Uttara Pradesh: ತಂದೆಯ ತಂಗಿಯೊಂದಿಗೆ ಎಸ್ಕೇಪ್ ಆದ ಮಗ
Uttara Pradesh: ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಯುವಕನೋರ್ವ ತನ್ನ ತಂದೆಯ 16 ವರ್ಷದ ತಂಗಿಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಅಜಯ್ ಎಂಬಾತನೇ ಬಾಲಕಿಯನ್ನು ಅಪಹರಿಸಿದ್ದಾನೆ.
ಇದನ್ನೂ ಓದಿ: Dakshina Kananda (Mangaluru): ನಂತೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಸಂಪೂರ್ಣ ನಜ್ಜುಗುಜ್ಜು, ವ್ಯಕ್ತಿ ಸಾವು
ಅಂದ ಹಾಗೆ ಈ ಅಜಯ್ ಗೆ ಎಪ್ರಿಲ್ 21 ರಂದು ವಿವಾಹ ನಡೆಯಬೇಕಿತ್ತು. ಆದರೆ ಅದಕ್ಕೂ ಮೊದಲೇ ಈತ ತನ್ನ ಸೋದರತ್ತೆ 16 ವರ್ಷದ ಪ್ರಾಯದವಳ ಜೊತೆ ಪರಾರಿಯಾಗಿದ್ದಾನೆ.
ವರದಿಯ ಪ್ರಕಾರ, ಅಜಯ್ ತನ್ನ ಮೂವರು ಸ್ನೇಹಿತರ ಜೊತೆ ಮನೆಗೆ ಬಂದು ಬೆದರಿಸಿ ಮಗಳನ್ನು ಕರೆದೊಯ್ದಿದ್ದಾನೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ. ಯುವಕನ ಮನೆಯವರನ್ನು ಸಂಪರ್ಕ ಮಾಡಿದಾಗ ಬಾಲಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.