Udupi (Kaup): ಮಹಿಳಾ ಸಿಬ್ಬಂದಿ ಪೊಲೀಸ್‌ ಕ್ವಾಟ್ರಸ್‌ನಲ್ಲಿ ನೇಣಿಗೆ ಶರಣು

Udupi (Kaup): ಮಹಿಳಾ ಸಿಬ್ಬಂದಿಯೋರ್ವರು ಪೊಲೀಸ್‌ ಕ್ವಾಟ್ರಸ್‌ನಲ್ಲಿ ನೇಣಿಗೆ ಶರಣಾದ ಘಟನೆಯೊಂದು ಇಂದು ಮುಂಜಾನೆ (ಮಾ.30) ರಂದು ತಿಳಿದು ಬಂದಿದೆ.

ಇದನ್ನೂ ಓದಿ: HSRP: ಮೇ ತಿಂಗಳ ಬಳಿಕವೂ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ಏನಾಗುತ್ತೆ ?!

ಜ್ಯೋತಿ (29) ಎಂಬ ಮಹಿಳಾ ಸಿಬ್ಬಂದಿಯೇ ನೇಣಿಗೆ ಶರಣಾದ ಯುವತಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರು ಶುಕ್ರವಾರ ತಮ್ಮ ಡ್ಯೂಟಿ ಮಾಡಿದ್ದು, ನಂತರ ಎಂದಿನಂತೆ ರಾತ್ರಿ ಕ್ವಾಟ್ರಸ್‌ಗೆ ಮರಳಿದ್ದಾರೆ. ಶನಿವಾರ ಬೆಳಗ್ಗೆ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: Hair Straightening: ಹೇರ್ ಸ್ಟ್ರೈಟ್ನಿಂಗ್ ಟ್ರೀಟ್ಮೆಂಟ್ ಮಾಡುತ್ತಿದ್ದ ಮಹಿಳೆಗೆ ಕಿಡ್ನಿ ಪ್ರಾಬ್ಲಂ; ವರದಿಯಲ್ಲಿ ಹೊರಬಿತ್ತು ಈ ಗಂಭೀರ ವಿಷಯ

ಮಹಿಲೆಯ ಪತಿ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಸಿಬ್ಬಂದಿಯಾಗಿದ್ದು, ಬೆಳಿಗ್ಗೆ ಕರ್ತವ್ಯಕ್ಕೆಂದು ಹೋಗಲು ಹೊರಟಿದ್ದು ಈ ಸಮಯದಲ್ಲಿ ಪತ್ನಿ ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ. ತಕ್ಷಣವೇ ಅವರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದ್ದು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ.‌

ಜ್ಯೋತಿ ಅವರು ಬಾಗಲಕೋಟೆ ಮೂಲದವರಾಗಿದ್ದು, ಕೌಟುಂಬಿಕ ಕಲಹದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರತಿನಿತ್ಯ ದಂಪತಿ ಮಧ್ಯೆ ಜಗಳವಾಗುತ್ತಿರುವ ಕುರಿತು ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ. ಪತಿ ಹಾಲ್‌ನಲ್ಲಿ ಮಲಗಿದ್ದ ಸಂದರ್ಭದಲ್ಲಿ ಜ್ಯೋತಿ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾಳೆ.

ಕಾಪು ಎಸ್‌ಐ ಅಬ್ದುಲ್‌ ಖಾದರ್‌ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.