2nd PUC Result: ನಾಳೆ ಬೆಳಗ್ಗೆ 10 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

2nd PUC Result: ನಾಳೆ ಬೆಳಗ್ಗೆ 10 ಗಂಟೆಗೆ ದ್ವಿತೀಯ ಪಿಯುಸಿ 2024 ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ . ನಾಳೆ ಬೆಳಿಗ್ಗೆ 10 ಗಂಟೆಗೆ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಲಿದ್ದು, 11 ಗಂಟೆಯ ನಂತರ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ವೀಕ್ಷಿಸಬಹುದು.

ಫಲಿತಾಂಶ ಚೆಕ್‌ ಮಾಡುವ ರೀತಿ ಇಲ್ಲಿದೆ;
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನೀಡಲಾದ ರಿಜಿಸ್ಟರ್‌ ನಂಬರ್‌/ರೋಲ್‌ ನಂಬರ್‌ ಬಳಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡುವ ವೆಬ್ಸೈಟ್‌ನಲ್ಲಿ ಫಲಿತಾಂಶ ಚೆಕ್‌ ಮಾಡಬಹುದು.

ಚೆಕ್‌ ಮಾಡುವ ರೀತಿ ಇಲ್ಲಿದೆ;
ವಿದ್ಯಾರ್ಥಿಗಳು ಮೊದಲಿಗೆ https://karresults.nic.in/ ಗೆ ಭೇಟಿ ನೀಡಿ, ನಂತರ ದ್ವಿತೀಯ ಪಿಯುಸಿ ರಿಸಲ್ಟ್‌ ಚೆಕ್‌ ಮಾಡುವ ಲಿಂಕ್‌ ಇರುತ್ತದೆ. ಅದಕ್ಕೆ ಕ್ಲಿಕ್‌ ಮಾಡಿ ನಿಮ್ಮ ರಿಜಿಸ್ಟರ್‌ ನಂಬರ್‌ ಹಾಕಬೇಕು. ಆವಾಗ ನಿಮ್ಮ ಫಲಿತಾಂಶ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ: ಬಿಸಿಲಿನಿಂದ ಒದ್ದಾಡುವವರಿಗೆ ಗುಡ್ ನ್ಯೂಸ್! ಸದ್ಯದಲ್ಲೇ ಬರಲಿದೆ ಮಳೆ

 

Leave A Reply

Your email address will not be published.