NOTA for Soujanya: ಬಿಜೆಪಿ ನಾಯಕರಿಗೆ ತಲೆನೋವಾದ ಸೌಜನ್ಯ ನೋಟಾ ಅಭಿಯಾನ, 7 ಲಕ್ಷ ಹೋರಾಟಗಾರರ ಮತ ಯಾರಿಗೆ ?!

NOTA for Soujanya: ಮಂಗಳೂರಿನಲ್ಲಿ NOTA ಅಭಿಯಾನ ದೊಡ್ಡದಾಗಿ ಸದ್ದು ಮಾಡುತ್ತಿದೆ. ತುಂಬಾ ದಿನಗಳಿಂದ ನಡೆಯುತ್ತಿರುವ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೋರಾಟಕ್ಕೆ ಬೆಂಬಲ ನೀಡದ ರಾಜಕೀಯ ವ್ಯಕ್ತಿಗಳ ವಿರುದ್ಧ ಇದೀಗ NOTA ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ‘ಹೊಸ ಕನ್ನಡ’ ಪತ್ರಿಕೆಯು ಮಂಗಳೂರಿನಲ್ಲಿ ಸೌಜನ್ಯಳಿಗಾಗಿ ನೋಟಾ ಚಳವಳಿ ಶುರುವಾಗಲಿದೆ ಎನ್ನುವ ಬಗ್ಗೆ ಕೆಲ ವಾರಗಳ ಹಿಂದೆಯೇ ವರದಿ ಮಾಡಿತ್ತು. ಇದೀಗ ಚಳವಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಮಾಧ್ಯಮಗಳು ಕೂಡಾ ಈ ನಿಟ್ಟಿನಲ್ಲಿ ಪ್ರಚಾರಕ್ಕೆ ನಿಂತಿದ್ದು, ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮತ್ತನವರ ಜತೆ ಸಂವಾದ ನಡೆದಿದೆ. ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾಗವಹಿಸಿದ್ದ 7 ಲಕ್ಷಕ್ಕೂ ಅಧಿಕ ಮಂದಿ ಹೋರಾಟಗಾರರು ಈ ಸಲ ತಮ್ಮ ತಮ್ಮ ಪಕ್ಷ ಪ್ರೀತಿ ತ್ಯಜಿಸಿ ನೋಟ ಓಟಿಗೆ ಮುದ್ರೆ ಒತ್ತಲಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಹಾಗಾದರೆ ಐತಿಹಾಸಿಕ ಘಟನೆಯೊಂದಕ್ಕೆ ಮಂಗಳೂರು ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ.

ಇದನ್ನೂ ಓದಿ: Dakshina Kannada (Nelyadi): ಮದುವೆಗೆ ತೆರಳುತ್ತಿದ್ದ ಬಸ್ಸು-ಕಂಟೈನರ್‌ ನಡುವೆ ಅಪಘಾತ; 20 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು ನಾವು ಅನ್ನ ನೀರು ಬಿಟ್ಟು ನಿರಂತರ ಪಾದಯಾತ್ರೆಗಳನ್ನ ಮಾಡಿ ಇಲ್ಲ ಸಲ್ಲದ ಕೇಸ್ ಗಳನ್ನೆಲ್ಲ ಮೈಮೇಲೆ ಹಾಕಿಕೊಂಡು ಹೋರಾಟ ಮಾಡುತ್ತಿದ್ದೇವೆ. ಆದರೆ ನಾವು ಗೆಲ್ಲಿಸಿ ಕಳಿಸಿದ ಯಾವುದೇ ರಾಜಕೀಯ ವ್ಯಕ್ತಿ ನಮಗೆ ಬೆಂಬಲ ನೀಡಿಲ್ಲ ಎಂದು ರಾಜಕೀಯ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಕಣ್ಣಲ್ಲಿ ಕಂಡ ಸತ್ಯಕ್ಕೆ ಅದು. ಅಣ್ಣಪ್ಪ ಸ್ವಾಮಿ ನೆಲೆಸಿರುವ ನ್ಯಾಯ ದೇಗುಲದಲ್ಲಿ ನ್ಯಾಯ ಸಿಗಲಿಲ್ಲ ಅಂತ ಹೇಳಿದ್ರೆ ಇವರು ಇನ್ನೆಷ್ಟು ಪ್ರಭಾವಿಗಳು ಇರಬೇಕು. ಅದಕ್ಕಾಗಿ ಈ ಬಾರಿ ಒಂದು ಒಳ್ಳೆಯ ಅವಕಾಶವನ್ನು ದೇವರೇ ಕಲ್ಪಿಸಿದ್ದಾನೆ, ಅದೇ NOTA. ನಾವು ಈ ಸಲ ಯಾವ ಅಭ್ಯರ್ಥಿಗೂ ಮತ ನೀಡುವುದಿಲ್ಲ. ನೋಟವೇ ಈ ಸಲದ ನಮ್ಮ ಅಭ್ಯರ್ಥಿ ಎಂದಿದ್ದಾರೆ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ.

ನಮ್ಮ ಅನೇಕ ರಾಜಕೀಯ ನಾಯಕರು NOTA ಕುರಿತಾಗಿ ಸರಿಯಾದ ಪ್ರಚಾರವನ್ನೇ ಮಾಡಲು ಹೋಗಿಲ್ಲ. ಏಕೆಂದರೆ ಅದರಿಂದ ಅವರಿಗೆ ಮುಳುವಾಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ. ಆದರೆ ಈ ಚುನಾವಣೆಯಲ್ಲಿ ಜನರು ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಸೌಜನ್ಯ ಎನ್ನುವಂತಹದ್ದು ಮುಂದಿನ ದಿನಗಳಲ್ಲಿ ಧರ್ಮಸ್ಥಾಪನೆಗೆ, ನ್ಯಾಯ ಸ್ಥಾಪನೆಗೆ ಸನಾತನ ಹಿಂದೂ ಧರ್ಮದ ದೊಡ್ಡ ಉದ್ದೇಶಕ್ಕೆ ಹುಟ್ಟಿದ ಮಗು ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ NOTA ಮೂಲಕ ಇಡೀ ದೇಶದ ಜನರು ಅವರಿಗೆ (ಬಿಜೆಪಿ ನಾಯಕರಿಗೆ) ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸೌಜನ್ಯ ಪ್ರಕರಣವನ್ನು ಹತ್ತಿಕ್ಕಿದ ಅಪಕೀರ್ತಿ ಬಿಜೆಪಿ ಪಕ್ಷದ ಮೇಲಿದೆ. ಅಷ್ಟೇ ಅಲ್ಲ ಸೌಜನ್ಯ ಪ್ರಕರಣದಲ್ಲಿ ಆರೋಪಿತವಾದ ಹೆಗ್ಗಡೆ ಕುಟುಂಬದ ವೀರೇಂದ್ರ ಹೆಗ್ಗಡೆಗೆ ಬಿಜೆಪಿ ರಾಜ್ಯಸಭಾ ಸ್ಥಾನ ಕಲ್ಪಿಸಿ ತನ್ನ ಮೈ ಮೇಲೆ ಮತ್ತಷ್ಟು ಕೆಸರು ಎರೆಚಿಕೊಂಡಿದೆ. ಈ ಸಲ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಮುಖ್ಯವಾಗಿ ಬಿಜೆಪಿಗೆ ಪಾಠ ಕಳಿಸಲೇಬೇಕೆಂದು ಸೌಜನ್ಯ ಹೋರಾಟಗಾರರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಸೌಜನ್ಯ ಹೋರಾಟದಲ್ಲಿ ಆಕ್ಟಿವ್ ಆಗಿ ಭಾಗವಹಿಸಿದ ಏಳು ಲಕ್ಷ ಮತಗಳು ಈ ಸಲ ತುಂಬಾ ನಿರ್ಣಾಯಕವಾಗಿದ್ದು, ಒಂದು ವೇಳೆ ಅದರಲ್ಲಿ ಕೇವಲ 20% ಮತಗಳು ನೋಟಾಗೆ ಬಿದ್ದರೂ ಮಂಗಳೂರು ಲೋಕಸಭಾ ಕ್ಷೇತ್ರ ಸುಲಭವಾಗಿ ಕಾಂಗ್ರೆಸ್ ಪಕ್ಷದ ಪಾಲಾಗಲಿದೆ.

ಇದನ್ನೂ ಓದಿ: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಖಾತೆಗೆ ಬರಲಿದೆ 2500 ರೂ!

Leave A Reply

Your email address will not be published.