Udupi: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಕೋರ್ಟ್‌ನಲ್ಲಿ ಆರೋಪ ನಿರಾಕರಿಸಿದ ಆರೋಪಿ
ಉಡುಪಿ: ತೃಪ್ತಿ ಲೇಔಟ್‌ನಲ್ಲಿ ಕಳೆದ ನ.12 ರಂದು
ನಡೆದ ತಾಯಿ ಮತ್ತು ಮೂವರು ಮಕ್ಕಳ ಕಗ್ಗೋಲೆ ಪ್ರಕರಣದ ಆರೋಪಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಕ್ರೂ ಪ್ರವೀಣ್ ಅರುಣ್ ಚೌಗುಲೆ (39) ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಬುಧವಾರ ತನ್ನ ವಿರುದ್ಧದ ಆಪಾದನೆಯನ್ನು ನಿರಾಕರಿಸಿದ್ದಾನೆ.
ಇದನ್ನೂ ಓದಿ: CM Siddaramaia: ದೇವೇಗೌಡರದ್ದು ಅನುಕೂಲ ಸಿಂಧು ರಾಜಕಾರಣ : ಸಿಎಂ ಸಿದ್ದರಾಮಯ್ಯ
ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಆರೋಪಿ ಮೇಲಿನ ಅಪಾದನೆಯನ್ನು ವಾಚಿಸಿದರು. ಆಗ ಪ್ರವೀಣ್ ಅರುಣ್ ಚೌಗುಲೆ, ”ನಾನು ಯಾವುದೇ ತಪ್ಪು ಮಾಡಿಲ್ಲ,” ಎಂದಿದ್ದಾನೆ.
ಆರೋಪಿಯು ಆಪಾದನೆಯನ್ನು ನಿರಾಕರಿಸಿರುವ ಹಿನ್ನೆಲೆ ಹಾಗೂ ಇದು ಗಂಭೀರ ಪ್ರಕರಣವಾಗಿರುವುದರಿಂದ ವಿಚಾರಣೆಗೆ ಪೂರ್ವಭಾವಿಯಾಗಿ ಏ.5ರಂದು ಪ್ರಿ ಟ್ರಯಲ್ ಕಾನ್ಸರೆನ್ಸ್ ನಡೆಸಲು ಜಡ್ಜ್ ಆದೇಶಿಸಿದರು.
ಇದನ್ನೂ ಓದಿ: Bengaluru: ಬೆಂಗಳೂರು ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್ ದಿನೇಶ್
ಈ ಕಾನ್ಸರೆನ್ಸ್‌ನಲ್ಲಿ ಪ್ರಕರಣದ ತನಿಖಾಧಿಕಾರಿ, ಸರಕಾರದ ವಿಶೇಷ ಅಭಿಯೋಜಕ, ಆರೋಪಿ ಪರ ವಕೀಲರು ಭಾಗವಹಿಸಲಿದ್ದಾರೆ. ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಯಲಿದೆ.
ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದ ಆರೋಪಿಯನ್ನು ಪೊಲೀಸರು ಉಡುಪಿ ಕೋರ್ಟ್‌ಗೆ ಹಾಜರು ಪಡಿಸಿದ್ದರು.