Hyderabad: ಫಸ್ಟ್ ನೈಟ್’ಗಾಗಿ ರೂಮ್ ಒಳಗೆ ಹೋದ ಮಧುಮಗಳು ಸಾವು – ರಾತ್ರಿ ಬೆಳಗಾಗೋದ್ರೊಳಗೆ ನಡೆದಿದ್ದೇನು?
Hyderabad : ಮಧುವೆ ಎಂಬುದು ಒಂದು ಗಂಡು-ಹೆಣ್ಣು ಕೂಡಿ ಬಾಳಲು ಸಂಬಂಧ ಬೆಸೆಯುವ ಒಂದು ಸಂದರ್ಭ. ಇಬ್ಬರ ಬದುಕಿನಲ್ಲಿ ಇದು ಒಂದು ಅವಿಸ್ಮರಣೀಯ ದಿನ. ಆದರೆ ಮದುವೆ ಆದ ಮೊದಲ ರಾತ್ರಿಯೇ(First Night) ಮಧುಮಗಳು ಸಾವಿಗೀಡಾದ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಹೈದರಾಬಾದಿನ(Hyderabad)ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ಮಕ್ಕುವ ಮಂಡಲದ ದಬ್ಬಗೆದ್ದದಲ್ಲಿ ನಡೆದಿರುವ ಘಟನೆ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ ವಿವಾಹವಾದ ಕೆಲವೇ ಗಂಟೆಗಳಲ್ಲಿ ವಧು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಶುಕ್ರವಾರ ರಾತ್ರಿ 10 ಗಂಟೆಗೆ ಪಾರ್ವತಿಪುರಂನ ವತ್ಸ ಅಖಿಲಾ(Akhila) ಹಾಗೂ ಮಕ್ಕುವ ಮಂಡಲದ ದಬಗಡ್ಡ ಗ್ರಾಮದ ಭಾಸ್ಕರ್ ರಾವ್(Bhaskar Rao) ಅವರಿಗೆ ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹ ಮಾಡಲಾಯಿತು. ಮಧ್ಯರಾತ್ರಿಯವರೆಗೂ ನಡೆದ ಮದುವೆ ಮುಗಿದ ನಂತರ ವಧು ಅಖಿಲಾ ಮಲಗುವ ಕೋಣೆಗೆ ಹೋಗಿ ಮಲಗಿದ್ದಳು. ಮರುದಿನ ಬೆಳಗ್ಗೆ ಅಖಿಲಾ ಬೆಡ್‌ರೂಮ್‌ನಿಂದ ಎಷ್ಟು ಹೊತ್ತಾದರೂ ಹೊರಗೆ ಬರದ ಕಾರಣ ಮನೆಯವರು ಬಂದು ಎಬ್ಬಿಸಿದರು. ಆದರೆ ಎಷ್ಟು ಕರೆದರೂ ಅಖಿಲಾ ಎಚ್ಚರಗೊಳ್ಳದೆ ಪ್ರಜ್ಞಾಹೀನಳಾಗಿದ್ದದ್ದು ಕಂಡುಬಂದಿತು.
ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಕೂಡಲೇ ಅಖಿಲನನ್ನು ಮಕ್ಕುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಥಿತಿ ಗಂಭೀರವಾಗಿದ್ದನ್ನು ಕಂಡ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಅಖಿಲನನ್ನು ಸಾಲೂರು ಏರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ತಕ್ಷಣ ಅಲ್ಲಿಗೆ ಸ್ಪಂದಿಸಿದ ವೈದ್ಯರು ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆ ನಡೆಸಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅಖಿಲಾ ಸಾವನ್ನಪ್ಪಿದ್ದನ್ನು ವೈದ್ಯರು ತಿಳಿಸಿದ್ದಾರೆ.
ಘಟನೆ ತಿಳಿದು ತಕ್ಷಣ ಪೋಲೀಸರು ಸ್ಥಳಕ್ಕಾಗಮಿಸಿದ್ದಾರೆ. ವಿಚಾರಣೆ ನಡೆಸಿದರು ಏನೂ ಪ್ರಯೋಜನ ಆಗಿಲ್ಲ. ಯತಾಸ್ಥಿತಿ ಘಟನೆ ವಿವರ ದಾಖಲಿಸಿದ್ದಾರೆ. ಬೆಳಗಿದ್ದಂದ ಖುಷಿಯಿಂದ ಇದ್ದ ಅಖಿಲಾ ದಿಢೀರ್ ಎಂದು ಸಾವಿಗೀಡಾಗಿದ್ದು ಮನೆಯವರನ್ನು ಬೆಚ್ಚಿ ಬೀಳಿಸಿದೆ. ಮರಣೋತ್ತರ ಪರೀಕ್ಷೆ ಬಳಿಕ ನಿಜಾಂಶ ತಿಳಿಯಲಿದೆ.
ಇದನ್ನೂ ಓದಿ: Belthangady Crime: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ