Indian Navy: ಕಡಲ್ಗಳ್ಳರ ದಾಳಿಯಿಂದ 23 ಜನ ಪಾಕಿಸ್ತಾನದ ಸಿಬ್ಬಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ
Indian Navy: ಆತ ಶತ್ರುವೇ ಆಗಿರಲಿ ರಕ್ಷಣೆ ಕೋರಿ ಬಂದವರನ್ನು ರಕ್ಷಿಸುವುದು ನಮ್ಮ ಭಾರತೀಯರ ಗುಣ. ಅದೇ ರೀತಿಯಲ್ಲಿ ಭಾರತೀಯ ನೌಕಾಪಡೆ ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಯಿಂದ 23 ಜನ ಪಾಕಿಸ್ತಾನ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ.
ಇದನ್ನೂ ಓದಿ: RTC -Adhaar Link: ನಿಮ್ಮ RTC ಯನ್ನು ಆಧಾರ್’ಗೆ ಲಿಂಕ್ ಮಾಡಬೇಕಾ? ಸ್ವತಃ ಮೊಬೈಲ್ ಮೂಲಕ ನೀವೇ ಆಧಾರ್ ಲಿಂಕ್ ಮಾಡಿ !
ಅರಬ್ಬೀ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಯನ್ನು ಹಿಮ್ಮೆಟ್ಟಿಸಿರುವ ಭಾರತೀಯ ನೌಕಾಪಡೆಯು 12 ಗಂಟೆಗಳ ಕಾಲ ನಡೆದ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯಲ್ಲಿ ಇರಾನಿನ ಮೀನುಗಾರಿಕಾ ಹಡಗನ್ನು ವಶಕ್ಕೆ ಪಡೆದು ಅದರಲ್ಲಿದ್ದ 23 ಪಾಕಿಸ್ತಾನಿ ಸಿಬ್ಬಂದಿಯನ್ನು ರಕ್ಷಿಸಿದೆ.
ಇದನ್ನೂ ಓದಿ: Daniel Balaji Passes Away: ಖ್ಯಾತ ಖಳನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ
“ಮಾರ್ಚ್ 28ರ ತಡರಾತ್ರಿ ಇರಾನಿನ ಮೀನುಗಾರಿಕಾ ಹಡಗು ‘ಅಲ್-ಕಂಬರ್ 786’ ನಲ್ಲಿ ಸಂಭವಿಸಬಹುದಾದ ಕಡಲ್ಗಳ್ಳತನದ ಘಟನೆಯ ಮಾಹಿತಿಯ ಆಧಾರದ ಮೇಲೆ, ಅರೇಬಿಯನ್ ಸಮುದ್ರದಲ್ಲಿ ಕಡಲ ಭದ್ರತಾ ಕಾರ್ಯಾಚರಣೆಗಾಗಿ ನಿಯೋಜಿಸಲಾದ ಎರಡು ಭಾರತೀಯ ನೌಕಾಪಡೆಯ ಹಡಗುಗಳು ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗುಗಳನ್ನು ತಡೆಯಲು ಕಳುಹಿಸಲಾಯಿತು” ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾ ತಂಡಗಳು ನಂತರ ಹಡಗನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಮೀನುಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸಲು ಸುರಕ್ಷತೆಯ ದೃಷ್ಟಿಯಿಂದ ಅದು ಸಮುದ್ರದಲ್ಲಿ ಸಾಗುವ ಸಾಮರ್ಥ್ಯ ಪರಿಶೀಲಿಸಿತು ಎಂದು ಭಾರತೀಯ ನೌಕಾಪಡೆ ತಿಳಿಸಿದೆ.