Killer CEO: ನಾಲ್ಕು ವರ್ಷದ ಮಗನ ಕೊಂದ ಸುಚನಾ ಸೇಠ್ ವಿರುದ್ಧ ಪೊಲೀಸರಿಂದ 642 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ; ಜೂನ್ 14 ರಂದು ವಿಚಾರಣೆ

Killer CEO: ಸಿಇಒ ಸುಚನಾ ಸೇಠ್ ವಿರುದ್ಧ ಕಲ್ಲಂಗೋಟ್‌ ಪೊಲೀಸರು ಗೋವಾ ಬಾಲಾಪರಾಧಿ ನ್ಯಾಯಾಲಯದಲ್ಲಿ 642 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಗುವಿನ ಕತ್ತು ಹಿಸುಕಿದ ಕಾರಣ ಆಘಾತ ಮತ್ತು ಉಸಿರಾಟದ ತೊಂದರೆಯಿಂದ ಮಗು ಸಾವನ್ನಪ್ಪಿದೆ ಎಂದು ಚಾರ್ಜ್ ಶೀಟ್ ನಲ್ಲಿ ಬರೆಯಲಾಗಿದೆ. ಸೆಕ್ಷನ್ 302 (ಕೊಲೆ) ಮತ್ತು 201 (ಅಧಿಕೃತ ಸಾಕ್ಷಿ ಕಣ್ಮರೆಯಾಗುವುದು) ಮತ್ತು ಗೋವಾ ಮಕ್ಕಳ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Kerala Doctor Couple death: ಅರುಣಾಚಲದ ಹೋಟೆಲ್‌ನಲ್ಲಿ ಕೇರಳದ ವೈದ್ಯ ದಂಪತಿ, ಮಹಿಳೆ ನಿಗೂಢ ಸಾವು

ಗೋವಾ ಪೊಲೀಸರು ಪ್ರಕರಣದಲ್ಲಿ 59 ಸಾಕ್ಷಿಗಳನ್ನು ಹೆಸರಿಸಿದ್ದಾರೆ ಮತ್ತು ಆರೋಪಿಯ ಪತಿ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದ್ದಾರೆ. ಸದ್ಯ ಗೋವಾದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಹಿತಿ ಇದೆ. ಐಲೈನರ್ ಬಳಸಿ ಟಿಶ್ಯೂ ಪೇಪರ್ ಮೇಲೆ ಆರೋಪಿ ಬರೆದಿರುವ ಲಿಖಿತ ಟಿಪ್ಪಣಿಯನ್ನೂ ಚಾರ್ಜ್ ಶೀಟ್ ಗೆ ಲಗತ್ತಿಸಲಾಗಿದೆ. ಕೈಬರಹ ತಜ್ಞರ ದೃಢೀಕರಣವನ್ನೂ ಪೊಲೀಸರು ಲಗತ್ತಿಸಿದ್ದಾರೆ.

ಇದನ್ನೂ ಓದಿ: Arvind Kejriwal: ಬಂಧನದ ನಂತರ 4.5 ಕೆಜಿ ತೂಕ ಕಳೆದುಕೊಂಡ ಕೇಜ್ರಿವಾಲ್ : ಅಸಲಿಗೆ ಕೇಜ್ರಿವಾಲ್ ಅವರಿಗೆ ಏನಾಗಿದೆ?

ಘಟನೆಯ ಹಿನ್ನೆಲೆ: ಮಗನಿಗೆ ಎಲ್ಲಿ ತನ್ನ ತಂದೆಯ ಜೊತೆ ಅಟ್ಯಾಚ್‌ಮೆಂಟ್‌ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಬೆಂಗಳೂರಿನ ಸಿಇಒ ಸುಚನಾ ಸೇಠ್‌ ತನ್ನ 4 ವರ್ಷದ ಮಗನನ್ನು ಗೋವಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹತ್ಯೆಗೈದಿದ್ದು, ಇದರ ಆರೋಪದ ಮೇಲೆ ಬಂಧಿತಳಾಗಿರುವ ಸುಚನಾ ಸೇಠ್‌ (39) ವಿರುದ್ಧ ಪ್ರಕರಣ ದಾಖಲಾಗಿತ್ತು.

ಜೂನ್‌ 14 ರಂದು ಗೋವಾ ಮಕ್ಕಳ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನಡೆಸಲಿದೆ.

Leave A Reply

Your email address will not be published.