Crime: ಸ್ನೇಹಿತನ ಗುದದ್ವಾರಕ್ಕೆ ಗಾಳಿ ಬಿಟ್ಟ ಇನ್ನೋರ್ವ ಸ್ನೇಹಿತ; ಕರುಳು ಬ್ಲಾಸ್ಟ್‌, ಯುವಕ ಸಾವು

Crime: ಸ್ನೇಹಿತನ ಖಾಸಗಿ ಅಂಗ (ಗುದದ್ವಾರ) ಕ್ಕೆ ಸ್ನೇಹಿತನೋರ್ವ ಗಾಳಿ ಬಿಟ್ಟ ಪರಿಣಾಮ ಯುವಕನ ಕರುಳು ಬ್ಲಾಸ್ಟ್‌ ಆಗಿ ಮೃತ ಹೊಂದಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಮೊತ್ತ ಮೊದಲ ಹಾರಾಟ ನಡೆಸಿದ LCA ತೇಜಸ್ ಮಾರ್ಕ್ 1A ಫೈಟರ್ ಏರ್ ಕ್ರಾಫ್ಟ್

ಯೋಗೀಶ್‌ (28) ಎಂಬಾತನೇ ಮೃತ ಯುವಕ. ಈ ಘಟನೆ ಮಾರ್ಚ್‌ 25 ರಂದು ನಡೆದಿದೆ. ಅಂದು ಬೈಕ್‌ ರಿಪೇರಿಗೆಂದು ಸಂಪಿಗೆಹಳ್ಳಿಯ ನಿವಾಸಿ ಯೋಗೇಶ್‌ ಬೈಕ್‌ ಸರ್ವಿಸ್‌ ಸೆಂಟರ್ಗೆ ಹೋಗಿದ್ದಾನೆ. ಅಲ್ಲಿ ಸ್ನೇಹಿತ ಮುರಳಿ ಕೆಲಸ ಮಾಡುತ್ತಿದ್ದು, ಆತ ಗಾಡಿ ಸರ್ವಿಸ್‌ ಮಾಡಿದ್ದಾನೆ. ಅನಂತರ ಮುರಳಿ ಏರ್‌ ಫ್ರೆಶರ್‌ ಪೈಪ್ನಿಂದ ಸ್ನೇಹಿತ ಯೋಗೇಶ್‌ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಆತನ ಕರುಳು ಬ್ಲಾಸ್ಟ್‌ ಆಗಿ ಯುವಕ ಮೃತ ಹೊಂದಿದ್ದಾನೆ.

ಇದನ್ನೂ ಓದಿ: Chitradurga: ಚಿತ್ರದುರ್ಗದಲ್ಲಿ ಗಂಡಸರೇ ಇಲ್ಲವೇ ? : ಗೋವಿಂದ್ ಕಾರಜೋಳ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ನಿರ್ಧಾರಕ್ಕೆ ಬಿಜೆಪಿ ಶಾಸಕರ ಪುತ್ರನ ಕಿಡಿ

ಮೊದಲಿಗೆ ಮುರಳಿ ಮತ್ತು ಯೋಗೀಶ ಇಬ್ಬರೂ ತರಲೆ ಮಾಡುತ್ತಿದ್ದರು. ಮುರಳಿ ಯೋಗೀಶನ ಮುಖ ಹೊಟ್ಟೆಗೆ ಮೊದಲು ಗಾಳಿ ಬಿಟ್ಟಿದ್ದ. ನಂತರ ಈ ತರಲೆ ಮುಂದುವರಿದು ಯೋಗೀಶ್‌ ಗುದದ್ವಾರಕ್ಕೆ ಏರ್‌ಫ್ರೆಶರ್‌ನಿಂದ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಯೋಗೀಶ್‌ ಗೆ ನೋವು ಹೆಚ್ಚಾಗಿ ಕಿರುಚಿ ಬಿದ್ದಿದ್ದಾನೆ. ಕೂಡಲೇ ಮುರಳಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರೂ ಯೋಗೇಶ್‌ ಮೃತ ಹೊಂದಿದ್ದಾನೆ.

 

ಇದೀಗ ಈ ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮುರಳಿಯ ಬಂಧನ ಮಾಡಲಾಗಿದೆ.

Leave A Reply

Your email address will not be published.