Bike Mileage: ನಿಮ್ಮ ಬೈಕ್ ಗಳಲ್ಲಿ ಈ ಸಣ್ಣ ಬದಲಾವಣೆ ಮಾಡಿ ಸಾಕು, 90 ಕಿಮೀ ಮೈಲೇಜ್ ಗ್ಯಾರಂಟಿ !!

Share the Article

Bike Mileage: ಎಷ್ಟೇ ಲಕ್ಷ ಕೊಟ್ಟು ಬೈಕ್ ಕೊಂಡರೂ ದೊಡ್ಡ ತಲೆನೋವು ಆಗೋದು ಅಂದ್ರೆ ಅದರ ಮೈಲೇಜ್. ಕಡಿಮೆ ಮೈಲೇಜ್(Bike Mileage)ಸಮಸ್ಯೆಯಿಂದ ಪೆಟ್ರೋಲ್ ಹಾಕಿ ಹಾಕಿ ಸುಸ್ತು ಹೊಡೆಯಬೇಕಾಗುತ್ತೆ. ಆದರೀಗ ಸುಲಭದಲ್ಲಿ ನಿಮ್ಮ ನಿಮ್ಮ ಬೈಕ್ ಮೈಲೇಜ್ ಹೆಚ್ಚಿಸುವಂತ ಒಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ದಿನಬೆಳಗಾದರೆ ಸಾಕು ಒಂದಲ್ಲ ಒಂದು ವಿಡಿಯೋ ಟ್ರೆಂಡ್ ಆಗಿಬಿಡುತ್ತದೆ. ಅಂತೆಯೇ ಇದೀಗ ಬೈಕ್ ಒಂದು 90 ಕೀ. ಮೀ ಮೈಲೇಜ್ ನೀಡುವ ವಿಡಿಯೋ ಒಂದು ಸಖತ್ ವೈರಲ್ ಆಗ್ತಿದೆ. ಇದು ನಂಬಲು ಆಸಾಧ್ಯವಾದರೂ ಕೂಡ ವಿಡಿಯೋ ನೋಡಿದರೆ ನಂಬಲೇ ಬೇಕು. ಹಾಗಿದ್ರೆ ಇಷ್ಟು ಮೈಲೇಜ್ ಪಡೆಯಲು ಏನು ಮಾಡಬೇಕೆಂದು ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹೇಳುವುದನ್ನು ನೀವು ಕಾಣಬಹುದು.

ಇದನ್ನು ಕೂಡಾ ಓದಿ: ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಒಂದೇ ತಿಂಗಳಲ್ಲಿ ಇಂಗ್ಲಿಷ್ ಕಲಿಸುವುದಾಗಿ ಹೇಳಿದ ಖ್ಯಾತ ಇಂಗ್ಲಿಷ್ ಟ್ರೈನರ್

ಅಂದಹಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘bapu_zamidar_short’ ಎಂಬ ಖಾತೆಯಿಂದ ಹಂಚಿಕೊಂಡು ವೈರಲ್ ಆದ ಈ ವಿಡಿಯೋದಲ್ಲಿ ವ್ಯಕ್ತಿಯು ತನ್ನ ಬೈಕ್ ಪ್ಲಗ್ ಗೆ ಚಿಕ್ಕ ಸಾಧನ (ಸೆಮಿ ಕಂಡಕ್ಟರ್ ) ಜೋಡಿಸಿ ಅದಕ್ಕೆ ಜೋಡಿಸಿದ ವೈರ್ ಪ್ರತಿ ಲೀಟರ್ ಗೆ 25-30 ಕಿ.ಮೀ ನೀಡುವ ಬೈಕ್ ನ ಮೈಲೇಜ್ ಅನ್ನು ಸರಾಸರಿ 90 ಕಿ.ಮೀ.ಗೆ ಹೆಚ್ಚಿಸಿಕೊಂಡಿದ್ದೇನೆ. ಈ ಸಾಧನ (ಸೆಮಿಕಂಡಕ್ಟರ್) ಬೈಕಿನ ಮೈಲೇಜ್ ಹೆಚ್ಚಿಸುವುದಲ್ಲದೆ ಬೈಕ್ ನಿಂದ ಕಡಿಮೆ ಹೊಗೆ ಬರುವಂತೆ ಮಾಡುತ್ತದೆ ಎಂದು ಹೇಳಿದ್ದಾನೆ. ಈ ವಿಡಿಯೋಗೆ ಸಿಕ್ಕಾಪಟ್ಟೆ ಕಮೆಂಟ್ ಗಳು ಕೂಡ ಬಂದಿವೆ.

https://www.instagram.com/reel/C4IGND9AQX5/?igsh=MTY5bHhsdWx3Nm15Mw==

 

Leave A Reply