Crocodile inside the python: 18 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯೊಳಗೆ ಮೊಸಳೆ ಪತ್ತೆ

Share the Article

Crocodile inside the python: ಹಾವು ಅತಿದೊಡ್ಡ ಗಾತ್ರದ ವಸ್ತುಗಳನ್ನು ತಿನ್ನುವ ವೀಡಿಯೋ ನೀವು ನೋಡಿರಬಹುದು. ನಾಯಿಯನ್ನು ತಿನ್ನುವುದು, ಅನಂತರ ಅಲುಗಾಡಲು ಸಾಧ್ಯವಾಗದೇ ದೈತ್ಯ ಹಾವು ಸಾವಿಗೀಡಾ ಘಟನೆ ವರದಿಯಾಗಿತ್ತು. ಅಂತಹುದೇ ಒಂದು ಘಟನೆಯ ವೀಡಿಯೋ ಇದೀಗ ವೈರಲ್‌ ಆಗಿದೆ. ಆದರೆ ಇಲ್ಲಿ ಒಂದು ಹೆಬ್ಬಾವು ಮೊಸಳೆಯೊಂದನ್ನು ತಿಂದಿದೆ.

ಇದನ್ನೂ ಓದಿ: Actress Kiara Advani: ಟಾಕ್ಸಿಕ್’ನಲ್ಲಿ ಯಶ್ ಜೋಡಿಯಾಗಿ ನಟಿ ಕಿಯಾರಾ ಅಡ್ವಾನಿ ಆಯ್ಕೆಯಾಗುವ ಸಾಧ್ಯತೆ

https://twitter.com/i/status/1771936026778366060

ಬರ್ಮಾದ ಹೆಬ್ಬಾವಿನೊಳಗೆ ಈ ಮೊಸಳೆ ಸೇರಿಕೊಂಡಿದೆ. ಎವಗ್ಲೇಡ್ಸ್‌ನ ರಾಷ್ಟ್ರೀಯ ಉದ್ಯಾನದ ಕೆಲಸಗಾರ ಹದಿನೆಂಟು ಅಡಿ ಹೆಬ್ಬಾವನ್ನು ಹಿಡಿದು ಕೊಂದಿರುವುದಾಗಿ ವರದಿಯಾಗಿದೆ. ನಂತರ ಶವಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯೊಳಗೆ ಐದು ಅಡಿ ಉದ್ದದ ಮೊಸಳೆ ಪತ್ತೆಯಾಗಿದೆ.

ಇದನ್ನೂ ಓದಿ: Kollam Temple: ಜಾತ್ರೆಯಲ್ಲಿ ತಂದೆಯ ಕೈಯಿಂದ ಬಿದ್ದ 5 ವರ್ಷದ ಮಗು; ರಥದ ಚಕ್ರದಡಿ ಸಿಲುಕಿ ದಾರುಣ ಸಾವು

Leave A Reply