Madhyapradesh: ವಿವಾದಿತ ಭೋಜಶಾಲಾ ಸಂಕೀರ್ಣ ಸಮೀಕ್ಷೆ ಪ್ರಾರಂಭಿಸಿದ ಪುರಾತತ್ವ ಇಲಾಖೆ

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಮಲ್ ಮೌಲಾ ಮಸೀದಿ ಸಂಕೀರ್ಣದ ಭೋಜಶಾಲಾ ಸಂಕೀರ್ಣದ ‘ ಬಹು – ಶಿಸ್ತಿನ ವೈಜ್ಞಾನಿಕ ಸಮೀಕ್ಷೆ ಇಂದಿನಿಂದ ಆರಂಭಗೊಂಡಿದೆ

ಮಾರ್ಚ್ 11 ರಂದು , ಮಧ್ಯಪ್ರದೇಶ ಹೈಕೋರ್ಟ್ ವಿವಾದಿತ ಸ್ಥಳದ ನಿಜವಾದ ನೈಜ ಸ್ವರೂಪವನ್ನು ಕಂಡುಹಿಡಿಯಲು ಸಮೀಕ್ಷೆಗೆ ಆದೇಶಿಸಿತ್ತು ಮತ್ತು ಆರು ವಾರಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಕೇಳಿತ್ತು. ಪುರಾತತ್ವ ಸಮೀಕ್ಷೆಗಾಗಿ ಸ್ಥಳದಲ್ಲಿ ಸುರಕ್ಷಿತ ಪ್ರವೇಶ ಮತ್ತು ಭದ್ರತೆಯನ್ನು ಒದಗಿಸುವಂತೆ ಪುರಾತತ್ವ ಇಲಾಖೆ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ತ್ರಿಪಾಠಿ ಬುಧವಾರ ಇಂದೋರ್ ವಿಭಾಗ ಮತ್ತು ಧಾರ್ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಪತ್ರವನ್ನು ಪಡೆದ ಕೂಡಲೇ, ಧಾರ್ ಜಿಲ್ಲಾಧಿಕಾರಿ ಪ್ರಿಯಾಂಕ್ ಮಿಶ್ರಾ ಮತ್ತು ಎಸ್ ಪಿ ಮನೋಜ್ ಕುಮಾರ್ ಸಿಂಗ್ ಅವರು ಗುರುವಾರ ಭೋಜಶಾಲೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಎಎಸ್ಐ ತಂಡವು ಯಾವುದೇ ಅಡೆತಡೆಯಿಲ್ಲದೆ ಸಮೀಕ್ಷೆಗಳನ್ನು ನಡೆಸಲು ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ “ಎಂದು ಎಸ್ಪಿ ಹೇಳಿದರು.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಈ ವಿವಾದಾತ್ಮಕ ಸ್ಥಳ 11ನೇ ಶತಮಾನದ ಸಂರಕ್ಷಿತ ಸ್ಮಾರಕವಾದ ಭೋಜಶಾಲಾವನ್ನು ಹಿಂದೂಗಳು ಸರಸ್ವತಿ ದೇವಿಯ ದೇವಾಲಯವೆಂದು ಪರಿಗಣಿಸಿದರೆ , ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.

ಈ ವಿವಾದಿತ ಸ್ಥಳವು ಆಗಾಗ್ಗೆ ಕೋಮು ಗಲಭೆಗೆ ಕಾರಣವಾಗಿದ್ದು , ಹಿಂದೂಗಳು ಪ್ರತಿ ಮಂಗಳವಾರ ಮತ್ತು ವಸಂತ ಪಂಚಮಿ ದಿನದಂದು ಭೋಜಶಾಲಾ ಸಂಕೀರ್ಣದೊಳಗೆ ಪೂಜೆ ಸಲ್ಲಿಸಬಹುದು ಮತ್ತು ಮುಸ್ಲಿಮರು ಪ್ರತಿ ಶುಕ್ರವಾರ ಆ ಸ್ಥಳದಲ್ಲಿ ನಮಾಜ್ ಮಾಡಬಹುದು ಎಂದು ಎಎಸ್ಐ ಏಪ್ರಿಲ್ 7,2003 ರಂದು ಆದೇಶಿಸಿತ್ತು

ಪುರಾತತ್ವ ಇಲಾಖೆಯ ಜಿಪಿಆರ್ / ಜಿಪಿಎಸ್ ಸಮೀಕ್ಷೆ , ಛಾಯಾಗ್ರಹಣ , ವೀಡಿಯೊಗ್ರಫಿ ಮತ್ತು ಕಾರ್ಬನ್ ಡೇಟಿಂಗ್ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.

Leave A Reply

Your email address will not be published.