America: ಭಾರತ ಪಾಕಿಸ್ತಾನದ ಮೇಲೆ ನುಗ್ಗಿ ದಾಳಿ ಮಾಡುವ ವಿಚಾರವಾಗಿ ನಾವು ಯಾವುದೇ ಹಸ್ತಕ್ಷತೆ ಮಾಡುವುದಿಲ್ಲ : ಅಮೇರಿಕಾ
America: ಇತ್ತೀಚಿಗೆ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಇನ್ನು ಮುಂದೆ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲುವುದಾಗಿ ನೀಡಿದ ಹೇಳಿಕೆ ಇಡೀ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಇಷ್ಟು ದಿನ ಎಲ್ಲಾ ವಿಚಾರಗಳಲ್ಲಿಯೂ ಶಾಂತಿಯುತವಾಗಿ ವರ್ತಿಸುತ್ತಿದ್ದ ಭಾರತದಿಂದ ಇದ್ದಕ್ಕಿದ್ದಂತೆ ಈ ರೀತಿಯ ಹೇಳಿಕೆ ಹೊರಬಂದಿದ್ದು ಎಲ್ಲಾ ರಾಷ್ಟ್ರಗಳಿಗು ಅಚ್ಚರಿ ಉಂಟು ಮಾಡಿತ್ತು.
ಇದನ್ನೂ ಓದಿ: Belthangady: 19 ರ ಹರೆಯದ ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ
ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಲು ಅಮೆರಿಕ ಪ್ರೋತ್ಸಾಹ ನೀಡುತ್ತದೆ. ಆದರೆ ಎರಡು ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: PM Modi: ಎ.14 ರಂದು ಮಂಗಳೂರಿನಲ್ಲಿ ಮೋದಿ ಹವಾ; ರೋಡ್ ಶೋ ಮಾಡಲು ನಿರ್ಧಾರ, ಸಮಾವೇಶ ರದ್ದು
ಭಯೋತ್ಪಾದಕರು ಭಾರತದಲ್ಲಿ ಶಾಂತಿ ಕದಡಲು ಅಥವಾ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದರೆ, ತಕ್ಕ ಉತ್ತರ ನೀಡಲಾಗುವುದು ಮತ್ತು ಅವರು ಪಾಕಿಸ್ತಾನಕ್ಕೆ ಓಡಿಹೋದರೆ, ಅವರನ್ನು ಕೊಲ್ಲಲು ಭಾರತ ಪಾಕಿಸ್ತಾನಕ್ಕೆ ನುಗ್ಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳೆದ ವಾರ ಹೇಳಿದ್ದರು.
“ನಾವು ಈ ವಿಷಯದ ಬಗ್ಗೆ ಮಾಧ್ಯಮ ವರದಿಗಳನ್ನು ಅನುಸರಿಸುತ್ತಿದ್ದೇವೆ. ಭಾರತದ ಈ ಆರೋಪಗಳ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಅಮೇರಿಕಾದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ ಮಿಲ್ಲರ್ ಹೇಳಿದ್ದಾರೆ.
ರಾಜನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ರಾಜನಾಥ್ ಸಿಂಗ್ ಅವರ ಪ್ರಚೋದನಕಾರಿ ಹೇಳಿಕೆಯನ್ನು ಟೀಕಿಸಿದೆ ಮತ್ತು ತನ್ನ ಸಾರ್ವಭೌಮತ್ವವನ್ನು ಕಾಪಾಡುವ ಉದ್ದೇಶ ಮತ್ತು ಸಾಮರ್ಥ್ಯದಲ್ಲಿ ಪಾಕಿಸ್ತಾನ ದೃಢವಾಗಿ ನಿಂತಿದೆ ಎಂದು ಹೇಳಿದೆ.