KSRTC: ಬಸ್ಸಿನಲ್ಲಿ ಮೈಸೂರಿಗೆ ಹೊರಟಿದ್ದ ನಾಲ್ಕು ಲವ್‌ಬರ್ಡ್ಸ್‌ಗೆ ರೂ.444 ಟಿಕೆಟ್

KSRTC: ಬೆಂಗಳೂರಿನಿಂದ ಮೈಸೂರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಅಜ್ಜಿ-ಮೊಮ್ಮಗಳಿಗೆ ಕಂಡಕ್ಟರ್‌ ಏನೂ ಚಾರ್ಜ್‌ ಮಾಡಿಲ್ಲ. ಆದರೆ ಅವರ ಜೊತೆ ಇದ್ದ ನಾಲ್ಕು ಲವ್‌ಬರ್ಡ್ಸ್‌ಗೆ 444ರೂಪಾಯಿ ಟಿಕೆಟ್‌ ನೀಡಿದ್ದಾರೆ ಕಂಡಕ್ಟರ್.‌ ನಾಲ್ಕು ಮಕ್ಕಳು ಎಂದು ಟಿಕೆಟ್‌ನಲ್ಲಿ ನಮೂದು ಮಾಡಿದ್ದು, ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಲೆಕ್ಕ ಮಾಡಿದರೆ ಒಂದು ಹಕ್ಕಿಗೆ 111 ರೂಪಾಯಿ ಟಿಕೆಟ್‌ ನೀಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನಿಂದ ಮೈಸೂರಿಗೆ ಹೋಗಿರುವ ಅಜ್ಜಿ ಮೊಮ್ಮಗಳ ಜೊತೆ ತೆರಳಿದ ಈ ಲವ್‌ ಬರ್ಡ್ಸ್‌ಗೆ ಚಾರ್ಜ್‌ ಬಿದ್ದಿದೆ.

ಪ್ರಾಣಿಗಳಿಗೆ ಕೂಡಾ ಈಗ ಟಿಕೆಟ್‌ ನೀಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಅಪಸ್ವರ ಎತ್ತಿದ್ದರೂ ಕೂಡಾ ಇದು ರೂಲ್ಸ್‌ ಎಂದು ಟಿಕೆಟ್‌ ನೀಡಲಾಗುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ಘಟನೆ ಕೂಡಾ ಅಂತಹುದೇ ಒಂದು ಘಟನೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜ್ಯ ಬಿಜೆಪಿಗೆ ದೊಡ್ಡ ಆಘಾತ !!ಧಿಡೀರ್ ಎಂದು ಶಾಸಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಬಲ ನಾಯಕಿ !!

Leave A Reply

Your email address will not be published.