Janardhan Reddy: ಜನಾರ್ದನ ರೆಡ್ಡಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕಾಂಗ್ರೆಸ್ ಆಗ್ರಹ !! ಕಾರಣ ಹೀಗಿದೆ

Janardhan Reddy: ಕೆಲ ದಿನಗಳ ಹಿಂದಷ್ಟೇ ಮಾಜಿ ಸಚಿವ, ಗಣಿ ಧಣಿ ಜನಾರ್ಧನ ರೆಡ್ಡಿ(Janardhan Reddy) ಅವರು ಬಿಜೆಪಿ(BJP) ಸೇರಿದರು. ಈ ಮೂಲಕ ತಮ್ಮ ಕಲ್ಯಾಣ ಕರ್ನಾಟಕ ರಾಜ್ಯ ಪ್ರಗತಿಪಕ್ಷವನ್ನು(KRPP) ಬಿಜೆಪಿಯಲ್ಲಿ ವಿಲೀನ ಮಾಡಿರುವ ಶಾಸಕ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ಹೌದು, ಬೆಂಗಳೂರಿನ(Bengaluru) ಬಿಜೆಪಿ ಕಚೇರಿಯಲ್ಲಿ ನಾಡಿದ ಪ್ರಮುಖ ಬಿಜೆಪಿ ನಾಯಕರ ನೇತೃತ್ವದಲ್ಲಿ ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆಗೊಂಡರು. ಈ ಮೂಲಕ ಗಣಿ ಧಣಿ ಘರ್ ವಾಪ್ಸಿ ಆದರು. ಆದರೆ ಈ ಬೆನ್ನಲ್ಲೇ ಅವರಿಗೆ ಕಾಂಗ್ರೆಸ್ ದೊಡ್ಡ ಶಾಕ್ ನೀಡಿದ್ದು, ಪಕ್ಷೋ ವಿಲೀನ ಪ್ರಕ್ರಿಯೆ ಸಂವಿಧಾನದ ಶೆಡ್ಯೂಲ್ 10ರ ಪ್ರಕಾರ ನಡೆದಿಲ್ಲ. ಹೀಗಾಗಿ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದಾಖಲೆಗಳ ಸಹಿತ ವಿಧಾನಸಭೆ ಅಧ್ಯಕ್ಷರಿಗೆ ದೂರು ನೀಡಿದೆ.

ಅಂದಹಾಗೆ ಚುನಾವಣಾ ಆಯೋಗಕ್ಕೆ(Election Commission)ಜನಾರ್ದನ ರೆಡ್ಡಿ ನೀಡಿರುವ ಮಾಹಿತಿಯ ಪ್ರಕಾರ ಜನಾರ್ದನ ರೆಡ್ಡಿ ಕಲ್ಯಾಣ ಪ್ರಗತಿ ಪಕ್ಷದ ಪದಾಧಿಕಾರಿಯಲ್ಲ. ಇದು ನೋಂದಾಯಿತ ರಾಜಕೀಯ ಪಕ್ಷವಾಗಿದ್ದು, ಜೆ. ರಾಮಣ್ಣ ಇದರ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಪಕ್ಷದಲ್ಲಿ ಅನೇಕ ಪದಾಧಿಕಾರಿಗಳಿದ್ದಾರೆ. ಆದರೆ, ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿರುವುದಾಗಿ ಹೇಳಿರುವುದು ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲಂಘನೆಯಾಗಿದೆ. ಅವರ ಸದಸ್ಯತ್ವವನ್ನು ಅಸಿಂಧುಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.