Maharashtra Death News: ಪಾಳುಬಾವಿಗೆ ಬಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋದ ಐವರು ಸಾವು

Maharashtra Death News:   ಪಾಳುಬಿದ್ದ ಬಾವಿಯಿಂದ ಬೆಕ್ಕನ್ನು ರಕ್ಷಿಸಲೆಂದು ಹೋಗಿ ಐವರು ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬೆಕ್ಕನ್ನು ರಕ್ಷಿಸುವ ಭರದಲ್ಲಿ ಒಬ್ಬರ ನಂತರ ಒಬ್ಬರು ಬಾವಿಗೆ ಹಾರಿದ್ದು, ನಂತರ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಅಹಮದ್‌ ನಗರದಲ್ಲಿ.

ಇದನ್ನೂ ಓದಿ: 2nd PUC Exam Result: ದ್ವಿತೀಯ ಪಿಯುಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಫೀಸ್ ಬಗ್ಗೆ ಮಾಹಿತಿ ನೀಡಿದ ಸರ್ಕಾರ !

ನ್ಯೂಸ್‌ ವರದಿ ಪ್ರಕಾರ ಪಾಳು ಬಾವಿಗೆ ಜೈವಿಕ ಅನಿಲ್‌ ಪಿಟ್‌ ಆಗಿ ಬಳಸಾಗಿದೆ. ಬಾವಿಗೆ ಹಾರಿದ ಆರು ಜನರಲ್ಲಿ ಒಬ್ಬನನ್ನು ರಕ್ಷಣೆ ಮಾಡಲಾಗಿದ್ದು, ಉಳಿದ ಐವರ ಮೃತದೇಹವನ್ನು ರಕ್ಷಣಾ ತಂಡ ಹೊರಗೆ ತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: K S Eshwarappa: ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು, ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ – ಕೆ ಎಸ್ ಈಶ್ವರಪ್ಪ !!

ಬಾವಿಯನ್ನು ಬಹಳ ದಿನಗಳಿಂದ ಮುಚ್ಚಲಾಗಿತ್ತು. ಅಲ್ಲಿ ಕಸ ಎಲ್ಲ ಸುರಿಯಲಾಗುತ್ತಿತ್ತು. ವಿಷಾನಿಲ ಶೇಖರಣೆಯಾಗಿ ಉಸಿರುಗಟ್ಟಿ ಇವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಾವಿಯಲ್ಲಿ ಪ್ರಾಣಿಗಳ ತ್ಯಾಜ್ಯ ಕೂಡಾ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.