Second Puc Toopers List: ದ್ವಿತೀಯ ಪಿಯುಸಿ ಫಲಿತಾಂಶ; ಯಾವ ವಿಭಾಗದಲ್ಲಿ ಯಾರು ಟಾಪರ್ಸ್‌; ಕಂಪ್ಲೀಟ್‌ ವಿವರ ಇಲ್ಲಿದೆ

Second Puc Toopers List: ಇಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಕೂಡಾ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಯಾವ ವಿಭಾಗದಲ್ಲಿ ಯಾರೆಲ್ಲ ಟಾಪರ್ಸ್‌ ನ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ.

ಇದನ್ನೂ ಓದಿ: 2nd Puc Result 2024: ದ್ವಿತೀಯ ಪಿಯುಸಿ ಫಲಿತಾಂಶ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ತೃತೀಯ ಸ್ಥಾನಕ್ಕೆ ಏರಿದ ವಿಜಯಪುರ !

ವಿಜ್ಞಾನ ವಿಭಾಗದಲ್ಲಿ ವಿದ್ಯಾನಿಕೇತನ ಎಸ್‌ಇ ಪಿಯು ಕಾಲೇಜು ಧಾರವಾಡದ ಎ ವಿದ್ಯಾಲಕ್ಷ್ಮೀ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ

ಇದನ್ನೂ ಓದಿ: Parliment Election : ದಕ್ಷಿಣ ಕನ್ನಡ ಲೋಕಸಭಾ: ನಾಮಪತ್ರ ಹಿಂಪಡೆದ ಅಭ್ಯರ್ಥಿ !!

ಆದಿಚುಂಚನಗಿರಿ ಕಾಲೇಜು ಮೈಸೂರಿನ ಕೆಎಚ್‌ ಉರ್ವಿಷ್ ಪ್ರಶಾಂತ್ 597 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿದ್ಯಾನಿಧಿ ಪಿಯು ಕಾಲೇಜು ಧಾರವಾಡದ ಗಾನವಿ ಎಂ ಅವರು 597 ಅಂಕ ರಾಜ್ಯಕ್ಕೆ ಪ್ರಥಮ,

ನಂತರ ನಾಲ್ವರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕುಮುದ್ವತಿ ಎಸ್‌ಸಿ ಪಿಯು ಕಾಲೇಜು ಶಿವಮೊಗ್ಗದ ಪವನ್ ಎಂಎಸ್ 596 ಅಂಕ, ಕೆನರಾ ಪಿಯು ಕಾಲೇಜು ಮಂಗಳೂರಿನ ಬಿ ತುಳಸಿ ಪೈ 596 ಅಂಕ, ಎಂಇಎಸ್ ಪಿಯು ಕಾಲೇಜು ಮಲ್ಲೇಶ್ವರಂನ ತೇಜಸ್ವಿನಿ ಕೆ ಕಾಲೆ 596 ಅಂಕ, ಪೂರ್ಣಪ್ರಜ್ಞ ಕಾಲೇಜು ಉಡುಪಿಯ ಹರ್ಷಿತ್ ಎಸ್‌ಎಸ್‌ 596 ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಮೂರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

ಬೆಂಗಳೂರು ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಮೇಧಾ ಡಿ 596 ಅಂಕ

ವಿಜಯಪುರ ಎಸ್‌ಎಸ್‌ ಪಿಯುಸಿ ಕಾಲೇಜಿನ ವೇದಾಂತ್ 596 ಅಂಕ

INDU INDP PU College ಬಳ್ಳಾರಿಯ ಕವಿತಾ ಬಿವಿ ಕೂಡ 596 ಅಂಕ ಮೂವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ KEB COMP PU COLLEGE ಧಾರವಾಡದ ರವಿನಾ ಸೋಮಪ್ಪ ಲಮಾಣಿ 595 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ.

ವಿವೇಕಾನಂದ ಕಾಲೇಜು ಪುತ್ತೂರಿನ ಪುರೋಹಿತ್ ಖುಷಿಬೆನ್‌ ರಾಜೇಂದ್ರ ಕುಮಾರ್ 594 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.

Leave A Reply

Your email address will not be published.