HSRP: ಮೇ ತಿಂಗಳ ಬಳಿಕವೂ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ಏನಾಗುತ್ತೆ ?!

HSRP ನಂಬರ್‌ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. HSRP ಹಾಕಿಸದಿದ್ದರೂ ಇದುವರೆಗೂ ಏನೋ ಸರ್ಕಾರ ಗಡುವುಗಳನ್ನು ವಿಸ್ತರಿಸುತ್ತಾ ಬಂದಿದೆ. ಆದರೆ ಮೇ 31ರ ನಂತರವೂ ಹಾಕಿಸದಿದ್ದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಹೊಸ ಅಪ್ಡೇಟ್.

ಇದನ್ನೂ ಓದಿ: Hair Straightening: ಹೇರ್ ಸ್ಟ್ರೈಟ್ನಿಂಗ್ ಟ್ರೀಟ್ಮೆಂಟ್ ಮಾಡುತ್ತಿದ್ದ ಮಹಿಳೆಗೆ ಕಿಡ್ನಿ ಪ್ರಾಬ್ಲಂ; ವರದಿಯಲ್ಲಿ ಹೊರಬಿತ್ತು ಈ ಗಂಭೀರ ವಿಷಯ

ದೇಶದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಮೇ 31ರ ಒಳಗಾಗಿ High Security Registration Plate (HSRP) ಅಳವಡಿಸಿಕೊಳ್ಳಬೇಕು. ಇದು ಕಡ್ಡಾಯ ಕೂಡ. ಇಲ್ಲವಾದರೆ ಭಾರೀ ದಂಡ ಕಟ್ಟಬೇಕಾದೀತು. ಈ ಬಗ್ಗೆ RTO ಖಡಕ್ ವಾರ್ನಿಂಗ್ ನೀಡಿದೆ. ಇನ್ನು ಮುಂದೆ ಗಡುವು ವಿಸ್ತರಿಸುವುದು ಡೌಟ್ ಎನ್ನಲಾಗಿದೆ. ಹಾಗಿದ್ರೆ ಮೇ 31ರ ಬಳಿಕವೂ HSRP ನಂಬರ್ ಪ್ಲೇಟ್ ಹಾಕದಿದ್ರೆ ಎಷ್ಟು ದಂಡ ಕಟ್ಟಬೇಕು ಎಂಬುದು ಇಲ್ಲಿದೆ ನೋಡಿ.

ಇದನ್ನೂ ಓದಿ: Arvind kejriwal: ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವರ ಪತ್ನಿ ಸುನೀತಾ ಸಿಎಂ ಆಗುವ ಸಾಧ್ಯತೆ

HARP ನಂಬರ್ ಪ್ಲೇಟ್ ಅಳವಡಿಸದಿದ್ದರೆ ಕಟ್ಟಬೇಕಾದ ದಂಡ:

HSRP Number Plate ಇಲ್ಲದ ವಾಹನ ಮಾಲೀಕರೆ ಎಚ್ಚರ. ಯಾಕೆಂದರೆ ನೀವು ಈ ನಂಬರ್ ಪ್ಲೇಟ್ ಅಳವಡಿಸದೆ ಮೊದಲ ಬಾರಿಗೆ ರಸ್ತೆಗಿಳಿದರೆ 1000 ದಂಡ ಪಾವತಿಸಬೇಕು. ಇದರಿಂದಲೂ ಎಚ್ಚರಗೊಳ್ಳದೆ ನಂಬರ್ ಪ್ಲೇಟ್ ಹಾಕಿಸದೆ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮೇ 31ರ ಒಳಗೆ ಸರ್ಕಾರದ ಸೂಚನೆಂತೆ HSRP ಅಳವಡಿಸಿ.

 

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?

ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.

• ವಾಹನ ತಯಾರಕರನ್ನು ಆಯ್ಕೆ ಮಾಡಿ

• ವಾಹನದ ಮೂಲ ವಿವರ ಭರ್ತಿ ಮಾಡಿ

• ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)

• HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.

• ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.

• ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ

• ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.

3 Comments
  1. […] ಇದನ್ನೂ ಓದಿ: HSRP: ಮೇ ತಿಂಗಳ ಬಳಿಕವೂ HSRP ನಂಬರ್ ಪ್ಲೇಟ್ ಹಾಕಿ… […]

  2. […] ಇದನ್ನೂ ಓದಿ: HSRP: ಮೇ ತಿಂಗಳ ಬಳಿಕವೂ HSRP ನಂಬರ್ ಪ್ಲೇಟ್ ಹಾಕಿ… […]

Leave A Reply

Your email address will not be published.