಾಗ ಯಾವ ಹೊಡಿತೀರಿ ನೋಡ್ರಿ” ಎಂದು ಭವಿಷ್ಯ ನುಡಿದಿದ್ದಾರೆ.

ರೈತರದೂ ರಾಜಕೀಯ ಆಳಬೇಕ ಅನ್ನೋ ಕಂಪನಿ ಒಂದ ಗಂಟ ಬಿದೈತಿ. ನಮ್ಮಿಂದ ಆಗಲಿಂದ್ರ ಕಡೀಕ್ ಮಿಕ್ಸ್ ಬಾಜಿ ಮಾಡಬೇಕಂತ ಗಂಟ ಬಿದೈತಿ. ಹೆಂಗ ಮಾಡ್ತೀರಿ ನೋಡ್ರಿ ಎಂದು ಭವಿಷ್ಯ ನುಡಿದಿದ್ದಾರೆ.

ಈ ವರ್ಷ ಬಹಳ ವಿಶೇವಾಗಿರುವ ವರ್ಷ ಐತಿ, ಕ್ರೋಧಿನಾಮ ಸಂವತ್ಸರ. ಹೆಸರಿನ್ಯಾಗ ಕ್ರೋಧಿ ಐತಿ. ಕ್ರೋಧ ಇಟಗೊಂಡವ, ಸಿಟ್ಟು ಬಳಸಾಂವ, ಸಿಟ್ಟನ್ನು ಚಲಾವಣೆಯಲ್ಲಿ ತರಾವ್. ಸಿಟ್ಟನ್ ಸ್ವೀಕಾರ ಮಾಡಿ, ಮಸ್ತಕದೊಳಗ ಇಟಗೊಂಡಾವ ಕ್ರೋದಿ. ಕ್ರೋಧಿನಾಮ ಸಂವತ್ಸರ ಐತೆಂತ ಸಿಟ್ ತೆಲ್ಯಾಗ ಇಟಗೊಂಡ ತಿರಗಬ್ಯಾಡ್ರಿ, ರಾವಣನಂಗ, ಕೀಚಕನಂಗ ತಿರಗಬ್ಯಾಡ್ರಿ ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ.

ಒಟ್ಟಾರೆ ಈ ವರ್ಷದ ಭವಿಷ್ಯ ಏನಾಗಲಿದೆ ಎಂಬುದರ ಕುರಿತು ಚಕ್ರವರ್ತಿ ಬಬಲಾದಿ ಸದಾಶಿವ ಶಿವಯೋಗಿ ಪೀಠಾಧಿಪತಿ ಶಿವಯ್ಯ ಮುತ್ಯಾ ತಿಳಿಸಿದ್ದಾರೆ.

Leave A Reply

Your email address will not be published.