Maharashtra Boy Kidnapped: ಮನೆ ನಿರ್ಮಾಣಕ್ಕೆ ಹಣ ಬೇಕೆಂದು ನೆರೆಮನೆಯ ಬಾಲಕನನ್ನೇ ಕೊಂದ ವ್ಯಕ್ತಿ, ಮೌಲ್ವಿ ಸೆರೆ

Maharashtra Boy Kidnapped: 9 ವರ್ಷದ ಬಾಲಕನನ್ನು ಅಪಹರಣಗೈದು ಭೀಕರವಾಗಿ ಹತ್ಯೆಗೈದಿರುವ ಘಟನೆಯೊಂದು ಮಹಾರಾಷ್ಟ್ರದ ಬದ್ಲಾಪುರದಲ್ಲಿ ಭಾನುವಾರ ನಡೆದಿದೆ. ಹಣಕ್ಕಾಗಿ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Harassment: ಬೆಂಗಳೂರಿನ ನಡುರಸ್ತೆಯಲ್ಲೇ ವಿದ್ಯಾರ್ಥಿನಿಯ ಖಾಸಗಿ ಭಾಗ ಮುಟ್ಟಿ ವಿಕೃತಿ – ಕಾಮುಕ ಅರೆಸ್ಟ್

ಥಾಣೆಯ ಬದ್ಲಾಪುರ ಮೂಲದ ಬಾಲಕ ಇಬಾದ್‌ (9) ಎಂಬಾತನೇ ಕೊಲೆಯಾದ ಬಾಲಕ. ಭಾನುವಾರ ಸಂಜೆ ಇಬಾದ್‌ ಮಸೀದಿಗೆಂದು ಹೋಗಿ ಮನೆಗೆ ವಾಪಾಸು ಬರುವ ಸಂದರ್ಭದಲ್ಲಿ ನೆರೆಹೊರೆಯಲ್ಲಿರುವ ಸಲ್ಮಾನ್‌ ಮೌಲ್ವಿ ಎಂಬಾತ ಬಾಲಕನನ್ನು ಅಪಹರಣ ಮಾಡಿದ್ದಾರೆ. ಹೊರ ಹೋದ ಮಗ ಇನ್ನೂ ಬಂದಿಲ್ಲ ಎಂದು ಪೋಷಕರು ಗಾಬರಿಗೊಂಡು ಹುಡುಕಾಡಿದ್ದಾರೆ. ಆಗ ಇಬಾದ್‌ ತಂದೆಗೆ ಮುದ್ದಾಸಿರ್‌ಗೆ ನಿಮ್ಮ ಮಗ ಸುರಕ್ಷಿತವಾಗಿ ಮನೆಗೆ ಬರಬೇಕಾದರೆ 23 ಲಕ್ಷ ಕೊಡಬೇಕೆಂದು ಬೆದರಿಕೆಯ ಕರೆ ಬರುತ್ತದೆ. ಇದರಿಂದ ಗಾಬರಿಗೊಂಡ ಇಬಾದ್‌ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ: Kundapura: 5ನೇ ಮಹಡಿಯ ಫ್ಲ್ಯಾಟ್‌ನಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವು

ಕೂಡಲೇ ಆರೋಪಿಗಳಿಗೆ ಪೊಲೀಸರು ಬರುವ ಮುನ್ಸೂಚನೆ ದೊರಕಿದ್ದು, ತಮ್ಮ ಸಿಮ್‌ ಕಾರ್ಡ್‌ ಬದಲು ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸೋಮವಾರ ಮಧ್ಯಾಹ್ನ ವೇಳೆ ಸಲ್ಮಾನ್‌ ಅವರ ಮನೆಯನ್ನು ಪತ್ತೆ ಹಚ್ಚಿದ್ದು, ಬಾಲಕನನ್ನು ಪೊಲೀಸರು ಬರುವ ಮುನ್ನವೇ ಕೊಲೆಗೈದು ಗೋಣಿ ಚೀಲದಲ್ಲಿ ಹಾಗಿ ಮನೆಯ ಹಿಂದು ಮುಚ್ಚಿಟ್ಟುಕೊಂಡಿದ್ದಾರೆ.

ಇದೀಗ ಪೊಲೀಸರು ವೃತ್ತಿಯಲ್ಲಿ ಟೈಲರ್‌ ಆಗಿರುವ ಸಲ್ಮಾನ್‌ ಹಾಗೂ ಆತನ ಸಹೋದರ ಸಪುವಾನ್‌ ಮೌಲ್ವಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಕೃತ್ಯದಲ್ಲಿ ಸಲ್ಮಾನ್‌ ಪ್ರಮುಖ ಆರೋಪಿಯಾಗಿದ್ದು, ಈ ಕೃತ್ಯದಲ್ಲಿ ಕುಟುಂಬದ ಇತರ ಸದಸ್ಯರು ಸೇರಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ.

1 Comment
  1. […] ಇದನ್ನೂ ಓದಿ: Maharashtra Boy Kidnapped: ಮನೆ ನಿರ್ಮಾಣಕ್ಕೆ ಹಣ ಬೇಕೆಂದು … […]

Leave A Reply

Your email address will not be published.