Pratap Simha: ಟಿಕೆಟ್ ಕೈ ತಪ್ಪುತ್ತಿದ್ದಂತೆ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಪ್ರತಾಪ್ ಸಿಂಹ!!

Pratap Simha: ಸದಾ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾ, ಅವರ ಪ್ರತಿಯೊಂದೂ ಹೇಳಿಕೆಗೂ ಕೌಂಟರ್ ನೀಡುತ್ತಾ ಆಗಾಗ ಭಾರೀ ಸುದ್ದಿಯಾಗುತ್ತಿದ್ದ ಸಂಸದ ಪ್ರತಾಪ್ ಸಿಂಹ(Pratap Simha) ಅವರು ಇದೀಗ ವಿಚಿತ್ರ ಎಂಬಂತೆ ಸಿದ್ದು ಪರ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ: Bengaluru: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಹೆದುರಿಸುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಹೌದು, ಮೈಸೂರು ಅರಸ ಯದುವೀರ್ ಒಡೆಯರ್(Yaduveer Wodiayr) ಗೆ ಬಿಜೆಪಿ(BJP) ಟಿಕೆಟ್ ನೀಡುತ್ತಿದ್ದಂತೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ ‘ಯಾರು ರಾಜ?’ ಎಂದು ಪ್ರಶ್ನಿಸಿದ್ದರು. ಆದರೀಗ ಇದನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Parliament Election: ಪಿಸ್ತೂಲ್ ತಪಾಸಣೆಯ ವೇಳೆ ಅಚಾತುರ್ಯ : ಠಾಣಾ ಬರಹಗಾರನ ಕಾಲಿಗೆ ಗುಂಡು

ಸಿದ್ದರಾಮಯ್ಯ(CM Siddaramaiah)ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಹುಳುಕು ಹುಡುಕುವುದು ತಪ್ಪು. ಸಂವಿಧಾನ ಜಾರಿಯಾದ ದಿನದಿಂದ ದೇಶದಲ್ಲಿ ರಾಜ, ಮಹಾರಾಜ ಎಂಬ ಪರಿಕಲ್ಪನೆ ಇಲ್ಲ. ಅದನ್ನೇ ಸಿದ್ದರಾಮಯ್ಯ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ. ಸಂವಿಧಾನ(Constitution) ಜಾರಿಯಾದ ದಿನದಿಂದ ದೇಶದಲ್ಲಿ ರಾಜ (king) ಮಹಾರಾಜ ಅನ್ನೋ ಪರಿಕಲ್ಪನೆ ಇಲ್ಲ. ಯದುವೀರ್ ಈಗ ಬಿಜೆಪಿ ಅಭ್ಯರ್ಥಿ ಮಾತ್ರ’ ಅಂತ ಹೇಳಿಕೆ ನೀಡಿದ್ದಾರೆ.

ಯಾವಾಗಲೂ, ಹುಡುಕಿಕೊಂಡು ಹೋಗಿ ಸಿಎಂ ಸಿದ್ದರಾಮಯ್ಯನವರ ಏನಾದರೊಂದು ಹೇಳಿಕೆಗೆ ಟಾಂಗ್ ನೀಡುತ್ತಿದ್ದ ಪ್ರತಾಪ್ ಸಿಂಹ ಇದೀಗ ಈ ರೀತಿ ಪ್ರತಿಕ್ರಿಯಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಸೈದ್ಧಾಂತಿಕವಾಗಿ ಮಾತ್ರ ಸಿದ್ದರಾಮಯ್ಯನವರನ್ನು ನಾನು ವಿರೋಧಿಸುವುದಾಗಿ ಅವರು ಹೇಳಿದ್ದಾರೆ.

Leave A Reply

Your email address will not be published.