Home Crime Crime: ತನ್ನ ನಾಲ್ಕು ಜನ ಅಪ್ರಾಪ್ತ ಮಕ್ಕಳು ಹಾಗೂ ಹೆಂಡತಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ...

Crime: ತನ್ನ ನಾಲ್ಕು ಜನ ಅಪ್ರಾಪ್ತ ಮಕ್ಕಳು ಹಾಗೂ ಹೆಂಡತಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪತಿ

Crime

Hindu neighbor gifts plot of land

Hindu neighbour gifts land to Muslim journalist

Crime: ಮಹಿಳೆ ಮತ್ತು ಆಕೆಯ ಮೂವರು ಅಪ್ರಾಪ್ತ ಪುತ್ರಿಯರನ್ನು ಆಕೆಯ ಪತಿಯೇ ಅವರ ಮನೆಯಲ್ಲಿಯೇ ಕಡಿದು ಕೊಂದಿರುವ ಅಮಾನುಷ ಘಟನೆ ಬಿಹಾರದ ಚಂಪಾರಣ್‌ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: Bengaluru: ಬೆಂಗಳೂರು ಕೆಫೆ ಸ್ಪೋಟ ಪ್ರಕರಣ :‌ ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

ಮೃತ ದುರ್ದೈವಿಗಳನ್ನು ರೇಷ್ಮಾ ಖಾತುನ್ (40) ಮತ್ತು ಅವರ ಪುತ್ರಿಯರಾದ ಅರ್ಬುನ್ ಖಾತುನ್ (15), ಶಬ್ರುನ್ ಖಾತುನ್ (12) ಮತ್ತು ಶಹಜಾದಿ ಖಾತುನ್ (09) ಎಂದು ಗುರುತಿಸಲಾಗಿದೆ. ಶುಕ್ರವಾರ ಅವರ ಮನೆಯಲ್ಲಿ ರಕ್ತದ ಮಡುವಿನಲ್ಲಿ ಈ ನಾಲ್ವರು ಮೃತದೇಹ ಪತ್ತೆಯಾಗಿದ್ದು, ಅವರ ಗಂಟಲಿನ ಮೇಲೆ ಆಳವಾದ ಗಾಯದ ಗುರುತುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru: ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ : ಕಳ್ಳಿಯಾಗಿ ಇದೀಗ ಪೊಲೀಸರ ಅತಿಥಿ

ಅನ್ಸಾರಿ ಎರಡು ಬಾರಿ ಮದುವೆಯಾಗಿದ್ದ. ಆತ ಇಬ್ಬರು ಗಂಡು ಮಕ್ಕಳನ್ನು ಪಡೆದ ಅವರ ಮೊದಲ ಪತ್ನಿ ಬಹಳ ಹಿಂದೆಯೇ ನಿಧನರಾದರು. ರೇಷ್ಮಾ ಅವರ ಎರಡನೇ ಹೆಂಡತಿಯಾಗಿದ್ದು, ಆಕೆಗೆ ಐದು ಹೆಣ್ಣು ಮಕ್ಕಳಿದ್ದರು.”

ಹಿರಿಯ ಮಗಳು ಮದುವೆಯಾಗಿದ್ದು, ಮತ್ತೊಬ್ಬ ಮಗಳು ಕಳೆದ ವರ್ಷ ಆಕೆಯ ತಂದೆಯೇ ಓಡುತ್ತಿರುವ ರೈಲಿನಿಂದ ಅವಳನ್ನು ತಳ್ಳಿದ್ದರಿಂದ ಸಾವನ್ನಪ್ಪಿದ್ದಳು. ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಜೈಲಿಗೆ ಕಳುಹಿಸಲಾಗಿದ್ದು, ಆರು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಎಂದು ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅನ್ಸಾರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.