Daniel Balaji Passes Away: ಖ್ಯಾತ ಖಳನಟ ಡೇನಿಯಲ್‌ ಬಾಲಾಜಿ ಹೃದಯಾಘಾತದಿಂದ ನಿಧನ

Daniel Balaji Passes Away: ಖ್ಯಾತ ನಟ ಡೇನಿಯಲ್ ಬಾಲಾಜಿ ಅವರು ತಮ್ಮ 48 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಅದ್ಬುತ ನಟನೆಗೆ ಹೆಸರಾದ ತಮಿಳು ನಟನ ಹಠಾತ್ ನಿಧನದಿಂದಾಗಿ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ. ಅನೇಕ ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ನಟನ ಮೃತ ದೇಹವನ್ನು ಇಂದು ಅಂದರೆ ಶನಿವಾರದಂದು ಪುರಸೈವಲಕಂನಲ್ಲಿರುವ ಅವರ ನಿವಾಸದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ವರದಿಯಾಗಿದೆ.

ವಡಾ ಚೆನ್ನೈನ ವೆಟ್ಟೈಯಾಡು ವಿಲಾಯಡು, ತಂಬಿ ಚಿತ್ರಗಳಲ್ಲಿ ಅದ್ಭುತ ನಟನೆಗೆ ಹೆಸರುವಾಸಿಯಾಗಿರುವ ಡೇನಿಯಲ್ ಬಾಲಾಜಿ ತಮ್ಮ ಉತ್ತಮ ನಟನೆಗೆ ಹೆಸರು ವಾಸಿಯಾಗಿದ್ದು. ಶುಕ್ರವಾರ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಚೆನ್ನೈನ ಕೊಟ್ಟಿವಾಕಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಕೊನೆಯುಸಿರೆಳೆದಿದ್ದಾರೆ.

ಡೇನಿಯಲ್ ತನ್ನ ನಟನಾ ವೃತ್ತಿಜೀವನವನ್ನು ಪ್ರಸಿದ್ಧ ಧಾರಾವಾಹಿ ಚಿಥಿಯೊಂದಿಗೆ ಪ್ರಾರಂಭಿಸಿದ್ದು, ಇದಾದ ನಂತರ ಹಿಂತಿರುಗಿ ನೋಡದೆ ಕಾಕ ಕಾಖ, ಪೊಲ್ಲಾಧವನ್, ವೆಟ್ಟೈಯಾಡು ವಿಲಾಯಡು, ವಡ ಚೆನ್ನೈ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದರು. ನಟ ತನ್ನ ಜೀವನದಲ್ಲಿ ಅನೇಕ ಸವಾಲಿನ ಪಾತ್ರಗಳನ್ನು ಸಹ ಮಾಡಿದ್ದಾರೆ. ಡೇನಿಯಲ್ ಸಾವಿನಿಂದ ತಮಿಳು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಡೇನಿಯಲ್ ಬಾಲಾಜಿ ಅವಡಿಯಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದು, ಅವರು ಒಬ್ಬ ಅತ್ಯುತ್ತಮ ನಟರಲ್ಲದೆ, ಒಬ್ಬ ಧರ್ಮನಿಷ್ಠ ವ್ಯಕ್ತಿಯೂ ಆಗಿದ್ದರು.

2 Comments
  1. […] ಇದನ್ನೂ ಓದಿ: Daniel Balaji Passes Away: ಖ್ಯಾತ ಖಳನಟ ಡೇನಿಯಲ್‌ ಬಾಲಾಜಿ … […]

Leave A Reply

Your email address will not be published.