New Reality Show : ಸದ್ಯದದಲ್ಲೇ ಬರ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಒಟ್ಟಾಗಿ ನಡೆಸೋ ಅತಿದೊಡ್ಡ ರಿಯಾಲಿಟಿ ಶೋ !!

New Reality Show : ಖಾಸಗೀ ವಾಹಿಗಳಲ್ಲಿ ದಿನಂಪ್ರತಿ ಒಂದೊಂದು ಹೊಸ ರಿಯಾಲಿಟಿ ಶೋಗಳು ಆರಂಭವಾಗುತ್ತಿವೆ. ವೀಕೆಂಡ್ ಬಂತೆಂದರೆ ಪ್ರೇಕ್ಷಕರ ಮನ ತಣಿಸಲು, ಎಲ್ಲರನ್ನೂ ರಂಜಿಸಲು ಅವು ರೆಡಿಯಾಗಿರುತ್ತವೆ. ಅಂತೆಯೇ ನಮ್ಮ ಪ್ರೇಕ್ಷಕರೂ ಕೂಡ, ಅದರಲ್ಲೂ ಹೆಮ್ಮೆಯ ಮಹಿಳೆಯರು ಎಲ್ಲಾ ಕೆಲಸ ಕಾರ್ಯ ಬದಿಗೊತ್ತಿ ವಾರಾಂತ್ಯದಲ್ಲಿ ಟಿವಿ ಮುಂದೆ ಹಾಜರ್ ಇರುತ್ತಾರೆ. ಸೀರಿಯಲ್ ಮಿಸ್ ಮಾಡಿದ್ರೂ ರಿಯಾಲಿಟಿ ಶೋಗಳಲ್ಲಿ ಒಂದನ್ನು ಮಿಸ್ ಮಾಡಲ್ಲ.

ಇದನ್ನೂ ಓದಿ: Mangaluru: ಹಿಂದುತ್ವದ ಕೋಟೆ ಬೇಧಿಸಿ ಈ ಬಾರಿ ಜಯ; ಕಾಂಗ್ರೆಸ್‌ ತೆಕ್ಕೆಗೆ ಕ್ಷೇತ್ರ- ಅಭಯಚಂದ್ರ ಜೈನ್‌

https://www.instagram.com/reel/C5GzR0ANzTH/?igsh=YzN3N3dlaWlwZWU=

ಅಂತೆಯೇ ಇದೀಗ ನಾಡಿನ ಪ್ರಸಿದ್ಧ ಖಾಸಗಿ ವಾಹಿನಿಯಾದ ಜೀ ಕನ್ನಡದಲ್ಲಿ ಕಿರುತರೆಯಲ್ಲಿ ಮೊಟ್ಟ ಮೊದಲ ಬಾರಿ ಎನ್ನುವಂತೆ ಅತಿ ದೊಡ್ಡ ಹೊಹ ರಿಯಾಲಿಟಿ ಶೋ(New Reality Show ) ಸದ್ಯದಲ್ಲೇ ಆರಂಭವಾಗಲಿದೆ. ಇದು ಕಾಮನ್ ವಿಷ್ಯ. ಆದರ್ರೆ ದೊಡ್ಡ ಸರ್ಪೈಸ್ ಏನು ಅಂದ್ರೆ ಈ ರಿಯಾಲಿಟಿ ಶೋ ನಡೆಸಿಕೊಡುವವರು ಕನ್ನಡ ಜನ ಮೆಚ್ಚಿದ, ಎಲ್ಲರ ಅಚ್ಚು ಮೆಚ್ಚಿನ ನಾಯಕರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star darshan), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ರಾಕಿಂಗ್ ಸ್ಟಾರ್ ಯಶ್(Yash) !! ಎನ್ನುವುದೇ ದೊಡ್ಡ ವಿಶೇಷ. ಅಭಿಮಾನಿಗಳಿಗೆ ಇನ್ನು ಹಬ್ಬವೋ ಹಬ್ಬ.

ಇದನ್ನೂ ಓದಿ: Lok Sabha Elections Holiday: ಎ.26 ರಂದು ಸಾರ್ವಜನಿಕ ರಜೆ ಸಾರಿದ ಕೇರಳ

ಹೌದು, ಈ ಕುರಿತಂತೆ ಜೀ ವಾಹಿನಿಯು ಪ್ರೋಮೋ ಒಂದನ್ನು ರಿಲೀಸ್ ಮಾಡಿದೆ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ಕನ್ನಡ ಕಿರುತರೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ನಡೆಸಿಕೊಡುವ ಹೊಚ್ಚ ಹೊಸ ರಿಯಾಲಿಟಿ ಶೋ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಎಂದು ಅದರಲ್ಲಿ ಹೇಳಲಾಗಿದೆ. ಮೂವರು ಹೀರೋಗಳ ಫೋಟೋ ಹಾಕಿ ಗ್ರಾಂಡ್ ಪ್ರೋಮ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ಕಾತರ, ಕುತೂಹಲವನ್ನು ಹೆಚ್ಚುಮಾಡಿದೆ. ಆದರೆ ಇದು ಯಾವುದಕ್ಕೆ ಸಂಬಂಧಪಟ್ಟ ಶೋ, ಏನನ್ನು ಮಾಡಲಾಗುತ್ತದೆ ಎಂದು ಇದುವರೆಗೂ ಹೇಳಿಲ್ಲ.

ಅಂದಹಾಗೆ ಇದು ಒಂದು ರೀತಿಯಲ್ಲಿ ಅಭಿಮಾನಿಗಳಿಗೆ ದೊಡ್ಡ ಹಬ್ಬ ಆಗಿದೆ. ಯಾಕೆಂದರೆ ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವೆ ಮುನಿಸು ಇರುವುದು, ಇಬ್ಬರೂ ಮಾತು ಬಿಟ್ಟಿರುವುದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಇಬ್ಬರೂ ಒಂದಾದರು ಎಂದು ಅಭಿಮಾನಿಗಳು ಸಂಭ್ರಮಿಸಿದರೂ ಅದು ಸುಳ್ಳೆನ್ನಲಾಗಿತ್ತು. ಆದರೀಗ ಇಬ್ಬರೂ ಅಕ್ಕ ಪಕ್ಕ ಕೂತು ಯಶ್ ಅವರನ್ನೂ ಜೊತೆ ಸೇರಿಸಿಕೊಂಡು ಒಂದು ರಿಯಾಲಿಟಿ ಶೋ ನಡೆಸುತ್ತಾರೆ ಎಂದರೆ ಅದು ಎಲ್ಲರಿಗೂ ಖುಷಿಯೇ ಸರಿ !!

Leave A Reply

Your email address will not be published.