Sumalatha Ambrish: ಬಿಜೆಪಿಗೆ ಆಘಾತ- ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಸ್ಪರ್ಧೆ ಫಿಕ್ಸ್?!

Sumalatha Ambrish: ಲೋಕಸಭಾ ಚುನಾವಣೆಗೆ(Parliment Election)ಬಿಜೆಪಿ-ಜೆಡಿಎಸ್ ಮೈತ್ರಿ ಫಲದಿಂದಾಗಿ ಹೈವೋಲ್ಟೇಜ್ ಕ್ಷೇತ್ರವಾದ ಮಂಡ್ಯ ಜೆಡಿಎಸ್ ಪಾಲಾಗಿದಿ. ಹೀಗಾಗಿ ಮಂಡ್ಯ(Mandya) ಸಂಸದೆ ಸುಮಲತಾ ಅಂಬರೀಷ್ ಗೆ ಭಾರೀ ನಿರಾಸೆಯಾಗಿದ್ದು, ಅವರು ಕಳೆದ ಚುನಾವಣೆಯಂತೆ ಈ ಸಲವೂ ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಇದನ್ನೂ ಓದಿ: Chillies: ಯಾವ ಮೆಣಸಿನಕಾಯಿ ದೇಹಕ್ಕೆ ಹೆಚ್ಚು ಅಪಾಯಕಾರಿ? ಇಲ್ಲಿದೆ ಉತ್ತರ

ಹೌದು, ಮಂಡ್ಯ ಕ್ಷೇತ್ರದ ಪ್ರಬಲ ಬಿಜೆಪಿ(BJP) ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಈ ಮಧ್ಯೆ ಅವರು ಕಾರ್ಯಕರ್ತರ ತುರ್ತು ಸಭೆ ಕರೆದಿದ್ದಾರೆ. ಬೆಂಬಲಿಗರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: Maharashtra Boy Kidnapped: ಮನೆ ನಿರ್ಮಾಣಕ್ಕೆ ಹಣ ಬೇಕೆಂದು ನೆರೆಮನೆಯ ಬಾಲಕನನ್ನೇ ಕೊಂದ ವ್ಯಕ್ತಿ, ಮೌಲ್ವಿ ಸೆರೆ

ಇನ್ನು ಅವರ ಆಪ್ತರಾಗಿರುವ ಶಶಿಕುಮಾರ್ ಹನಕೆರೆ (Shashikumar Hanakere) ಮಾತನಾಡಿ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿಗೆ ಬೇಷರತ್ ಬೆಂಬಲ (unconditional support) ಘೋಷಿಸಿದಾಗ ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟದ ಭಾಗವಾಗಿರಲಿಲ್ಲ. ಬಿಜೆಪಿ ನಾಯಕರಿಗೆ ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆಸುವ ಆಸೆ ಇದ್ದು ಸುಮಲತಾ ಅವರ ಮೂಲಕ ಆ ಕಾರ್ಯ ಸಾಧಿಸುತ್ತಾರೆ ಅಂತ ಭಾವಿಸಲಾಗಿತ್ತು. ಅದರೆ ಬಿಜೆಪಿ ವರಿಷ್ಠರು ಸುಮಲತಾ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಯಾಕೆ ತೆಗೆದುಕೊಂಡರೋ ಅರ್ಥವಾಗುತ್ತಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರೆಲ್ಲ ಸುಮಲತಾ ಅವರನ್ನು ಆಗ್ರಹಿಸುತ್ತಿದ್ದೇವೆ. ಗೆಲ್ಲುವ ಅತ್ಯುತ್ತಮ ಅವಕಾಶವಿರುವುದರಿಂದ ಅವರು ಸ್ಪರ್ಧಿಸಲೇ ಬೇಕು ಎಂದು ಹೇಳಿದ್ದಾರೆ.

Leave A Reply

Your email address will not be published.