Bengaluru: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಪ್ರಮುಖ ಆರೋಪಿ !!

Bengaluru: ರಾಮೇಶ್ವರಂ ಕೆಫೆ ಸ್ಫೋಟ(Rameshwaram cafe blast) ಪ್ರಕರಣದ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಎನ್ಐಎ ಯಶಸ್ವಿಯಾಗಿದೆ. ಇದೀಗ ಈ ಬೆನ್ನಲ್ಲೇ ಈ ಆರೋಪಿಯು ಸ್ಪೋಟಕ ಸತ್ಯವನ್ನು ಹೊರಹಾಕಿದ್ದಾರನೆ.

ಇದನ್ನೂ ಓದಿ: Mangalore: ಮಂಗಳೂರು ಕ್ಷೇತ್ರದಲ್ಲಿ ‘ಸೌಜನ್ಯಗಳಿಗಾಗಿ ನೋಟಾ’ ಚಳವಳಿ ಶುರು – ಈ ಸಲ ಎಲ್ಲಾ ಮತ ಲೆಕ್ಕಾಚಾರ ಅಡಿ ಮೇಲು !

ಹೌದು, ನಿನ್ನೆ ದಿನ(ಮಾ.78) ಬರೋಬ್ಬರಿ 3 ರಾಜ್ಯಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ ಬಳಿಕ ಮುಝಮ್ಮಿಲ್ ಶರೀಫ್(Muzammil Shareef) ಎಂಬಾತನನ್ನು ಎನ್ಐಎ ಬಂಧಿಸಿದೆ. ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ತಂಡಗಳು ದಾಳಿ ನಡೆಸಿದ ನಂತರ ಶರೀಫ್‌ನನ್ನು ಬೆಂಗಳೂರಿನಿಂದ ಕರೆದೊಯ್ದು ಸಹ ಸಂಚುಕೋರನೆಂದು ಪರಿಗಣಿಸಿ ಕಸ್ಟಡಿಯಲ್ಲಿ ಇರಿಸಲಾಗಿದೆ. ಇಂದು ಎನ್ ಐ ಎ ಅಧಿಕಾರಿಗಳ ವಿಚಾರಣೆ ವೇಳೆ ಮುಜಾಮಿಲ್ ಸ್ಪೋಟಕ ವಾದಂತಹ ಮಾಹಿತಿಯನ್ನು ಹೊರ ಹಾಕಿದ್ದು, ಬಾಂಬ್ ದಾಳಿ ಸಂಚಿಗು ಮುನ್ನವೇ ಬೆಂಗಳೂರು ಸಮೀಪವೇ ಅವರು IED ಬಾಂಬ್ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.

ಇದನ್ನೂ ಓದಿ: Yatindra Siddaramaia: “ಅಮಿತ್ ಶಾ ಗೂಂಡ, ರೌಡಿ” : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಯತೀಂದ್ರ ಸಿದ್ದರಾಮಯ್ಯ

ಅಂದಹಾಗೆ ಮತೀನ್, ಮುಸಫಿರ್ ಜೊತೆ ಮುಜಾಮಿಲ್ ಸಂಪರ್ಕದಲ್ಲಿದ್ದು, ಮುಜಾಮಿಲ್ ಮೂಲಕ ಅಗತ್ಯ ವಸ್ತುಗಳನ್ನು ಶಂಕಿತರು ತರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಸ್ಪೋಟಕ್ಕೆ ಬೇಕಾದಂತಹ ಕಚ್ಚಾ ಸಾಮಗ್ರಿಗಳನ್ನು ತರಿಸಿಕೊಂಡಿದ್ದರು ಸಂಚಿನ ಬಳಿಕ ಬೆಂಗಳೂರು ಸಮೀಪವೇ ಬಾಂಬ್ ಅನ್ನು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ ಬಾಂಬ್‌ ಸ್ಫೋಟ ನಡೆದ ದಿನ ಆತ ಬೆಂಗಳೂರಿನಲ್ಲೇ ಇದ್ದು ಸ್ಫೋಟದ ಸಂಚುಕೋರ ಮುಸ್ಸಾವಿರ್ ಶಜೀಬ್ ಹುಸೇನ್‌ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಬಂದಿದೆ.

ಸದ್ಯ ಬೆಂಗಳೂರಿನ ಸಮೀಪ ಐಇಡಿ ಸಿದ್ದತೆ ಮಾಡಿಕೊಂಡಿದ್ದಾರೆ. ಎಲ್ಲಾ ಆಯಾಮಗಳಲ್ಲಿ ಇದೀಗ NIA ತಂಡ ತನಿಖೆಗೆ ಮುಂದಾಗಿದೆ.ಸ್ಪೋಟಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಧರಿಸಿಕೊಂಡಿದ್ದಾರೆ ಎಂದು NIA ತಂಡ ಮಾಹಿತಿ ಸಂಗ್ರಹಿಸಿವೆ ಎಂದು ತಿಳಿದುಬಂದಿದೆ. ಜೊತೆಗೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯುವ ಪ್ರಯತ್ನಗಳು ನಡೆಯುತ್ತಿದೆ ಎಂದು ಎನ್‌ಐಎ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

Leave A Reply

Your email address will not be published.