Terror Attack: ದಶಮಾನೋತ್ಸವ ಸಂಭ್ರಮ ಹಿನ್ನೆಲೆ : ವಿಶ್ವದೆಲ್ಲೆಡೆ ದಾಳಿಗೆ ಕರೆ ನೀಡಿದ ಐಸಿಸ್ ಉಗ್ರ ಸಂಘಟನೆ

Share the Article

Terror Attack: ಜಗತ್ತಿನ ಅತಿ ಭಯಾನಕ ಭಯೋತ್ಪಾದಕ ಸಂಘಟನೆಯೆಂಬ ಕುಖ್ಯಾತಿ ಪಡೆದಿರುವ ಐಸಿಸ್ ಜನ್ಮ ತಳೆದು ಹತ್ತು ವರ್ಷ ತುಂಬಿದ್ದು, ಅದರ ಸಂಭ್ರಮಾಚರಣೆಗಾಗಿ ಜಗತ್ತಿನಾದ್ಯಂತ ನಾಸ್ತಿಕರ ಮೇಲೆ ಉಗ್ರದಾಳಿ ನಡೆಸುವಂತೆ ತನ್ನ ‘ಒಂಟಿ ತೋಳಗಳಿಗೆ’ ಕರೆ ನೀಡಿದೆ.

ಇಡೀ ಜಗತ್ತನ್ನು ಇಸ್ಲಾಮಿಕ್ ಸಾಮ್ರಾಜ್ಯವಾದ ‘ಕ್ಯಾಲಿಫೇಟ್’ನ ಆಳ್ವಿಕೆಗೆ ತರುವಂತೆ 2014ರ ರಂಜಾನ್‌ನಂದು ಐಸಿಸ್ ಕರೆ ನೀಡಿತ್ತು. ಆ ಒಂದು ಘೋಷಣೆಯೇ ಐಸಿಸ್‌ನ ಹುಟ್ಟಿಗೆ ಕಾರಣ ಎಂದು ಹೇಳಲಾಗುತ್ತದೆ.

ಇತ್ತೀಚೆಗೆ ರಷ್ಯಾದ ಮಾಸ್ಕೋದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಐಸಿಸ್ ವಕ್ತಾರ ಪ್ರಶಂಸೆ ವ್ಯಕ್ತಪಡಿಸಿದ್ದು, ಜಗತ್ತಿನ ಮುಸ್ಲಿಮರು ಐಸಿಸ್‌ ಸೇರಬೇಕು ಎಂದು ಆಡಿಯೋದಲ್ಲಿ ಕರೆ ನೀಡಿದ್ದಾನೆ.

ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಗುಪ್ತಚರ ಸಂಸ್ಥೆಗಳು ಹೆಚ್ಚಿನ ಕಣ್ಗಾಗಲು ಇರಿಸಿದ್ದಾರೆ. ಇನ್ನು ಭಾರತದ ಗುಪ್ತಚರ ಏಜೆನ್ಸಿಗಳು ದೇಶದಾದ್ಯಂತ ಕಟ್ಟೆಚ್ಚರ ವಹಿಸಿವೆ ಎನ್ನಲಾಗಿದೆ.

ಇದನ್ನೂ ಓದಿ: College Girl Jumps To Death: ಕಾಲೇಜಿನಲ್ಲಿ ಲೈಂಗಿಕ ಕಿರುಕುಳ; ಬಿಲ್ಡಿಂಗ್‌ನಿಂದ ಹಾರಿ ಬಾಲಕಿ ಆತ್ಮಹತ್ಯೆ

Leave A Reply

Your email address will not be published.