CM Siddaramaiah : 60 ಸಾವಿರ ಲೀಡ್’ನಿಂದ ಗೆಲ್ಲಿಸಿದ್ರೆ ಮಾತ್ರ ನಾನು ಸಿಎಂ ಆಗಿ ಮುಂದುವರಿಯಲು ಸಾಧ್ಯ – ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ !!

 

CM Siddaramaiah: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರವಧಿಯ ಬಗ್ಗೆ ಆಗಾಗ ಚರ್ಚೆ ಆಗುತ್ತದೆ. ಕೆಲವು ರಾಜಕೀಯ ನಾಯಕರುಗಳು, ಶಾಸಕರುಗಳು ಇದರ ಬಗ್ಗೆ ನಾಲಿಗೆ ಹರಿಬಿಡುತ್ತ ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಮಾತ್ರ ಮುಖ್ಯಮಂತ್ರಿ ಆಗಿರುತ್ತಾರೆ, ಮುಂದಿನ ಅವಧಿ ಡಿಕೆಶಿ ಅವರಿಗೆ ಬಿಟ್ಟುಕೊಡುತ್ತಾರೆ ಎಂದು ಬೇರೆ ಬೇರೆ ಚರ್ಚೆಗಳು ಆಗಾಗ ಶುರುವಾಗುವಂತೆ ಮಾಡುತ್ತಾರೆ. ಆದರೆ ಈಗ ಅಚ್ಚರಿಯ ಎಂಬಂತೆ ಈ ಕುರಿತು ಸಿದ್ದರಾಮಯ್ಯ ಅವರ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಹೌದು, ಮೈಸೂರು -ಕೊಡಗು(Mysore-Kodagu)ಕ್ಷೇತ್ರದ ಅಭ್ಯರ್ಥಿ ಎಂ ಲಕ್ಷ್ಮಣ್(M Lakshman) ಅವರನ್ನು ಯದುವೀರ್ ಅವರ ವಿರುದ್ಧ ಭರ್ಜರಿ ಲೀಡ್ ನಲ್ಲಿ ಗೆಲ್ಲಿಸಲು ಪಣತೊಟ್ಟಿರುವ ಸಿಎಂ ಸಿದ್ದರಾಮಯ್ಯ(CM Siddaramaiah)ಅವರು ತಮ್ಮ ವಿಧಾನಸಭೆ ಕ್ಷೇತ್ರವಾದ ವರುಣದಿಂದ(Varuna) ಪ್ರಚಾರವನ್ನು ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಕ್ಷ್ಮಣ್ ಅವರನ್ನು ನಮ್ಮ ಕ್ಷೇತ್ರದಿಂದಲೇ ಬರೋಬ್ಬರಿ 60,000 ವೋಟು ಲೀಡ್ನಲ್ಲಿ ಗೆಲ್ಲಿಸಬೇಕು. ಹೀಗಾದರೆ ಮಾತ್ರ ನಾನು ಮುಖ್ಯಮಂತ್ರಿ ಆಗಿ ಮುಂದುವರೆಯಲು ಸಾಧ್ಯ ಎಂದು ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ(Vidhanasabhe) ನನಗೆ 48 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ. ಹೀಗಿರುವಾಗ ನಾನು ಸಿಎಂ ಸ್ಥಾನದಲ್ಲಿ ಇರಬೇಕಾ ಬೇಡ್ವಾ? ಹಾಗಿದ್ದರೆ ಅರವತ್ತು ಸಾವಿರ ಲೀಡ್ ನಿಂದ ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ. ವರುಣ ಕ್ಷೇತ್ರದಲ್ಲಿ 60,000 ಲೀಡ್ ಕೊಡಬೇಕು ವರುಣದಲ್ಲಿ ಲೀಡ್ ಕೊಟ್ಟರೆ ನನ್ನ ಯಾರು ಮುಟ್ಟುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.