Home Crime Shivmoga: ಆತ್ಮ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ ಶಿವಮೊಗ್ಗ ಪೊಲೀಸರು

Shivmoga: ಆತ್ಮ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ ಶಿವಮೊಗ್ಗ ಪೊಲೀಸರು

Shivmoga

Hindu neighbor gifts plot of land

Hindu neighbour gifts land to Muslim journalist

Shivmoga : ನಗರದ ಹೊರವಲಯದ ಮಲ್ಲಿಗೇನಹಳ್ಳಿ

ಬಳಿ ಸೋಮವಾರ ಪರಾರಿಯಾಗಲು ಯತ್ನಿಸಿ, ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದ ಆರೋಪಿಗಳ ಕಾಲಿಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: Minister Shivraj Thandagi:ಮೋದಿ ಮೋದಿ ಎಂದು ಜಪ ಮಾಡುವ ಯುವಕರ ಕಪಾಳಕ್ಕೆ ಹೊಡೆಯಬೇಕು :  ಸಚಿವ ಶಿವರಾಜ್ ತಂಗಡಗಿ

ಪೊಲೀಸರ ಪ್ರಕಾರ, ಕೊಲೆ ಯತ್ನ ಪ್ರಕರಣದ ಆರೋಪಿ ಫಾರು ಮಾರ್ಚ್ 19 ರಿಂದ ತಲೆಮರೆಸಿಕೊಂಡಿದ್ದು, ಸುಳಿವಿನ ಆಧಾರದ ಮೇರೆಗೆ ತುಂಗಾನಗರ ಪೊಲೀಸರು ಆತನನ್ನು ಹಿಡಿಯಲು ಮಲ್ಲಿಗೇನಹಳ್ಳಿಯ ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ: Sonu Shrinivas Gowda: ಪರಪ್ಪನ ಅಗ್ರಹಾರ ಜೈಲು ಪಾಲಾದ ಸೋನು ಗೌಡ !!

ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್‌ ಸಿಬ್ಬಂದಿ ನಾಗಪ್ಪ ಎಂಬುವವರ ಮೇಲೆ ಫಾರೂರು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ ಇದೇ ವೇಳೆ ಸ್ವಯಂ ರಕ್ಷಣೆ ಮತ್ತು ಇತರ ಸಿಬ್ಬಂದಿಯನ್ನು ರಕ್ಷಿಸಲು ಶಿವಮೊಗ್ಗ ಗ್ರಾಮಾಂತರ ಇನ್ಸ್‌ಪೆಕ್ಟ‌ರ್ ಸತ್ಯನಾರಾಯಣ್‌ ಅವರು ತಮ್ಮ ಸರ್ವೀಸ್ ರಿವಾಲ್ವರ್‌ನಿಂದ ಆರೋಪಿಯ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿ ಹಾಗೂ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.