Bengaluru: ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ : ಕಳ್ಳಿಯಾಗಿ ಇದೀಗ ಪೊಲೀಸರ ಅತಿಥಿ

Bengaluru: ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಯಿಂದ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಕದ್ದ ಆರೋಪದ ಮೇಲೆ 26 ವರ್ಷದ ಮಾಜಿ ಐಟಿ ಉದ್ಯೋಗಿಯನ್ನು ಪೋಲಿಸರು ಬಂಧಿಸಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರು ಕೆಫೆ ಸ್ಪೋಟ ಪ್ರಕರಣ :‌ ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

ಜಸ್ಸಿ ಅಗರ್ವಾಲ್ ಉದ್ಯೋಗಕ್ಕಾಗಿ ನೋಯ್ದಾದಿಂದ ಬೆಂಗಳೂರಿಗೆ ಬಂದಿದ್ದು ಕೋವಿಡ್ ಸಮಯದಲ್ಲಿ ತನ್ನ ಕೆಲಸವನ್ನು ಕಳೆದುಕೊಂಡಿದ್ದಳು.

ಇದನ್ನೂ ಓದಿ: S L Bhairappa : ರಾಜ್ಯದಲ್ಲಿ ‘ಕಮಲ ಹೆಚ್ಟು ಅರಳಲ್ಲ’- ಲೋಕಸಭಾ ಫಲಿತಾಂಶದ ಬಗ್ಗೆ ಸಾಹಿತಿ ಎಸ್ ಎಲ್ ಭೈರಪ್ಪ ಅಚ್ಚರಿ ಭವಿಷ್ಯ !!

ನಂತರ ಆಕೆ ಪಿಜಿಗಳಿಂದ ಲ್ಯಾಪ್‌ಟಾಪ್ ಮತ್ತು ಗ್ಯಾಜೆಟ್‌ಗಳನ್ನು ಕದಿಯಲು ಪ್ರಾರಂಭಿಸಿ, ಅವುಗಳನ್ನು ತನ್ನ ಊರಿನಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾಳೆ. ಜಾಸ್ಸಿ ಖಾಲಿ ಕೊಠಡಿಗಳಿಗೆ ಪ್ರವೇಶಿಸಿ ಚಾರ್ಜ್ ಮಾಡಲು ಇಟ್ಟ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದಳು.

ಹಲವು ಲ್ಯಾಪ್‌ಟಾಪ್‌ಗಳು ನಾಪತ್ತೆಯಾಗಿವೆ ಎಂದು ಪಿಜಿ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.

ಪೊಲೀಸರು ಜಸ್ಸಿಯನ್ನು ಬಂಧಿಸಿ 10-15 ಲಕ್ಷ ರೂಪಾಯಿ ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

“ಜಸ್ಸಿ ಅನೇಕ ಪ್ರದೇಶಗಳಲ್ಲಿ ಈ ರೀತಿ ಕಳ್ಳತನ ಮಾಡಿದ್ದಾಳೆ. ಇದು ಸ್ವಲ್ಪ ಸಮಯದಿಂದ ನಡೆಯುತ್ತಿದೆ. ನಮ್ಮ ಅಪರಾಧ ವಿಭಾಗವು ಆಕೆ ಪಿಜಿಗಳಿಗೆ ಪ್ರವೇಶಿಸುವ ಮತ್ತು ಕದ್ದ ಗ್ಯಾಜೆಟ್‌ಗಳೊಂದಿಗೆ ಹಿಂತಿರುಗುವ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave A Reply

Your email address will not be published.