Home Crime Belthangady: ತುಮಕೂರು ತ್ರಿಬ್ಬಲ್‌ ಮರ್ಡರ್‌ ಪ್ರಕರಣ; ಮನೆ ತಲುಪಿದ ಮೂವರ ಮೃತದೇಹ

Belthangady: ತುಮಕೂರು ತ್ರಿಬ್ಬಲ್‌ ಮರ್ಡರ್‌ ಪ್ರಕರಣ; ಮನೆ ತಲುಪಿದ ಮೂವರ ಮೃತದೇಹ

Belthangady

Hindu neighbor gifts plot of land

Hindu neighbour gifts land to Muslim journalist

Belthangady: ತುಮಕೂರಿನ ಕೋರಾ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ನಡೆದ ಬೆಳ್ತಂಗಡಿಯ ಮೂವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರ ಮೃತ ದೇಹವನ್ನು ಇಂದು ಶುಕ್ರವಾರ ಅವರ ಮನೆಗೆ ತಲುಪಿಸಲಾಗಿದೆ.

 

ನಿಧಿ ಆಸೆಗೆ ಮಾ.22 ರಂದು ಬೆಳ್ತಂಗಡಿಯ ಮೂವರನ್ನು ಅವರ ಕಾರಿನಲ್ಲಿ ಕಟ್ಟಿ ಹಾಕಿ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರ ದೇಹಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಮೃತ ದೇಹವನ್ನು ಅವರ ಮನೆ ಮಂದಿಗೆ 7 ದಿನಗಳ ಬಳಿಕ ಮಾ.28 ರಂದು ಹಸ್ತಾಂತರ ಮಾಡಲಾಗಿದ್ದು, ಮನೆಗೆ ಇಂದು ತಲುಪಿದೆ.

ಇದನ್ನೂ ಓದಿ: Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ; ಆರು ಮಂದಿ ವಶಕ್ಕೆ

 

ಇಂದು ಬೆಳಗ್ಗೆ ಶಾಹುಲ್‌ ಹಮೀದ್‌ ಹಾಗೂ ಇಸಾಕ್‌ ರವರ ಮೃತದೇಹ ಬೆಳಗಿನ ಜಾವ ಉಜಿರೆ ಮೊಯ್ಯುದ್ದಿನ್‌ ಜಮಾ ಮಸೀದಿ ಹಳೆಪೇಟೆಗೆ ತಲುಪಿದೆ. ಸಿದ್ದೀಕ್‌ ಅವರ ಮೃತದೇಹ ಶಿರ್ಲಾಲ್‌ ಮಸೀದಿಗೆ ತಲುಪಿದೆ.

ಘಟನೆ ವಿವರ: ಹನ್ನೊಂದು ದಿನದ ಹಿಂದೆ ತುಮಕೂರಿಗೆಂದು ವ್ಯವಹಾರ ಕುರಿತು ಮದಡ್ಕದ ರಫೀಕ್‌ ಎಂಬುವವರ ಎಸ್‌ಪ್ರೆಸ್‌ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ಸಾಹುಲ್‌ ಹಮೀದ್‌ (45), ಇಸಾಕ್‌(56), ಸಿದ್ದಿಕ್‌( 34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು. ನಕಲಿ ಚಿನ್ನದ ದಂಧೆಯ ಆಸೆಗೆ ಇವರು ಬಲಿಯಾಗಿದ್ದಾರೆ. ನಮ್ಮ ಜಾಗದಲ್ಲಿ ಕೃಷಿ ಮಾಡುವ ಸಂದರ್ಭ ಚಿನ್ನದ ಹಂಡೆ ದೊರಕಿದ್ದು, ಚಿನ್ನವನ್ನು ಕಡಿಮೆ ಬೆಲೆಗೆ ನಿಮಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆದು ಹಣ ದೋಚುವ ಪ್ಲ್ಯಾನ್‌ ಮಾಡಿ ಕರೆಸಿಕೊಳ್ಳಲಾಗಿತ್ತು. ನಂತರ ಇವರ ಕೈಕಾಲನ್ನು ಕಟ್ಟಿ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಾವು; ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ದುಷ್ಕರ್ಮಿಗಳು

ಮಾ.22 ರಂದು ಸುಮೊಟೋ ಪ್ರಕರಣವನ್ನು ಕೋರಾ ಪೊಲೀಸ್‌ ಠಾಣೆಯಲ್ಲಿ ದಾಖಲು ಮಾಡಿ, ತನಿಖೆ ನಡೆಸಿದ್ದು, ಬೆಳ್ತಂಗಡಿಯ ಮೂವರ ಶವ ಸಂಪೂರ್ಣವಾಗಿ ಸುಟ್ಟು ಹೋಗಿರುವ ಪರಿಣಾಮ ಡಿಎನ್‌ಎ ಪರೀಕ್ಷೆ ನಂತರ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದು, ಒಂದು ವಾರ ಡಿಎನ್‌ಎ ವರದಿ ಬರಲು ಬೇಕಾಗುತ್ತದೆ ಎಂದು ಪೊಲೀಸರು ಮನೆಮಂದಿಗೆ ತಿಳಿಸಿದ್ದರು.

ಪೊಲೀಸರು ಈ ಘಟನೆಗೆ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕ್ರರಣದ ಪ್ರಮುಖ ವ್ಯಕ್ತಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.