Home Breaking Entertainment News Kannada Jaya Bacchan: ಅಮಿತಾಬ್ ಬಚ್ಚನ್’ನ ಅನೈತಿಕ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಪತ್ನಿ ಜಯಾ...

Jaya Bacchan: ಅಮಿತಾಬ್ ಬಚ್ಚನ್’ನ ಅನೈತಿಕ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಪತ್ನಿ ಜಯಾ ಬಚ್ಚನ್ !!

Jaya Bacchan

Hindu neighbor gifts plot of land

Hindu neighbour gifts land to Muslim journalist

Jaya Bacchan: ರೇಖಾ(Rekha) ಮತ್ತು ಅಮಿತಾಬ್ ಬಚ್ಚನ್(Amithab Bacchan) ಸಿನಿಮಾಗಳನ್ನು ಸಿನಿ ಪ್ರೇಮಿಗಳು ಮರೆಯಲು ಆಗಲ್ಲ. ಇವರಿಬ್ಬರೂ ಈ ಹಿಂದೆ ಅನೇಕ ರೋಮ್ಯಾಂಟಿಕ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಜೋಡಿಯನ್ನು ಜನರು ತುಂಬಾ ಇಷ್ಟಪಟ್ಟಿದ್ದರು. ಈ ಜೋಡಿ ನಡುವಿನ ಸಂಬಂಧದ ಕುರಿತು ಅಂದು ಗುಸುಗುಸು ಕೇಳಿಬಂದಿತ್ತು. ಈಗಲೂ ಕೇಳಿಬರುತ್ತಿರುತ್ತದೆ. ಆದರೀಗ ಅಮಿತಾಭ್ ಮತ್ತು ರೇಖಾ ನಡುವಿನ ಪ್ರೇಮ ಪ್ರಕರಣದ ಕುರಿತು ಅವರ ಪತ್ನಿ ಜಯಾ ಬಚ್ಚನ್ (Jaya Bacchan) ಮನಬಿಚ್ಚಿ ಮಾತನಾಡಿದ್ದಾರೆ.

ಹೌದು, ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amithabh Bhacchan) ಮತ್ತು ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಕೃಷ್ಣ ಸುಂದರಿ ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ. 70 ರ ದಶಕದಲ್ಲಿ, ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಸಂಬಂಧವು ಬಹಳ ಚರ್ಚಿತ ವಿಷಯವಾಗಿತ್ತು. ಈ ಬಗ್ಗೆ ಎಲ್ಲಡೆ ಗುಸುಗುಸು ಉಂಟಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಪ್ರೇಮಕಥೆ ಯಾರೂ ಮರೆಯಲು ಸಾಧ್ಯವಿಲ್ಲ. ಅಂದು ಇವರಿಬ್ಬರ ನಡುವೆ ಎಂಟ್ರಿ ಕೊಟ್ಟು, ಸದ್ಯ ಅಮಿತಾಬ್ ಬಚ್ಚನ್ ಅವರ ಪತ್ನಿ ಆಗಿರುವ ಜಯಾ (Jaya Badhuri) ಅವರು ತಮ್ಮ ಪತಿಯ ಪ್ರೀತಿ ವಿಚಾರಗಳ ಕುರಿತು ಮಾತನಾಡಿದ್ದಾರೆ.

ಅಂದಹಾಗೆ ಏಪ್ರಿಲ್ 9 ಜಯಾ ಬಚ್ಚನ್ ಅವರಿಗೆ 76ನೇ ಹುಟ್ಟುಹಬ್ಬದ ಸಂಭ್ರಮ. ಹಲವಾರು ಗಣ್ಯರು ನಟಿಗೆ ಶುಭಾಶಯಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ. ಇವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮತ್ತೆ ರೇಖಾ ವಿಷಯ ಚರ್ಚೆಗೆ ಬಂದಿದೆ. ಹಿಂದೊಮ್ಮೆ ಜಯಾ ಬಚ್ಚನ್ ಅವರು, ರೇಖಾ ಮತ್ತು ತಮ್ಮ ಪತಿ ಅಮಿತಾಭ್ ಕುರಿತು ಪೀಪಲ್ಸ್ ಮ್ಯಾಗಜೀನ್ಗೆ ಸಂದರ್ಶನ ನೀಡಿದ್ದ ಜಯಾ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪತಿ ಅಮಿತಾಭ್ ಮತ್ತು ರೇಖಾ ಜೊತೆಗಿನ ವಿಷಯ ಬಹಳ ಗುಲ್ಲು ಹಬ್ಬಿದ್ದು ನಿಜ. ಆದರೆ ಸೆಲೆಬ್ರಿಟಿಗಳು ಎಂದರೆ ಇಂಥ ಸುದ್ದಿಗಳು ಮಾಮೂಲೇ. ಒಂದು ವೇಳೆ ಈ ವಿಷಯ ನಿಜವೇ ಆಗಿದ್ದರೆ ಅಮಿತಾಭ್ ನನ್ನೊಟ್ಟಿಗೆ ಇರುತ್ತಿರಲಿಲ್ಲವಲ್ಲ ಎಂದು ಹೇಳುವ ಮೂಲಕ ಈ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ.

ಅಲ್ಲದೆ ಅಮಿತಾಭ್ ಅವರ ಹೆಸರು ಬಹುತೇಕ ಅವರು ನಟಿಸಿರುವ ಎಲ್ಲಾ ನಟಿಯರ ಜೊತೆ ಥಳಕು ಹಾಕಿಕೊಂಡಿದೆ. ಹಾಗೆಂದು ಎಲ್ಲರ ಜೊತೆ ಅವರಿಗೆ ಸಂಬಂಧ ಕಟ್ಟಲು ಸಾಧ್ಯವೆ ಎಂದು ಪ್ರಶ್ನಿಸಿರುವ ಜಯಾ ಬಚ್ಚನ್, ಒಂದು ವೇಳೆ ಇಂಥ ಸುದ್ದಿಗಳಿಗೆಲ್ಲಾ ನಾನು ತಲೆ ಕೆಡಿಸಿಕೊಳ್ಳುತ್ತಾ ಇದ್ದರೆ, ನನ್ನ ಬದುಕು ನರಕವಾಗುತ್ತಿತ್ತು. ಇಂಥ ಗಾಸಿಪ್ಗಳಿಗೆ ನಾನು ಯಾವತ್ತೂ ಕಿವಿ ಕೊಟ್ಟವಳೇ ಅಲ್ಲ ಎಂದಿದ್ದಾರೆ.