Bengaluru: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಹೆದುರಿಸುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು : ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕಿದ್ದ ಅಫಾನ್ ಅಹ್ಮದ್ ಎಂಬಾತನನ್ನು ಭಾರತಿ ನಗರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Parliament Election: ಪಿಸ್ತೂಲ್ ತಪಾಸಣೆಯ ವೇಳೆ ಅಚಾತುರ್ಯ : ಠಾಣಾ ಬರಹಗಾರನ ಕಾಲಿಗೆ ಗುಂಡು
ಖಾಸಗಿ ವೀಡಿಯೊಗಳು ಮತ್ತು ಫೋಟೋಗಳನ್ನು ಬಳಸಿಕೊಂಡು ಅಹ್ಮದ್ ಎಂಬಾತ ಪರಿಚಯಸ್ಥ ಯುವತಿಯಿಂದ 1.28 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: Madhyapradesh: ವಿವಾದಿತ ಭೋಜಶಾಲಾ ಸಂಕೀರ್ಣ ಸಮೀಕ್ಷೆ ಪ್ರಾರಂಭಿಸಿದ ಪುರಾತತ್ವ ಇಲಾಖೆ
26 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಇಬ್ಬರು ಕಳೆದ ಆಗಸ್ಟ್ನಲ್ಲಿ ಮದುವೆಯೊಂದರಲ್ಲಿ ಪರಿಚಯವಾಗಿದ್ದು ಕ್ರಮೇಣ ಸ್ನೇಹವಾಗಿ ಬೆಳೆಯಿತು. ಆದಾಗ್ಯೂ, ಆಕೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಆಕೆಗೆ ಕಿರುಕುಳ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಭಯಭೀತರಾದ ಆ ಯುವತಿ ಆತನಿಗೆ ಬೇಡಿಕೆಯ ಮೊತ್ತವನ್ನು ನೀಡಿದ್ದಾರೆ.
ಸುಲಿಗೆಯ ಬಗ್ಗೆ ತಿಳಿದ ನಂತರ , ಯುವತಿಯ ಸಹೋದರರು ಅಹ್ಮದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖರಿಸಿದ್ದಾರೆ. ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಅವರೊಂದಿಗೆ ಸಂಬಂಧ ಹೊಂದಿದ್ದನೆಂದು ಹೇಳಿಕೊಂಡಿದ್ದ ಅಹ್ಮದ್ನನ್ನು ಅಧಿಕಾರಿಗಳು ಬಂಧಿಸಿದ್ದು ,ಇದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ.